ಬೆಳಗಾವಿ: ಮರಗಿಡಗಳ ರಕ್ಷಣೆಗಾಗಿ ಶಿವಾಜಿ ಕಾಗಣೇಕರ ಕರೆ

ಲೋಕದರ್ಶನ ವರದಿ

ಬೆಳಗಾವಿ 10:  ದಿ.09ರಂದು ಕೆ.ಎಲ್.ಇ. ಸಂಸ್ಥೆಯ ಜಿ.ಎ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಚಟುವಟಿಕೆಗಳ ಮುಕ್ತಾಯ ಸಮಾರಂಭ ಜರುಗಿತು. 

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶಿವಾಜಿ ಕಾಗಣೇಕರವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತ ಪ್ರಕೃತಿಯ ಸಮತೋಲನಕ್ಕಾಗಿ ಭೂಮಿಯ ಮೇಲೆ ಪ್ರತಿಶತ 33 ಅರಣ್ಯ ಸಂಪತ್ತು ಇರಬೇಕಾಗಿತ್ತು. ಆದರೆ ಮನುಷ್ಯನ ದುರಾಶೆಯಿಂದ ಕೇವಲ ಶೇ. 12 ಅರಣ್ಯವಿರುವುದು ವಿಷಾಧನೀಯ ಹಾಗೂ ಪರಿಸರ ಮಾಲಿನ್ಯದ ಜೊತೆಗೆ ಇಂದಿನ ಪೀಳಿಗೆಯ ಮನಸ್ಸುಗಳ ಮಾಲಿನ್ಯವು ಹೆಚ್ಚಾಗಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಪ್ರೊ. ಎ.ಬಿ.ಕೊರಬುರವರು ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಬಿ.ಎಚ್.ಮಾರದರವರು ಅತಿಥಿಗಳ ಪರಿಚಯ ಮಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಆರ್ ಎಸ್ ಪಾಟೀಲರವರು ವಹಿಸಿದ್ದರು. ನಿರೂಪಣೆಯನ್ನು ಶ್ರೀದೇವಿ ಗಂಗಾಪೂರೆ ಮಾಡಿದರು. ವಂದನಾರ್ಪಣೆಯನ್ನು ಶೃತಿ ನೀರಲಗಿ ಹಿರೇಮಠ ನಿರ್ವಹಿಸಿದರು.