ಲೋಕದರ್ಶನ ವರದಿ
ವಿಜಯಪುರ 02:ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧರ್ಮಕಾರ್ಯಗಳಿಗೆ ಸೀಮಿತವಾಗಿರದೇ ಅನೇಕ ಪ್ರಗತಿಪರ ಸಾಮಾಜಿಕ ಯೋಜನೆಗಳಿಂದ ಯುವಜನತೆ ಮತ್ತು ಮಹಿಳಾ ವರ್ಗಕ್ಕೆ ತುಂಬ ಅನುಕೂಲಕರವಾದ ಪರಿಸರವನ್ನು ನಿಮರ್ಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯೋಜನಾ ಜಿಲ್ಲಾ ನಿದರ್ೇಶಕರಾದ ಶ್ರೀನಿವಾಸ ಪೂಜಾರಿ ಹೇಳಿದರು.
ವಿಜಯಪುರ ತಾಲೂಕಿನ ಘೋಣಸಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯೋಜನೆ ಸಂಸ್ಥೆ, ಘೋಣಸಗಿಯ ಪ್ರಗತಿಬಂಧು ಮಹಿಳಾ ಸ್ವಸಹಾಯ ಸಂಘ ಹಾಗೂ ನವಜೀವನ ಯುವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಶ್ರದ್ಧಾಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರ ಎರಡನೇ ಮದ್ಯ ವರ್ಜನ ವಷರ್ಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಬಹುದೊಡ್ಡ ಸಂಸ್ಥೆಯೊಂದು ಧಾಮರ್ಿಕ ಕ್ಷೇತ್ರಗಳ ಸ್ವಚ್ಛತೆ ಕುರಿತು ನಡೆಸಿದ ಸಮೀಕ್ಷೆಯ ಪ್ರಕಾರ ಧರ್ಮಸ್ಥಳದ ಕ್ಷೇತ್ರ ಭಾರತದ ಸ್ವಚ್ಛ ಧಾಮರ್ಿಕ ಕ್ಷೇತ್ರ ಎಂಬ ಪ್ರಶಸ್ತಿ ಭಾಜನವಾಗಿದೆ. ಇದರ ಪ್ರೇರಣೆಯಿಂದ ಶ್ರೀ ಕ್ಷೇತ್ರದ ಧಮರ್ಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ರಾಜ್ಯದ ಎಲ್ಲ ಗ್ರಾಮ ನಗರ ಪಟ್ಟಣಗಳ ಧಾಮರ್ಿಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲು ಆಶಯ ವ್ಯಕ್ತಪಡಿಸಿದ ಪರಿಣಾಮ ಇಂದು ಎಲ್ಲೆಡೆ ವಾರಕ್ಕೆರಡು ದಿನ ಸ್ವಚ್ಛತೆ ಕಾರ್ಯಕ್ರಮವನ್ನು ಸಂಸ್ಥೆ ಹಮ್ಮಿಕೊಳ್ಳುತ್ತಿದೆ. ಈ ಪರಿಣಾಮ ಜನರಲ್ಲಿ ಧರ್ಮ ದೇವರು ಮತ್ತು ಪರಿಸರ, ಸಾಮಾಜಿಕ ಚಿಂತನೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಂಸ್ಥೆಯ ತಾಲೂಕಾ ಯೋಜನಾ ನಿದರ್ೇಶಕರಾದ ಕೆ.ಪಿ.ನಾಗರಾಜ ಮಾತನಾಡಿ, ನಾವು ನಮ್ಮ ಊರಿನ ಶ್ರದ್ಧಾಕೇಂದ್ರಗಳನ್ನು ವರ್ಷಕ್ಕೆ ಎರಡು ಬಾರಿ ಸಾಮೂಹಿಕವಾಗಿ ಸ್ವಚ್ಛಗೊಳಿಸುವ ಸಂಪ್ರದಾಯವನ್ನು ಬೆಳೆಸಿಕೊಂಡರೇ ಪ್ರತಿವರ್ಷವು ಅದು ರೂಢಿಗತವಾಗುತ್ತದೆ ಇದರಿಂದ ನಾವೇ ಮಾಲಿನ್ಯ ಹೋಗಲಾಡಿಸಿದರೆ ನಮ್ಮ ಗ್ರಾಮಗಳು ಪರಿಸರ ಮಾಲಿನ್ಯದಿಂದ ಮುಕ್ತವಾಗುತ್ತವೆ. ಈ ಕಾರಣದಿಂದ ಪ್ರತಿ ವರ್ಷವೂ ಎರಡು ಬಾರಿ ಎಲ್ಲ ಧಾಮರ್ಿಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯ ನಿರಂತರವಾಗಿ ಮುಂದುವರೆಯಲಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮಗಳ ಸ್ವಹಾಯ ಸಂಘಗಳ ಸದಸ್ಯರು ಸ್ವಯಂ ಪ್ರೇರಣೆಯಿಂದ ಈ ಕಾರ್ಯ ನಡೆಸಿಕೊಡಲು ವಿನಂತಿಸಿದರು.
ಅತಿಥಿಗಳಾಗಿದ್ದ ಪ್ರಗತಿಪರ ಹೋರಾಟಗಾರ ಪ್ರಕಾಶ ಕುಂಬಾರ ಮಾತನಾಡಿ, ಪ್ರಪಂಚದಲ್ಲಿ ಸ್ತ್ರೀ ಎನ್ನುವ ಪದವು ದೊಡ್ಡದು ವಾತ್ಸಲ್ಯ ಮಮತೆ, ಸಹನೆ ಶಾಂತಿ ಮತ್ತು ತ್ಯಾಗದ ಪ್ರತಿರೂಪವೇ ತಾಯಿ. ಅದಕ್ಕಾಗಿಯೇ ಅವಳನ್ನು ಭೂಮಿ ತೂಕಕ್ಕೆ ಹೋಲಿಸಿರುವುದು. ಭೂತಾಯಿಯ ಮಡಿಲಲ್ಲಿ ಜನಿಸಿದ ನಾವುಗಳು ಇಂದು ಅವಳ ಉಪಕಾರವನ್ನು ಅರಿಯದೇ ಅವಳಿಗೆ ಅಪಚಾರ ಎಸಗುತ್ತಿದ್ದೇವೆ. ಇಂದು ನಾವು ನಮಗೆ ಬೇಕು ಬೇಡದನ್ನು ಪಡೆಯುವುದೇ ಈ ಭೂತಾಯಿಯ ಮಡಿಲಿನಿಂದ ಮತ್ತೆ ನಾವು ಇದೇ ಭೂಮಿಯಲ್ಲಿ ಮಣ್ಣಾಗಬೇಕು ಇಷ್ಟಿದ್ದರೂ ನಮ್ಮ ಸ್ವಾರ್ಥಕ್ಕೆ ಭೂತಾಯಿಯ ಒಡಲನ್ನು ಮಲೀನಗೊಳಿಸುತ್ತಿದ್ದೇವೆ. ಈ ಕಾರ್ಯವನ್ನು ನಿಲ್ಲಿಸಿ ನಮ್ಮ ಭೂತಾಯಿ ಋಣವನ್ನು ತೀರಿಸಲು ಪಣ ತೊಡಗಬೇಕು ಎಂದರು.
ಧರ್ಮಸ್ಥಳ ಸಂಸ್ಥೆಯು ರಾಜ್ಯಾದ್ಯಂತ ಮದ್ಯ ವರ್ಜನ ಶಿಬಿರಗಳನ್ನು ಏರ್ಪಡಿಸುತ್ತಿದ್ದು, ಈ ಶಿಬಿರದ ಪ್ರಯೋಜನ ಪಡೆದುಕೊಂಡ ಗ್ರಾಮದ 12 ಜನರು 2ನೇ ವಾಷರ್ಿಕ ದಿನಾಚರಣೆಯನ್ನು ಆಚರಿಸಿಕೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಲ್ಲದೇ ನಾವು ಸಾಮೂಹಿಕವಾಗಿ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಮದ್ಯವ್ಯಸನಿ ಯುವಕರಿಗೆ ನಮ್ಮ ಅನುಭವಗಳನ್ನು ತಿಳಿಸಿ ಅವರನ್ನು ಸಹ ಮದ್ಯವ್ಯಸನದಿಂದ ದೂರಮಾಡುವ ಸಾಮಾಜಿಕ ಕಾರ್ಯದಲ್ಲಿ ತೊಡಗುತ್ತೇವೆ ಎಂದು ಪ್ರತಿಜ್ಞೆ ಕೈಗೊಂಡರು.
ಗ್ರಾಪಂ ಅಧ್ಯಕ್ಷರಾದ ರಾಜಶ್ರೀ ಸೋಮಲಿಂಗ, ರಮೇಶ ಭಜಂತ್ರಿ, ಶ್ರೀಶೈಲ ದೊಡಮನಿ, ಚನಮಲ್ಲಯ್ಯ ಜಮಖಂಡಿ, ಭೀಮಣ್ಣ ಹೊಸಮನಿ, ಸಿದ್ದು ಕಂಠಿ ಇದ್ದರು. ಸಂಸ್ಥೆಯ ಹೊನವಾಡ ವಲಯದ ಮೇಲ್ವಿಚಾರಕರಾದ ಕೇಶವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮತ್ತು ನವಜೀನವ ಸಮಿತಿಯ ಸದಸ್ಯರು ಘೋಣಸಗಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.