ಶಿವಸ್ಫೂರ್ತಿ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ ಸಮಾರಂಭ
Shivaspurthi Mahashivratri Golden Music Festival Ceremony
ಧಾರವಾಡ 11: ನಗರದ ಮುದಿಮಾರುತಿ ಓಣಿಯ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ ಆಚರಣಾ ಸಮಿತಿಯು ಕುಮಾರೇಶ್ವರ ಕಲ್ಚರಲ್ ಸೊಸೈಟಿ(ರಿ)ಯ ಸಹಯೋಗದಲ್ಲಿ ದಿನಾಂಕ: 13 ಹಾಗೂ 14 ಫೆಬ್ರುವರಿ 2026ರಂದು ಸಂಜೆ 5ಕ್ಕೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಮತ್ತು ದಿನಾಂಕ: 15ರಂದು ಸಂಜೆ 6 ರಿಂದ ಅಹೋರಾತ್ರಿ ಸಂಗೀತೋತ್ಸವ ಸಾಧಕ ಶಿವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುದಿಮಾರುತಿ ದೇವಸ್ಥಾನದಲ್ಲಿ 50ನೇ ವರ್ಷದ ಶಿವಸ್ಫೂರ್ತಿ ಮಹಾಶಿವರಾತ್ರಿ ಸುವರ್ಣ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ಜರುಗುವ ಸಂಗೀತೋತ್ಸವದಲ್ಲಿ ನಾಡಿನ ಖ್ಯಾತ ಸಂಗೀತಗಾರರು ಪಾಲ್ಗೊಳ್ಳಲಿದ್ದು, ಇದೊಂದು ಹಿರಿಯ-ಕಿರಿಯ ಕಲಾವಿದರ ಸಮಾಗಮವಾಗಲಿದೆ.
ದಿನಾಂಕ: 13.02.2026ರಂದು ಸಂಜೆ 5ಕ್ಕೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ರುದ್ರೇಶ ಭಜಂತ್ರಿ ಹಾಗೂ ನಿಖಿಲ್ ಜೋಶಿ ಅವರ ಶಹನಾಯಿ ಮತ್ತು ಸಿತಾರ ಜುಗಲ್‌ಬಂದಿಗೆ ತಬಲಾದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿಕಲ್ಲೂರ, ವಿದುಷಿ ಆರತಿ ಅಂಕಲಿಕರ ಟಿಕೇಕರ ಅವರ ಗಾಯನಕ್ಕೆ ತಬಲಾದಲ್ಲಿ ಪಂ.ರವೀಂದ್ರ ಯಾವಗಲ್, ಶಿವಚಿತ್ರಗಾನದಲ್ಲಿ ರಾಧಾ ದೇಸಾಯಿ, ಸುಜಾತಾ ಗುರವ, ಭಾರ್ಗವಿ ಕುಲಕರ್ಣಿ, ಡಾ.ವೀಣಾ ಸವದತ್ತಿ, ಡಾ. ಅರ್ಚನಾ ಸುತಾರ ಸಹಕಲಾವಿದರಾಗಿ ತಬಲಾದಲ್ಲಿ ವಾದಿರಾಜ ದಂಡಾಪೂರ, ಪಖವಾಜದಲ್ಲಿ ಪ್ರಸಾದ ಮಡಿವಾಳರ, ಹಾರ್ಮೊನಿಯಂದಲ್ಲಿ ಡಾ.ಪರಶುರಾಮ ಕಟ್ಟಿಸಂಗಾವಿ ಪಾಲ್ಗೊಳ್ಳುವರು.
ಎರಡೂ ದಿನಗಳ ಗಾಯನ/ವಾದನಕ್ಕೆ ಚಿತ್ರಕಲಾವಿದರಾದ ಎಸ್.ಕೆ.ಪತ್ತಾರ, ಡಾ. ಪ್ರತಾಪ ಬಹುರೂಪಿ, ರವೀಂದ್ರ ಬಡಿಗೇರ, ಶಿವಕುಮಾರ ಕಂಕಣವಾಡಿ, ಶಿವರಾಜ ಕಮ್ಮಾರ ಅವರು ಶಿವಕುಂಚಗಾನ ಪ್ರಸ್ತುತ ಪಡಿಸಲಿದ್ದಾರೆ. ದಿನಾಂಕ: 14.02.2026ರಂದು ಸಂಜೆ 5ಕ್ಕೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಪದ್ಮಶ್ರೀ ಪುರಸ್ಕೃತ ಪಂ.ಎಂ.ವೆಂಕಟೇಶಕುಮಾರ ಅವರ ಗಾಯನ, ನೌಶಾದ ಮತ್ತು ನಿಶಾದ್ ಹರ್ಲಾಪೂರ್ ಅವರ ಗಾಯನ, ಸುಮಾ ಹೆಗಡೆ ಮತ್ತು ಸುನಿಲಕುಮಾರ ಇವರ ಸಂತೂರ ಮತ್ತು ಬಾನ್ಸುರಿ ಜುಗಲ್‌ಬಂದಿ ಸಹಕಲಾವಿದರಾಗಿ ಪಂ.ರಘುನಾಥ ನಾಕೋಡ, ಡಾ.ಶ್ರೀಹರಿ ದಿಗ್ಗಾವಿ, ವಿಜಯಕುಮಾರ ಸುತಾರ, ಬಸವರಾಜ ಹಿರೇಮಠ ಪಾಲ್ಗೊಳ್ಳುವರು.
ದಿನಾಂಕ: 15.02.2026ರಂದು ಸಂಜೆ 6 ರಿಂದ ನಗರದ ಮಂಗಳವಾರ ಪೇಟೆಯ ಮುದಿಮಾರುತಿ ದೇವಸ್ಥಾನದಲ್ಲಿ ಜರುಗುವ ಅಹೋರಾತ್ರಿ ಸುವರ್ಣ ಸಂಗೀತೋತ್ಸವದಲ್ಲಿ ಗುರುರಾಜ ಭಜನಾ ಮಂಡಳಿ, ಸ್ವರರಂಜನಿ ಸಂಗೀತ ವಿದ್ಯಾಲಯ ಯುವ ಕಲಾವಿದರು, ಕಲಕೇರಿ ಸಂಗೀತ ವಿದ್ಯಾಲಯದ ಕಲಾವಿದರು ಹಾಗೂ ಹೃಷಿಕೇಶ ಅರಬಟ್ಟಿ ಇವರಿಂದ ಭಕ್ತಿ ಸಂಗೀತ ಜರುಗುವುದು. ಸುಜಾತಾ ಗುರವ, ಬಸವರಾಜ ವಂದಲಿ ಇವರ ಗಾಯನ, ವಿಜಯ ಗೋನಹಾಳು, ಅರ್ಜುನ ಆನಂದ, ಪ್ರತೀಕ್ಷಾ ಹೂಗಾರ ಇವರ ಸಿತಾರ ವಾದನ, ಸಹಕಲಾವಿದರಾಗಿ ಪ್ರಮೋದ ಹೆಬ್ಬಳ್ಳಿ, ದಯಾನಂದ ಸುತಾರ, ರಮೇಶ ಭಟ್, ದಾಮೋದರ ಪಾಮಡಿ, ಸುಜಾತಾ ರಾಯ್ಕರ್, ರವಿ ಜೋಶಿ, ಸುಕನ್ಯಾ ಬಡಿಗೇರ, ರಾಹುಲ್ ಪಾಟೀಲ್ ಸಾಥ ಸಂಗತ ನೀಡುವರು. ಈ ಮೂರು ದಿನಗಳ ಶಿವರಾತ್ರಿ ಸುವರ್ಣ ಸಂಗೀತೋತ್ಸವಕ್ಕೆ ಸಂಸ್ಕಾರ ಭಾರತಿ, ಧಾರವಾಡ ಹಾಗೂ ಕಲಕೇರಿ ಸಂಗೀತ ವಿದ್ಯಾಲಯ ಸಹಕಾರ ನೀಡಿದ್ದಾರೆ.
ಸುವರ್ಣ ಸಾಧಕ ಶಿವ ಪ್ರಶಸ್ತಿಗೆ ಖಾತ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ, ವಿದುಷಿ ಆರತಿ ಅಂಕಲಿಕರ್ ಟಿಕೇಕರ, ಪಂ. ಪಾರ್ಥೊಸಾರಥಿ, ಪಂ.ರಘುನಾಥ ನಾಕೋಡ, ಪಂ. ರವೀಂದ್ರ ಯಾವಗಲ್, ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ, ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ, ವಾದಿರಾಜ ದಂಡಾಪೂರ, ಸುಜಾತಾ ಗುರವ ಕಮ್ಮಾರ, ವಿನಾಯಕ ಹೆಗಡೆ, ವಿಜಯ ಗೋನಹಾಳು ಹಾಗೂ ಸುವರ್ಣ ಕಲಾಪೋಷಕ ಸಾಧಕ ಶಿವ ಪ್ರಶಸ್ತಿಗೆ ಗುರುಮಾತೆ ಭಾರತಿದೇವಿ ರಾಜಗುರು, ಚಂದ್ರಕಾಂತ ಬೆಲ್ಲದ, ಆಡಂ ವುಡ್‌ವರ್ಡ್, ಎನ್.ಎಂ.ಪತ್ತಾರ, ಸಮೀರ ಜೋಶಿ ಮತ್ತು ಸಾಧಕ ಶಿವ ಸಮ್ಮಾನಕ್ಕೆ ನಿಖಿಲ್ ಜೋಶಿ, ಡಾ. ಶ್ರೀಹರಿ ದಿಗ್ಗಾವಿ, ಸುಮಾ ಹೆಗಡೆ, ಸುನೀಲಕುಮಾರ, ಅಥರ್ವ ವೈರಾಗಕರ ಇವರು ಭಾಜನರಾಗಿದ್ದಾರೆ ಎಂದು ಸುವರ್ಣ ಮಹಾಶಿವರಾತ್ರಿ ಸಂಗೀತೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ವೀರಣ್ಣ ಪತ್ತಾರ, ಸಮಿತಿ ಉಪಾಧ್ಯಕ್ಷ ಡಾ.ಶಶಿಧರ ನರೇಂದ್ರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ, ಸುಖದ ಜೋಶಿ, ರಾಜು ಕುಲಕರ್ಣಿ, ಶಂಕರ ಮಂಗಳಗಟ್ಟಿ, ಗುರುನಾಥ ಪಟ್ಟಣಕೋಡಿ, ವಿಜಯ ಸುತಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 