ಶಿವಾಜಿ ಮಹಾರಾಜರು ಅಪ್ಪಟ ದೇಶಾಭಿಮಾನಿಯಾಗಿದ್ದರು : ಯಾಸಿರಖಾನ್ ಪಠಾಣ

Shivaji Maharaj was a true patriot : Yasira Khan Pathan

ಶಿವಾಜಿ ಮಹಾರಾಜರು ಅಪ್ಪಟ ದೇಶಾಭಿಮಾನಿಯಾಗಿದ್ದರು : ಯಾಸಿರಖಾನ್ ಪಠಾಣ  

 ಶಿಗ್ಗಾವಿ 24 : ಶಿವಾಜಿ ಮಹಾರಾಜರು ತಮ್ಮ ಆಡಳಿತಾವಧಿಯಲ್ಲಿಎಲ್ಲಾ ಸಮಾಜವನ್ನು ಗೌರವದಿಂದ ಕಾಣುವ ಮೂಲಕ ಧಕ್ಷ ಆಡಳಿತ ನಡೆಸಿದಂತಹ ಅಪ್ಪಟ ದೇಶಾಭಿಮಾನಿಯಾಗಿದ್ದರು ಎಂದು ಶಾಸಕ ಯಾಸಿರಖಾನ್ ಪಠಾಣ ಹೇಳಿದರು.   ಪಟ್ಟಣದ ಭಾವನ ಮಠದಲ್ಲಿ ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ದೇಶಕ್ಕಾಗಿ, ಸಮಾಜ ಸುಧಾರಣೆಗಾಗಿ ಹೋರಾಡಿದ ಮಹಾನವೀರ ಛತ್ರಪತಿ ಶಿವಾಜಿ ಮಹಾರಾಜರು. ಆದರೆ ಇಂದು ಶಿವಾಜಿ ಮಹಾರಾಜರ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಅಲ್ಲದೇ ಅಬ್ಜಲ್ ಖಾನ ವಧೆಯ ಸಂದರ್ಭದಲ್ಲಿ ಶಿವಾಜಿ ಮಹಾರಾಜರಿಗೆ ಶೇರ್ಖಾನ್ ಪಠಾಣರು ಬೆಂಬಲವಾಗಿ ನಿಂತು ದುಷ್ಟರ ದಬ್ಬಾಳಿಕೆಯನ್ನು ಕೊನೆಗಾಣಿಸಿದರು ಎಂದು ಹೇಳಿದರು.  ವಿರಕ್ತ ಮಠದ ಸಂಗನಬಸವ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದವರು ನಮ್ಮ ಪೂರ್ವಜರು ಸಂಸ್ಕೃತಿ ಉಳಿಯುವಿಕೆಗಾಗಿ ಮಹಾತ್ಮರ ಜಯಂತಿಗಳನ್ನು ಆಚರಿಸುತ್ತಿದ್ದು ಆದರೆ ಇಂದು ಮಹಾತ್ಮರ ಆಚರಣೆಗಳಲ್ಲಿ ಯುವಜನತೆ ದುಶ್ಚಟಗಳಿಗೆ ಒಳಗಾಗಿ ಧರ್ಮ ಮಾನವೀಯತೆಯನ್ನು ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.  ಮರಾಠ ಸಮಾಜ ತಾಲೂಕ ಅಧ್ಯಕ್ಷ ಸುಭಾಸ ಚೌಹಾಣ, ರಾಜ್ಯ ಕಾಂಗ್ರೇಸ ಪ್ರಧಾನ ಕಾರ್ಯದರ್ಶಿ ರಾಜು ಕುನ್ನುರ ಮಾತನಾಡಿದರು. ಭಾವನ ಮಠದ ಸ್ವಾಮೀಜಿ ಚಂದ್ರ​‍್ಪಜ್ಜ ಕಾಳೆ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಲಕ್ಷ್ಮಣ ಕುಂದಗೋಳ, ಶೇಖಪ್ಪ ಮಣಕಟ್ಟಿ, ಮಂಜುನಾಥ ಮಣ್ಣಣ್ಣವರ, ಮುಕ್ತಿಯಾರ ತಿಮ್ಮಾಪುರ, ಯಲ್ಲಪ್ಪ ಶ್ಯಾಬಳ ಸೇರಿದಂತೆ ಸಮಾಜದ ಮುಖಂಡರು ಸೇರಿದಂತೆ ಇತರರಿದ್ದರು.ಚಂದ್ರಶೇಖರ ಮನೋಜಿ ಕಾರ್ಯಕ್ರಮ ನಿರ್ವಹಿಸಿದರು.