ನಾಳೆ ಕೊಪ್ಪಳಕ್ಕೆ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಗಮನ
ಕೊಪ್ಪಳ 05: ದಿನಾಂಕ 7 ಮತ್ತು 8 ಮಾರ್ಚ 2025 ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಕೊಪ್ಪಳ ನಗರಕ್ಕೆ ಆಗಮಿಸುವರು ಎಂದು ಶಂಕರ ಸೇವಾ ಸಮಿತಿ ಟ್ರಸ್ಟಿನ ಅಧ್ಯಕ್ಷ ಕೃಷ್ಣ ಪದಕಿ ಹೇಳಿದರು.ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊಪ್ಪಳ ನಗರಕ್ಕೆ ವಿಜಯಯಾತ್ರೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಕೊಪ್ಪಳ ನಗರಕ್ಕೆ ದಿ. 7 ಮತ್ತು 8 ಮಾರ್ಚ ರಂದು ಆಗಮಿಸುವರು.
ಕೊಪ್ಪಳ ನಗರಕ್ಕೆ ಪುರ್ರವೇಶ ಮಾಡುವ ಮುನ್ನ ದಿ. 07ರಂದು ಸಂಜೆ 6-30ಕ್ಕೆ ಶೋಭಾಯಾತ್ರೆ ಜರುಗಲಿದ್ದು, ಶೋಭಾಯಾತ್ರೆಯು ಹೊಸಪೇಟೆ ರಸ್ತೆಯ ಶ್ರೀ ಈಶ್ವರ ಪಾರ್ಕನಿಂದ ಪ್ರಾರಂಭವಾಗಿ ಅಶೋಕ ಸರ್ಕಲ್ ಮುಖಾಂತರ ಕಿನ್ನಾಳ ರಸ್ತೆಯ ಪ್ರವಾಸಿ ಮಂದಿರ ಹತ್ತಿರವಿರುವ ಸತ್ಯಧ್ಯಾನಪುರ ಬಡಾವಣೆಯ ವಾಸವಿ ಮಂಗಲ ಭವನದ ವರೆಗೆ ಶೋಭಾಯಾತ್ರೆ ಮುಕ್ತಾಯಗೊಳ್ಳುತ್ತದೆ.
ನಂತರ ಶ್ರೀ ಗಳಿಂದ ಆಶೀರ್ವಚನ ಹಾಗೂ ಶ್ರೀ ಚಂದ್ರಮೌಳೇಶ್ವರ ಪೂಜೆ ದಿ. 8 ಮಾರ್ಚ 10 ಗಂಟೆಗೆ ನೂತನ ಶಂಕರ ಮಠದ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ತಿಳಿಸಿದರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಶಂಕರ ಸೇವಾ ಸಮಿತಿ ಟ್ರಸ್ಟಿನ ಉಪಾಧ್ಯಕ್ಷ ವೆಂಕಟೇಶ್ ಜೋಶಿ, ಕಾರ್ಯದರ್ಶಿ ರವಿ ಪುರೋಹಿತ, ಖಜಾಂಚಿ ಶ್ರೀನಿವಾಸ್ ಅಶ್ವಥಪುರ, ವಿಜಯ್ ಕುಮಾರ್ ಪದಕಿ, ವೆಂಕಟೇಶ್ ಪದಕಿ, ಸುರೇಶ್ ನಾಡಗೇರಿ, ಸುರೇಶ್ ಗುಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.