ಶಿವಬಸವ ಶ್ರೀಗಳ ಇಚ್ಛಾಶಕ್ತಿಯನ್ನು ಸಿದ್ಧರಾಮ ಶ್ರೀಗಳು ಕ್ರಿಯಾಶಕ್ತಿಯನ್ನಾಗಿ ಪರಿವತರ್ಿಸಿದರು: ಮಹಾಂತದೇವರು

ಲೋಕದರ್ಶನ ವರದಿ

ಬೆಳಗಾವಿ 06: ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳವರ ಕರಕಮಲ ಸಂಜಾತರಾದ ಕನ್ನಡ ನಾಡಿಗೆ'ನಾಗನೂರು ಸ್ವಾಮಿಗಳೆಂದು' ಪ್ರಸಿದ್ಧರಾದ ಶಿವಬಸವ ಮಹಾಸ್ವಾಮಿಗಳು ತಮ್ಮ ತಪಸ್ಸಿನಿಂದ ಚಾರಿತ್ರ್ಯ ಶುದ್ಧಿ, ಲಿಂಗ ಪೂಜಾನಿಷ್ಠೆಯಿಂದ ಶಿವಯೋಗ ಸಿದ್ದಿ. ಬಸವ ತತ್ವದಿಂದ ಸಮಾಜ ಸೇವಾ ಬುದ್ಧಿಯನ್ನು ಬೆಳೆಸಿಕೊಂಡು, ಬೆಳಗಾವಿ ಮಹಾನಗರದಲ್ಲಿ ಪ್ರಸಾದ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವದರ ಮೂಲಕ ಅನ್ನದಾಸೋಹ, ಜ್ಞಾನದಾಸೋಹ, ಸಂಸ್ಕಾರದಾಸೋಹವನ್ನು ಸಮಾಜದ ಜನತೆಗೆ ಕರುಣಿಸಿ ತ್ರಿವಿಧ ದಾಸೋಹಿಗಳಾಗಿದ್ದಾರೆ. ಸಮಾಜ ಬದಲಾವಣೆ ಮಾಡಿದ ಕ್ರಾಂತಿ ಪುರುಷರಾಗಿದ್ದಾರೆ. ಇವರಿಂದ ನಾಗನೂರುಮಠ ನಾಡಗುರುವಿನ ಮಠವಾಯಿತು ಎಂದು ಶೇಗುಣಿಸಿ ವಿರಕ್ತಮಠದ ಉತ್ತರಾಧಿಕಾರಿಗಳಾದ ಮಹಾಂತದೇವರು ಉಪನ್ಯಾಸ ನೀಡಿದರು. 

ಬೆಳಗಾವಿಯ ಶ್ರೀಕಾರಂಜಿಮಠದಲ್ಲಿ 220ನೇ ಶಿವಾನುಭವ ಕಾರ್ಯಕ್ರಮದ ಅಂಗವಾಗಿ ನಡೆದ "ನಾಗನೂರ ಅಜ್ಜನವರ ಸಮಾಜ ಸೇವೆ" ಕುರಿತು ಮಾತನಾಡುತ್ತಾ ಮೇಲಿನಂತೆ ಪ್ರಸಾದವಾಣಿ ಕರುಣಿಸಿದರು.

ಈ ಸಮಾರಂಭದ ಪಾವನ ಸಾನಿಧ್ಯವಹಿಸಿದ್ದ ಶ್ರೀಮಠದ ಒಡೆಯರಾದ ಗುರುಸಿದ್ಧ ಮಹಾಸ್ವಾಮಿಗಳವರು ಆಶೀರ್ವಚನ ಕರುಣಿಸುತ್ತಾ ಪ್ರತಿವರ್ಷ ಡಿಸೆಂಬರ ಮೊದಲನೇ ಸೋಮವಾರದಂದು ನಮ್ಮ ಕಾರಂಜಿಮಠದಲ್ಲಿ ನಾಗನೂರು ಅಜ್ಜನವರ ಜಯಂತಿಯನ್ನು ಆಚರಿಸುತ್ತೇವೆ. ಶಿವಬಸವ ಸ್ವಾಮಿಗಳು, ಪ್ರಭುಸ್ವಾಮಿಗಳಿಬ್ಬರೂ ನಮಗೆ ಗುರುಗಳಿದ್ದಂತೆ, ಇವರಿಬ್ಬರ ಇಚ್ಚಾಶಕ್ತಿಯನ್ನು ಕ್ರಿಯಾಶಕ್ತಿಯನ್ನಾಗಿ ಪರಿವತರ್ಿಸಿ, ರುದ್ರಾಕ್ಷಿಮಠದ ಶಿಕ್ಷಣ ಸಂಸ್ಥೆಗಳನ್ನು ವಿಸ್ತಾರೋನ್ನತವಾಗಿ ಬೆಳೆಸಿದವರು ಜಗದ್ಗುರುಡಾ. ಸಿದ್ಧರಾಮ ಮಹಾಸ್ವಾಮಿಗಳವರು ಎಂದುಕಾರಂಜಿಮಠದ ಶ್ರೀಗಳು ಪ್ರಸಾದವಾಣಿ ಕರುಣಿಸಿದರು. ಶಿವಯೋಗಿ ದೇವರು ನೇತೃತ್ವವಹಿಸಿದ್ದ ಈ ಸಮಾರಂಭದಲ್ಲಿ ಸಾಹಿತ್ಯ ಸಾಧನೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಮಣಶ್ರೀ ಪ್ರಶಸ್ತಿ ಪುರುಷ್ಕೃತರಾದ ಉದಯೋನ್ಮುಖ ಸಾಹಿತಿ ಪ್ರಕಾಶಗಿರಿ ಮಲ್ಲನವರನ್ನು ಶ್ರೀಗಳು ಸನ್ಮಾನಿಸಿದರು.

ಬೆಳಗಾವಿಯ ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಶರಣಶ್ರೀ ಶಶಿಭೂಷಣ ಪಾಟೀಲರವರು ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಶ್ರೀಕಾರಂಜಿಮಠದ ಸಮಾಜಸೇವಾ ಕಾರ್ಯಕ್ರಮಗಳನ್ನು ಅಭಿಮಾನದಿಂದ ಪ್ರಶಂಸಿಸಿ, ನಾನು ಜೀವನದಲ್ಲಿ ಪ್ರಗತಿಯಾಗಬೇಕಾದರೆ ಶ್ರೀಮಠದ ಶ್ರೀಗಳ ಆಶೀವರ್ಾದವೇ ಕಾರಣಎಂದು ಸ್ಮರಿಸಿದರು.

ಪ್ರೊ. ವಿ. ಬಿ. ದೊಡಮನಿ ಸ್ವಾಗತ, ಪ್ರೊ. ಶ್ರೀಕಾಂತ ಶಾನವಾಡ ಅತಿಥಿ ಪರಿಚಯ, ಪ್ರೊ. ಎ. ಕೆ. ಪಾಟೀಲ ನಿರೂಪಣೆ, ವಿ. ಕೆ. ಪಾಟೀಲ ಶರಣು ಸಮರ್ಪಣೆ ಮಾಡಿದರು.