ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಆಚರಣೆ

Shivayogi Siddarameshwar Jayantyotsava celebration


ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಆಚರಣೆ 

ಕಂಪ್ಲಿ 15: ಸಾಮಾಜಿಕ ಕ್ರಾಂತಿ ಹಾಗೂ ವಚನ ಸಾಹಿತ್ಯಕ್ಕೆ ಶಿವಯೋಗಿ ಸಿದ್ದರಾಮರ ಕೊಡುಗೆ ಅಪಾರ ಎಂದು ತಹಶೀಲ್ದಾರ್ ಶಿವರಾಜ ಶಿವಪುರ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿ ಮತ್ತು ವಡ್ಡರ ಭೋವಿ ಸಮಾಜದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. 

 ಭೋವಿ(ವಡ್ಡರ)ಸಮಾಜದ ಅಧ್ಯಕ್ಷ ಶಾಮಿನ್ ಶೇಖಪ್ಪ ಮಾತನಾಡಿ, ಶೈಕ್ಷಣಿಕ ಆರ್ಥಿಕ ಮತ್ತು ರಾಜಕೀಯ ವಾಗಿ ಹಿಂದುಳಿದ ಸಮುದಾಯವಾಗಿದೆ  ಭೋವಿ ಸಮುದಾಯದಕ್ಕೆ ಸರ್ಕಾರ ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಬೇಕು ಬಸವಣ್ಣ, ಗಾಂಧೀಜಿ, ಅಲ್ಲಮ ಪ್ರಭು, ಬುದ್ಧ ಇನ್ನೂ ಅನೇಕ ಮಹಾನ್ ವ್ಯಕ್ತಿಗಳು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಅಂಥವರಲ್ಲಿ ಶಿವಯೋಗಿ ಸಿದ್ದರಾಮರು ಕೂಡ ಒಬ್ಬರು. ಅವರು ಜ್ಞಾನವನ್ನು ಕೊಟ್ಟಿದ್ದಾರೆ. ಅರಿವನ್ನು ಮೂಡಿಸಿದ್ದಾರೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಗ್ರೇಡ್‌-2 ತಹಶೀಲ್ದಾರ್ ಷಣ್ಮುಕಪ್ಪ, ತಾಲೂಕು ಭೋವಿ ಸಂಘದ ಗೌರವಾಧ್ಯಕ್ಷ ವಿ.ಗೋವಿಂದರಾಜ, ಮುಖಂಡರಾದ ವಿ.ತಿಪ್ಪೇಸ್ವಾಮಿ, ವೆಂಕಟರಮಣ, ಗುರ‌್ರ​‍್ಪ, ನೀಲಕಂಠ, ಗೋವಿಂದಪ್ಪ, ಟಿ.ವೆಂಕಟರಮಣ, ಬಳ್ಳಾಪುರ ಮೌನೇಶ, ಷಣ್ಮುಕ, ವೆಂಕಟೇಶ, ವಿ.ಬಿ.ನಾಗರಾಜ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಇಲ್ಲಿನ ತಾಲೂಕು ಭೋವಿ ಸಂಘದ ಸಮುದಾಯ ಭವನದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.