ಬಾವೂರ ಗ್ರಾಪಂ ಅಧ್ಯಕ್ಷರಾಗಿ ಸಿದ್ದನಗೌಡ ಪಾಟೀಲ ಅವಿರೋಧ ಆಯ್ಕೆ

Siddanagowda Patil was elected unopposed as the President of Bavoora Gramam

ಬಾವೂರ ಗ್ರಾಪಂ ಅಧ್ಯಕ್ಷರಾಗಿ ಸಿದ್ದನಗೌಡ ಪಾಟೀಲ ಅವಿರೋಧ ಆಯ್ಕೆ  

ತಾಳಿಕೋಟಿ, 06;  ತಾಲೂಕಿನ ಬಾವೂರ ಗ್ರಾಮ ಪಂಚಾಯತ ಇದರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೂಚಬಾಳ ಗ್ರಾಮದ ಸಿದ್ದನಗೌಡ ಬಸನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ತೆರವಾದ ಈ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಸಿದ್ದನಗೌಡ ಬಸನಗೌಡ ಪಾಟೀಲ ಅವರೊಬ್ಬರೇ ನಾಮಪತ್ರ ಸಲ್ಲಿಸಿ, ಬೇರಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾ ಧಿಕಾರಿಯೂ ಆದ ತಾಲೂಕು ಪಂಚಾಯತ್ ಇಒ ನಿಂಗಪ್ಪ ಮಸಳಿ ಅವರು ಸಿದ್ದನಗೌಡ ಬಸನಗೌಡ ಪಾಟೀಲ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.  

   ಒಟ್ಟು 16 ಜನ ಸದಸ್ಯರ ಬಲ ಹೊಂದಿರುವ ಬಾವೂರ ಗ್ರಾಮ ಪಂಚಾಯತ್ ನ ಈ ಚುನಾವಣೆಯಲ್ಲಿ 12 ಜನ ಸದಸ್ಯರು ಹಾಜರಾಗಿ 4 ಜನ ಸದಸ್ಯರು ಗೈರು ಹಾಜರಾಗಿದ್ದರು. ತಾಪಂನ ಮಹಾಂತಗೌಡ ದೊರಗೋಳ, ಬಸನಗೌಡ ಚೌಧರಿ, ಪಿಡಿಒ ಪ್ರಭು ಚನ್ನೂರ,ಕಾರ್ಯದರ್ಶಿ ಮುದಕಪ್ಪ ಬಡಿಗೇರ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.  

ವಿಜಯೋತ್ಸವ: ಅಧ್ಯಕ್ಷರ ಆಯ್ಕೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಅವರ ಅಪಾರ ಬೆಂಬಲಿಗರು ಸೇರಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ವೇ.ಮೂ. ಗುರುಸಿದ್ದಯ್ಯ ಹಿರೇಮಠ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ (ಕೂಚಬಾಳ), ಬಸನಗೌಡ ಪಾಟೀಲ, ಶ್ರೀಕಾಂತಗೌಡ ಬಿರಾದಾರ, ಬಾಪುಗೌಡ ಪಾಟೀಲ, ಭೀಮನಗೌಡ ಪಾಟೀಲ, ಸಂತೋಷ ಗುರಡ್ಡಿ, ಬಸನಗೌಡ ಬಂಟನೂರ, ಸುರೇಶ್ ಕುಪ್ಪಿ, ರಾಮನಗೌಡ ಬಿರಾದಾರ, ಚಿನ್ನಪ್ಪ ಗೌಡ ನಾಡಗೌಡರ, ಶಂಕರ ಆಸಂಗಿ ಗ್ರಾಪಂ ಮಾಜಿ ಅಧ್ಯಕ್ಷೆ ಶಾಂತಾ ಎಂ.ಹಡಪದ, ಬಾಬು ಭಜಂತ್ರಿ, ಶೈನಾಜಬೇಗಮ್ ಕಮತಗಿ, ಹಿರಿಗವ್ವ ಭಜಂತ್ರಿ, ಮರಿಲಿಂಗವ್ವ ಎಸ್ ಮೇಟಿ, ಚೆನ್ನಮ್ಮ ಹಿರೇಮಠ, ದೇವಮ್ಮ ಮಾದರ, ಸೋಮು ಕಾಮರೆಡ್ಡಿ, ಮುತ್ತಣ್ಣ ಕುಂಬಾರ, ನಂದುಬಾಯಿ ಪವಾರ, ಲಕ್ಷ್ಮಿ ವಾಲಿಕಾರ, ಮುಖಂಡರು ಹಾಗೂ ಅಭಿಮಾನಿಗಳು ಇದ್ದರು.