ಶ್ರಾವಣ ಕೊನೆ ಸೋಮವಾರ: ಯಲ್ಲಮ್ಮಾ ದೇವಿಗೆ ವಿಶೇಷಾಲಂಕಾರ

ಸವದತ್ತಿ ಯಲ್ಲಮ್ಮ ದೇವಿ

ಲೋಕದರ್ಶನ ವರದಿ

ಉಗರಗೋಳ:  ಶ್ರಾವಣ ಮಾಸದ ನಿಮಿತ್ಯ ಶ್ರೀಕ್ಷೇತ್ರ ರೇಣುಕಾ ಯಲ್ಲಮ್ಮಾ ದೇವಿಗೆ ಕಡೆಯ ಸೋಮವಾರ ರಂದು ವಿಶೇಷ ಪೂಜೆ, ಅಲಂಕಾರ, ಹಾಗೂ ಅಭಿಷಕವನ್ನು ನೇರವೆರಿಲಾಯಿತು.

  ದೇವಸ್ಥಾನ ಕಾರ್ಯನಿರ್ವಾ ಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ ಶ್ರೀಕ್ಷೇತ್ರಕ್ಕೆ ಬರುವಂತ ಭಕ್ತರು ಶ್ರೀದೇವಿಯ ಪವಳಿಯಲ್ಲಿ ಎಲ್ಲೆಂದರಲ್ಲಿ ಕುಂಕುಮ ಬಂಡಾರ ಎಸೆಯದೆ ಸ್ವಚ್ಚತೆಯನ್ನು ಕಾಪಾಡಲು ಕೋರಿದರು. ಶ್ರಾವಣ ಮಾಸದಲ್ಲಿ ನಿರಂತರ ಒಂದು ತಿಂಗಲ ಕಾಲ ಶ್ರೀದೇವಿಗೆ ವಿಶೇಷ ಪೂಜೆ, ನಿತ್ಯ ಅಭಿಷಕ, ಅಲಂಕಾರ ಜರುಗುತ್ತಲಿದ್ದು ಅಮವಾಸ್ಯ ಎಂದು ಒಂದು ತಿಂಗಳ ಶ್ರಾವಣ ಮುಕ್ತಾಯಗೋಳ್ಳಲಿದೆ ಎಂದು ಹೇಳಿದರು.

   ಬೆಳಿಗ್ಗೆ ಶ್ರಾವಣ ಮಾಸದ ನಿಮಿತ್ಯ ಯಲ್ಲಮ್ಮನ ದರ್ಶನಕ್ಕೆ ಬರುವಂತ ಸಾವಿರಾರು ಭಕ್ತರಿಗೆ ಸ್ಥಳಿಯರು, ವ್ಯಾಪಾರಸ್ಥರು ಶ್ರೀಕ್ಷೇತ್ರದಲ್ಲಿ 3 ಕಡೆಗಳಲ್ಲಿ ಉಪಹಾರದ ಸೇವೆಯನ್ನು ಮಾಡಿದ್ದರು. 

 ಗದಗ ನಗರಸಭೆ ನಾಮನಿರ್ದೇಶಕ ಸಂಜು ಸಿಂದಿಗೇರಿ ದೇವಸ್ಥಾನ ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಜಿರಗಾಳ, ಕಿರಿಯ ಅಭಿಯಂತರ ಡಿ ಆರ್ ಚವ್ಹಾಣ,  ಆರ್ ಬಎಚ್ ಸವದತ್ತಿ, ಗೋವಿಂದರಾವ ಕುಲಕರ್ಣಿ , ಸದಾನಂದ ಈಟಿ, ಡಿ ಸಿ ಸೋರ್ಯವಂಶಿ, ವಿ ಪಿ ಸೊನ್ನದ, ಈರಣ್ಣಾ ಕುಲಕಣರ್ಣಿ , ಅನೀಲ ಗುಡಿಮನಿ, ಯಡೂರಯ್ಯ, ಮಂಜನಗೌಡ ಸಂದಿಮನಿ, ಪರಸನಗೌಡ ಕಾಳಿಂಗೌಡ್ರ, ವಿಶ್ವನಾಥ ಟೋಪಣ್ಣವರ, ರಾಜು ಪಾಟೀಲ, ರವಿ ಚುಳಕಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಇದ್ದರು.