ಏ. 6ರಿಂದ ಜೋಡಕುರಳಿ ಸಿದ್ಧಾರೂಢ ಭಾರತಿ ಮಹಾರಾಜರ ಶಿವಭಜನಾ ಸಪ್ತಾಹ

Shiva Bhajana Saptaha of Jodakurali Siddharudh Bharati Maharaja from 6th April

ಏ. 6ರಿಂದ ಜೋಡಕುರಳಿ ಸಿದ್ಧಾರೂಢ ಭಾರತಿ ಮಹಾರಾಜರ ಶಿವಭಜನಾ ಸಪ್ತಾಹ 

ಚಿಕ್ಕೋಡಿ 22: ತಾಲೂಕಿನ ಜೋಡಕುರಳಿ ಗುರು ಸಿದ್ಧಾರೂಢ ಭಾರತಿ ಮಹಾರಾಜರ ಶಿವಭಜನಾ ಸಪ್ತಾಹ ಏ. 6ರಿಂದ 13ರವರೆಗೆ  ವಿಜೃಂಭನೆಯಿಂದ ನಡೆಯಲಿದೆ ಎಂದು ಶ್ರೀಮಠದ ಚಿದ್ಘಾನಾನಂದ ಭಾರತಿ ಮಹಾಸ್ವಾಮೀಜಿ ತಿಳಿಸಿದರು. ಶನಿವಾರ ತಾಲೂಕಿನ ಜೋಡಕುರಳಿ ಗುರು ಸಿದ್ಧಾರೂಢ ಭಾರತಿ ಮಹಾರಾಜರ ಮಠದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಅವರು ತಿಳಿಸಿದರು. ಹುಬ್ಬಳ್ಳಿಯ ಸಿದ್ಧಾರೂಢ ಮಠದ ಶಾಖಾ ಮಠ ಇದಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಭಕ್ತರನ್ನು ಜೋಡಕುರಳಿ ಮಠ ಹೊಂದಿದೆ. ಮಠವು ಯಾವುದೇ ಜಾತಿ ಪಂತಕ್ಕೆ ಸಿಮೀತವಾಗದೆ ಎಲ್ಲ ಧರ್ಮದ ಭಕ್ತರು ಶ್ರೀಮಠಕ್ಕೆ ಆಗಮೀಸುವ ಸಂಪ್ರದಾಯ ಇರುತ್ತದೆ. ಮಠವು ಸಪ್ತಾಹ ಮೂಲಕ ರಾಷ್ಟ್ರ ಧರ್ಮಧ ಪರಂಪರೆಯ ಮೂಲಕ ಭಾವಕ್ಯತೆ ಸಾರುತ್ತದೆ.  ಒಂದು ವಾರಗಳ ಕಾಲ ನಡೆಯುವ ಸಪ್ತಾಹದಲ್ಲಿ ನಾಡಿನ ಹೆಸಾರಂತ ಮಹಾಸ್ವಾಮೀಜಿಗಳು ಮತ್ತು ಶರಣರ ಅನುಭಾವದ ಪ್ರವಚನದ ಮೂಲಕ ಭಕ್ತರಿಗೆ ಧಾರ್ಮಿಕ ಪಾಠದ ಭೋಧನೆಯಾಗಲಿದೆ. ಪ್ರತಿದಿನ 10 ಸಾವಿರ ಭಕ್ತರು ಜಾತ್ರೆಯಲ್ಲಿ ಸೇರಲಿದ್ದಾರೆ. ದಿ. 12 ರಂದು ಸಂಜೆ  ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಂಚಿನ ರಥೋತ್ಸವ ಜರುಗಲಿದೆ ಎಂದರು. ದಿ.6 ರಂದು ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ, ವೀರಘಟ್ಟದ ಅಡವಿಲಿಂಗ ಮಹಾರಾಜರು, ಗುರುನಾಥ ಶಾಸ್ತ್ರಿಗಳು, ಕೋಟನೂರದ ಶಿವಶಂಕರ ಬಿರಾದಾರ ಶರಣರು ಆಗಮೀಸಲಿದ್ದಾರೆ. ದಿ.7 ರಂದು ಇಂಚಲದ ಶಿವಾನಂದ ಭಾರತಿ ಸ್ವಾಮಿಜಿ, ಅಸುಂಡಿಯ ಮಾತೋಶ್ರೀ ನಿಲಮ್ಮ ತಾಯಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಮಲ್ಲೇಶ್ವರ ಶರಣರು ಆಗಮೀಸಲಿದ್ದಾರೆ. ದಿ.8 ರಂದು ಜಮಖಂಡಿಯ ಸಹಜಾನಂದ ಸ್ವಾಮಿಜಿ, ಕೃಷ್ಣಾನಂದ ಸ್ವಾಮೀಜಿ, ಹಿಪ್ಪರಗಿಯ ಸಿದ್ಧಾರೂಡ ಶರಣರು ಆಗಮೀಸಲಿದ್ದಾರೆ. ದಿ.9 ರಂದು ಚಿಕ್ಕೋಡಿಯ ಸಂಪಾದನ ಸ್ವಾಮೀಜಿ, ಪರಮಾನಂದವಾಡಿಯ ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಅನಗವಾಡುಯ ಮಾತೋಶ್ರೀ ಅನಸುಯಾ ತಾಯಿಯವರು ಆಗಮಿಸಲಿದ್ದಾರೆ.  ದಿ.10 ರಂದು ಯಡೂರ-ಶ್ರೀಶೈಲ ಜಗದ್ಗುರು ಡಾ, ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮಿಜಿ, ಸದಾಶಿವವಾನಂದ ಸ್ವಾಮಿಜಿ, ನಿಜಗುಣ ದೇವರು, ಮಾರುತಿ ಶರಣರು ಆಗಮೀಸಲಿದ್ದಾರೆ. ದಿ. 11 ರಂದು ಹುಬ್ಬಳ್ಳಿಯ ಶಾಂತಾಶ್ರಮದದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಮಹಾಲಿಂಗಪೂರದ ಸಹಜಾನಂದ ಸ್ವಾಮಿಜಿ, ಮಾತೋಶ್ರೀ ಸಿದ್ದೇಶ್ವರಿ ತಾಯಿಯವರು, ಗಣಪತಿ ಮಹಾರಾಜರು ಮತ್ತು ಬಸವರಾಜ ಶರಣರು ಆಗಮಿಸಲಿದ್ದಾರೆ.  ದಿ.12 ರಂದು ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಸ್ವಾಮಿಜಿ ಆಗಮಿಸಲಿದ್ದಾರೆ. ದಿ. 13 ರಂದು ಶ್ರೀ ಶಂಕರಾನಂದ ಸ್ವಾಮಿಜಿ, ಕಲ್ಲೋಳದ ಸಿದ್ಧಾರೂಢ ಶರಣರು, ವಿರೇಶ ಪಾಟೀಲ ಶರಣರು, ಕೇದಾರಲಿಂಗ ಶರಣರು, ಸಿದ್ಧನಗೌಡ ಶರಣರು ಆಗಮಿಸಲಿದ್ದಾರೆ ಎಂದರು. ಕಬ್ಬೂರಿನ ಖ್ಯಾತ ಉದ್ಯಮಿ ಮಹೇಶ ಬೆಲ್ಲದ ಮತ್ತು ಜಲಯೋಗದಲ್ಲಿ ಸಾಧನೆ ಮಾಡಿದ ಡಾ, ಪ್ರಕಾಶ ಬೆಲ್ಲದ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್‌.ಸಿದ್ಧಕುಮಾರಿ ಅವರಿಗೆ ಸಿದ್ಧಾರೂಢ ಸ್ವಾಮಿ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.