ಕಿನ್ನಾಳ ಗ್ರಾ ಪಂ ಅಧ್ಯಕ್ಷರ ಚುನಾವಣೆ ಶ್ವೇತಾ ಡಂಬಳಗೆ ಗೆಲುವು
ಕೊಪ್ಪಳ 25: ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯ ಉಳಿದ ಸುಮಾರು ಒಂದು ವರ್ಷ ಅಧಿಕಾರ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ದಂದು ಜರುಗಿದ ಚುನಾವಣೆಯಲ್ಲಿ ಮೂರನೇ ವಾರ್ಡಿನ ಸದಸ್ಯರಾದ ಶ್ವೇತಾ ರಾಘವೇಂದ್ರ ಡಂಬಳ ರವರು ಗೆಲವು ಸಾಧಿಸುವುದರ ಮೂಲಕ ಕಿನ್ನಾಳ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಒಟ್ಟು 25 ಸ್ಥಾನ ಹೊಂದಿದ ಪಂಚಾಯಿತಿ ಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಕರಿಯಮ್ಮ ಮಲ್ಲಪ್ಪ ಉಪ್ಪಾರ್ ರವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವುಗೊಂಡಿದ್ದ ಅಧ್ಯಕ್ಷರ ಸ್ಥಾನಕ್ಕೆ ಶ್ವೇತಾ ರಾಘವೇಂದ್ರ ಡಂಬಳ್ ಮತ್ತು ಶಕುಂತಲಾ ಚಂದ್ರಶೇಖರ್ ಬನ್ನಿಕೊಪ್ಪ ರವರ ನಡುವೆ ಚುನಾವಣೆ ನಡೆದು ಶ್ವೇತಾ ಡಂಬಳ್ ಗೆ 19 ಮತ ಲಭಿಸಿದರೆ ಪರಾಜಿತಗೊಂಡ ಅಭ್ಯರ್ಥಿ ಶಕುಂತಲಾ ಬನ್ನಿಕೊಪ್ಪಾಗೆ ಕೇವಲ ಆರು ಮತ ಲವಿಸಿದೆ ,ಕೊಪ್ಪಳ ತಹಶೀಲ್ದಾರ್ ವಿಠಲ್ ಚೌಗಲ ರವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನೂತನ ಅಧ್ಯಕ್ಷರ ಘೋಷಣೆ ಮಾಡಿದ್ದಾರೆ,
ಈ ಸಂದರ್ಭದಲ್ಲಿ ಕಿನ್ನಾಳ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ದುರ್ಗಪ್ಪ ಡಂಬರ ,ಪಿ ಡಿ ಓ ಪರಮೇಶ್ವರಯ್ಯ ತಳಗಡೇ ಮಠ, ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರು ಇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು ನಂತರ ಸದಸ್ಯರು ಅಭಿಮಾನಿಗಳು ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಿ ಶುಭ ಕೋರಿದರು.