ಫೆ.26ರಿಂದ ಮಾ.01ರ ವರೆಗೆ ನಡೆಯಲಿರುವ ಜಾತ್ರಾ ನಿಮಿತ್ಯ ಕಿರುಲೇಖನ
ತಾಂಬಾ 25 : ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋಭವ.ಉಕ್ತಿಸವಕಲಾಗಿ ಅದೊಂದು ಕ್ಲಿಷ್ಟಮಟ್ಟ ತಲಪಿರುವ ಈ ದಿನಗಳಲ್ಲಿ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಶಿಕ್ಷಕನನ್ನು ದೇವರೆಂದು ನಂಬಿ ಪೂಜಿಸುವುದು ಸಕಲ ಶಿಕ್ಷಕ ವರ್ಗಕ್ಕೆ ತರುವ ಅಭಿಮಾನ ಸಂಗತಿ.
ಹಾಗಾದರೆ ಒಮ್ಮೆ ನೋಡ ಬನ್ನಿ ಸುಂದರ ದೇಗುಲ ಆಳತ್ತರದ ಪಂಚಲೋಹದ ಮೂರ್ತಿ ಸಧಾನಂದಾ ದೀಪ ಪ್ರತಿನಿತ್ಯ ಎರಡು ಬಾರಿ ಪೂಜೆ ಭಕ್ತರನ್ನು ಕೈಬಿಸಿ ಕರೆಯುವ ಸುಂದರ ತಾಣ ಸುಕ್ಷೇತ್ರ ಅಥರ್ಗಾ ವಿಜಯಪುರ ಇಂಡಿ ಮಧ್ಯಭಾಗದಲ್ಲಿ ತಾಂಬಾ ಗ್ರಾಮದ ಹತ್ತಿರದ ಸುಕ್ಷೇತ್ರ ಅಥರ್ಗಾ ಇದೆ ಈ ಪೂಜ್ಯನಿಯರು ಮನಗೂಳಿಯ ಅವರಸಂಗ ಮನೆತನದ ಶಿವಪ್ಪ ಮತ್ತು ಲಕ್ಷಿಂಬಾಯಿ ಅವರ ಪುತ್ರರಾದ ರೇವಣಸಿದ್ದಪ್ಪ 1889 ಮೇ 26 ರಂದು ಜನ್ಮ ತಾಳಿದರು ಬಾಲ್ಯದ ಶಿಕ್ಷಣ ಮುಗಿಸಿ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅಥರ್ಗಾದಲ್ಲಿ ಸೇವೆಸಲ್ಲಿಸುತ್ತಾ ಶಿಕ್ಷಣ ಮಹಾಜ್ಯೋತಿ ಬೆಳಿಗಿಸಿದರು ಜ್ಯೋತೆಗೆ ಅಧ್ಯತ್ಮದ ಸನ್ಮಾರ್ಗದ ಆರ್ಶಿವಾದ ನೀಡಿದರು ದೇವರಲ್ಲಿ ನಂಬಿಕೆ ಇಟ್ಟವರು ದೇವರನ್ನು ಹುಡಿಕಿ ಕಂಡವರು ದೇವರನ್ನು ನಂಬಿ ಬದುಕಿದ ಮಹಾನುಭಾವರು ಜೀವೀತ ಕಾಲದಲ್ಲಿ ಅನೇಕ ಪವಾಡುಗಳನ್ನು ಮಾಡಿದ್ದಾರೆ ಮರಣ ನಂತರವು ಅನೇಕ ಪವಾಡ ಮಾಡಿರುವರು ಎಂದು ಪ್ರತಿತಿ ಇದೆ ಮರಣ ಹೊಂದಿದ ಮಗುವಿಗೆ ಮರುಜನ್ಮ ನೀಡಿದವರು ಪ್ರಸಾದದಲ್ಲಿ ಚೇಳ ಬಿದ್ದರೆ ಅಮೃತ ಮಾಡಿ ಉಂಡವರು ಹುಲಿಯಾಗಿ ನಿಂತವರು ಗೋಮೂತ್ರದಿಂದ ನಂದಾದೀಪ ಉರಿಸದವರು ಬಂಜಿಗೆ ಮಕ್ಕಳು ಕೊಟ್ಟವರು ಕಾಟಮಾಟ ಮಂತ್ರ ಭೂತ ಬಿಡಿಸಿದವರು ಜಾತಿ ಮತ ಮೇಲು ಕೀಳು ಎಂಬ ಭಾವವಿಲ್ಲದೆ ಸರ್ವರಿಗೂ ಲೇಸನ್ನೆ ಬಯಸಿದ ಮಹಾನುಬಾವರು ಇದು ಇಂದಿಗೂ ಪ್ರಚಲಿತ ಇವರ ಕೈಯಲ್ಲಿ ಶಿಕ್ಷಣ ಕಲಿತವರು ಮಾನವಂತರಾಗಿ ಬಾಳಿತೋರಿಸಿ ಗ್ರಾಮದ ಘನತೆ ಹೇಚ್ಚಿಸಿದ್ದಾರೆ ಈ ಮಹಿಮರು ಎಷ್ಟು ಪೂಜ್ಯನೀಯರೆಂದರೆ ಪ್ರತಿ ಮನೆಯ ಜಗುಲಿಯ ಮೇಲೆ ಇವರ ಭಾವಚಿತ್ರದ ಪೂಜೆ ಪ್ರತಿ ಮನೆಗಳಲ್ಲಿ ತಮ್ಮ ಮಕ್ಕಳಿಗೆ ರೇವಣಸಿದ್ದಪ್ಪನೆಂಬ ನಾಮಕರಣ ಪ್ರತಿಮನೆಯ ಬಾಗಿಲುಗಳ ಮೇಲೆ ಶ್ರೀಕಾರ ನಿತ್ಯ ಪ್ರಾಂತ ಕಾಲ ದರ್ಶನಾರ್ಶೀವಾದ ಪಡೆದ ನಂತರವೆ ನಿತ್ಯ ಕಾಯಕ ಇಂತಹ ಮಹಿಮಾಪುರುಷರು 1925 ಫೇಭ್ರವರಿ 23 ರಂದು ಶಿವನಲ್ಲಿ ಕೂಡಿ ಕೊಂಡರು ಜೀವತ ಕಾಲ ಕೇವಲ 36 ವರ್ಷ ಮಾತ್ರ. ಈ ಅಪ್ಪ ಬರಿ ಮಾಸ್ತಾರ ಆಗಿರಲ್ಲಿಲ್ರಿ ಊರದೇವರಾಗಿದ್ದು ಜನರನ್ನು ತಿದ್ದಿದ್ರು ದುಡಿಯಾಕ ಹಚ್ಚಿದ್ರು ಕತ್ತಲದ ಮನೆಯಲ್ಲಿ ದೀಪ ಹಚ್ಚಿದ್ರು ಎಂದು ಶಿಕ್ಷಕ ಎಚ್. ಎನ್. ಭಂಟನೂರ ಗುಣಗಾನ ಮಾಡುತ್ತಾರೆ. ಜಾತ್ರಾ ಕಾರ್ಯಕ್ರಮಗಳು: ದಿ.26ರಂದು ಶಿವರಾತ್ರೀ ಶಿವಯೋಗದಂದು ರಾತ್ರೀ ಕರ್ತೃ ಗದ್ದುಗೆಗೆ ಪಂಚಪೂಜೆ ನೇರವೆರುವದು ಅಂದು ರಾತ್ರೀ 9ಗಂಟೆಗೆ ಸಿದ್ದಾಪೂರದ ಕರಿದೇವಿ ನಾಟ್ಯಸಂಘದವರಿಂದ ಶ್ರೀಘತ್ತರಗಿ ಭಾಗ್ಯವಂತಿ ಮಾಹತ್ಮೆ ನಾಟಕ ಜರುಗುವದು, ದಿ.27 ರಂದು ಬೆಳಿಗ್ಗೆ ಕತೃಗದ್ದುಗಗೆ ರುದ್ರಾಭಿಷೇಕ, 12ಗಂಟೆಗೆ ಜಂಗಮರ ಆರಾಧನೆ ನಂತರ ಮಹಾಪ್ರಸಾದ ಜರುಗುವದು. ಸಂಜೆ 6ಗಂಟೆಗೆ ರೇವಣಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವವು ಬೀರಲಿಂಗೇಶ್ವರ ಢೋಳ್ಳಿನ ಸಂಘದವರ ಢೋಳ್ಳುಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯವೈಭವಗಳೋಂದಿಗೆ ಗ್ರಾಮದಲ್ಲಿ ಭವ್ಯಮೇರವಣಿಗೆ ಮಾಡಲಾಗುವದು ದಿ.28 ರಂದು ವಿಜಯಪುರದ ಗುರುರಾಘವೇಂದ್ರ ಮೇಲೋಡಿಸ್ ಅವರಿಂದ ರಾತ್ರೀ 8ಗಂಟೆಗೆ ರಸಮಂಜರಿ ಕಾರ್ಯಕ್ರಮ ಹಾಗೂ ಭರತನಾಟ್ಯ ಜರುಗುವದು. ದಿ.1 ರಂದು ರಾತ್ರೀ 9ಗಂಟೆಗೆ ಮೂತೈದಿಗೆ ಬಂದ ಕುತ್ತು ಸಾಮಾಜಿಕ ನಾಟಕ ಜರುಗಲಿದೆ ಅಂದು ಬೆಳಿಗ್ಗೆ ಭಾರ ಎತ್ತುವ ಸ್ಪರ್ಧೆ, 4ಗಂಟೆಗೆ ಧರ್ಮ ಸಭೆ ಹಾಗೂ 6ಗಂಟೆಗೆ ಲಕ್ಷ ದೀಪೋತ್ಸವ ಜರುಗಲಿದೆ ಧರ್ಮಸಭೆಯಲ್ಲಿ ಮುರಘೇಂದ್ರ ಮಾಹಾಸ್ವಾಮಿಗಳು, ಅಡವಿಲಿಂಗ ಮಾಹಾರಾಜರು, ಅಭೀನವ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ಸಂಸದ ರಮೇಶ ಜಿಗಜಿಣಗಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ನಾಗುಗೌಡ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.