2ನೇ ಬಾರಿ ಚುಟುಕು ಸಾಹಿತ್ಯ ಪರಿಷತ್ತಿಗೆ ನೂತನ ತಾಲೂಕಾಧ್ಯಕ್ಷರಾಗಿ ಶಿವಮೂರ್ತಿ ಇಟಗಿ ನೇಮಕ
ಯಲಬುರ್ಗಾ 24: ಪಟ್ಟಣದ ಯುವ ಸಾಹಿತಿ ಹಾಗೂ ಕಸಾಪ ಮಾಜಿ ಅಧ್ಯಕ್ಷ ಶಿವಮೂರ್ತಿ ಇಟಗಿ ಅವರನ್ನು 2ನೇ ಬಾರಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪರಿಷತ್ತಿನ ಸಂಸ್ಥಾಪಕ ಡಾ.ಎಂ.ಜಿ.ಆರ್. ಅರಸ್ ಅವರ ಆದೇಶ ಮೇರೆಗೆ ಇಟಗಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುಟುಕು ಪರಿಷತ್ತಿನ ಘಟಕದ ಅಧ್ಯಕ್ಷ ರುದ್ರ್ಪ ಭಂಡಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೆಲಸ ಗುರುತಿಸಿ ಇಟಗಿಯವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಒತ್ತು : ಸಾಹಿತ್ಯ ಕ್ಷೇತ್ರದಲ್ಲಿ ನನಗೆ ಆಸಕ್ತಿ ಹೆಚ್ಚು ಇದ್ದು ತಾಲೂಕಿನ ಯುವ ಸಾಹಿತಿಗಳಿಗೆ ವೇದಿಕೆ ನಿರ್ಮಿಸಿ, ಸಾಹಿತ್ಯ ಚಟುವಟಿಕೆಗೆ ಕ್ರಿಯಾಶೀಲವಾಗಿ ನಡೆಯಲು ಶ್ರಮಿಸುತ್ತೇನೆ. ಸಮಾಜ ಬದಲಾವಣೆಗೆ ಸಾಹಿತ್ಯ ಕ್ಷೇತ್ರದ ಪೂರಕವಾಗಿದೆ. ನನ್ನ ಅವಧಿಯಲ್ಲಿ ಚುಟುಕು ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ನೂತನ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಮೂರ್ತಿ ಇಟಗಿ ಅವರು ತಿಳಿಸಿದರು.