ಲೋಕದರ್ಶನ ವರದಿ
ಕೊಪ್ಪಳ 21: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಗಲಿಕೆಯಿಂದ ಕರುನಾಡು ಅನಾಥವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ಪಾಟೀಲ್ ಹಲಗೇರಿ ಸಂತಾಪ ಸೂಚಿಸಿ ಮಾತನಾಡಿದರು.
ಅವರು ಬಿಜೆಪಿ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಿದ್ದಗಂಗಾ ಶ್ರೀಗಳ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇವಲ ಒಂದು ಮಠದ ಸ್ವಾಮೀಜಿಯಾಗಿರದೆ, ನಾಡಿನ ಅದಮ್ಯ ಚೇತನವಾಗಿದ್ದ ಶ್ರೀಗಳ ಅಗಲಿಗೆ ಅವರ ಭಕ್ತವರ್ಗ ಕಂಬನಿ ಮಿಡಿದಿದೆ. 111 ವರ್ಷಗಳ ಕಾಲ ಬದುಕಿದ್ದ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹದ ಮೂಲಕ ಜಗದ್ವಿಖ್ಯಾತಿ ಗಳಿಸಿದವರು. ಅವರ ಜೀವನ ಸಾಧನೆಗೆ ರಾಜ್ಯದಲ್ಲಿ ಅಷ್ಟೇ ಅಲ್ಲದೇ, ಇಡೀ ದೇಶವ್ಯಾಪಿ ಅವರು ಅಪಾರ ಗೌರವಾದರಗಳಿಗೆ ಪಾತ್ರರಾದವರು. ಮಾನವೀಯವೂ, ವೈಚಾರಿಕವೂ ಆದ ವಿಚಾರಧಾರೆಯ ಮೂಲಕ 12ನೇ ಶತಮಾನದ ಬಸವಾದಿ ಶರಣರು ವ್ಯಕ್ತಿಕಲ್ಯಾಣ ಹಾಗೂ ಸಮಾಜ ಕಲ್ಯಾಣಕ್ಕೆ ನಾಂದಿ ಹಾಡಿದುದು ಇತಿಹಾಸ. ಕಾಯಕ, ದಾಸೋಹ, ಸಮಾನತೆಗಳ ಮೂಲಕ ಸಮಾಜ ಕಲ್ಯಾಣದ ಕನಸನ್ನು ಹೊಂದಿದ್ದ ಶರಣರು, ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಸಿದ್ಧಾಂತಗಳ ನೆಲೆಯಲ್ಲಿ ವ್ಯಕ್ತಿಕಲ್ಯಾಣವನ್ನು ಸಾಧಿಸಬಯಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಬುಲೆಟ್ ಯರ್ಾಲಿಯ ಶಕ್ತಿ ಯಾತ್ರೆಯ ರೂವಾರಿ ರಾಜಲಕ್ಷ್ಮಿ ಮಂದ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ್ ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ, ನಗರಸಭಾ ಸದಸ್ಯರಾದ ರಾಜಶೇಖರ್ ಆಡೂರ, ವಿದ್ಯಾ ಹೆಸರೂರು, ಮಹಿಳಾ ಮೋಚರ್ಾ ಜಿಲ್ಲಾಧ್ಯಕ್ಷೆ ಮಧುರಾ ಕರಣಂ, ಪ್ರಧಾನ ಕಾರ್ಯದಶರ್ಿಗಳಾದ ಶೋಭಾ ನಗರಿ, ಹೇಮಲತಾ ನಾಯಕ್, ನಗರ ಅಧ್ಯಕ್ಷ ಸುನೀಲ್ ಹೆಸರೂರು, ಮುಖಂಡರಾದ ಎಂ ವಿ ಪಾಟೀಲ್, ಹಾಲೇಶ್ ಕಂದಾರಿ, ದೇವರಾಜ ಹಾಲಸಮುದ್ರ, ವೀಣಾ ಬನ್ನಿಗೋಳ, ವಾಣಿಶ್ರೀ ಮಠದ, ಉಮೇಶ್ ಕುರುಡೇಕರ, ರವಿಚಂದ್ರ ಮಾಲಿಪಾಟೀಲ್, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಉಪಸ್ಥಿತರಿದ್ದರು