ಶ್ರೀ ಕೃಷ್ಣ ಜಯಂತಿ ಜಿಲ್ಲಾಡಳಿತದಿಂದ ಭಕ್ತಿ ನಮನ ಸಲ್ಲಿಕೆ

ಕೊಪ್ಪಳ 23: ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪವನ್ನು ಅಪರ್ಿಸಿ ಭಕ್ತಿ ನಮನ ಸಲ್ಲಿಸುವುದರ ಮೂಲಕ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ರಾಜ್ಯದಲ್ಲಿ ನೆರೆ ಹಾವಳಿ ಪ್ರಯುಕ್ತ ರಾಜ್ಯ ಮಟ್ಟದಲ್ಲಿ ಆಚರಿಸಲ್ಪಡುವ ಪ್ರಸಕ್ತ ಸಾಲಿನ ಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಅನುದಾನವನ್ನು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದರಿಂದ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರು ಸರಳವಾಗಿ ಜಯಂತಿ ಆಚರಿಸಲು ನಿದರ್ೇಶನ ನೀಡಿರುವ ಪ್ರಯುಕ್ತ ಕೃಷ್ಣ ಜಯಂತಿಯನ್ನು ಶುಕ್ರವಾರದಂದು ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಸ್ವಾತಂತ್ರ್ಯ ಹೋರಾಟಗಾರರಾದ ಸುಮಂತರಾವ್ ಪಟವಾರಿ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ  ಭಕ್ತಿ ನಮನ ಸಲ್ಲಿಸಿದರು.