28 ಲೋಕಸಭಾ ಕ್ಷೇತ್ರಗಳಿಗೆ ಶಿವಸೇನಾ ಸ್ವತಂತ್ರವಾಗಿ ಸ್ಪಧರ್ೆ: ಹಕಾರಿ

 ಲೋಕದರ್ಶನ ವರದಿ

ವಿಜಯಪುರ 24 : ವಿಜಯಪುರ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಶಿವಸೇನಾ (ಕನರ್ಾಟಕ) ಪಕ್ಷವು ತನ್ನ ಅಭ್ಯಥರ್ಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ವಿಜಯಪುರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಿವಸೇನಾ (ಕನರ್ಾಟಕ) ಪಕ್ಷದ ಉತ್ತರ ಕನರ್ಾಟಕ ಅಧ್ಯಕ್ಷ ಕುಮಾರ ಹಕಾರಿ ಅವರು, ಮುಂಬರುವ ಲೋಕಸಭಾ ಚುನಾಣೆಯಲ್ಲಿ ಶಿವಸೇನಾ ಪಕ್ಷವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪಧರ್ೆ ಮಾಡಲಿದೆ ಎಂದರು.

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿಯೂ ಓರ್ವ ಪ್ರಬಲ ಅಭ್ಯಥರ್ಿಯನ್ನು ಕಣಕ್ಕಿಳಿಸಲಾಗುತ್ತಿದ್ದು, ಅಭ್ಯಾಥರ್ಿಯ ಹೆಸರನ್ನು ನಂತರದಲ್ಲಿ ಘೋಷಣೆ ಮಾಡಲಾಗುವುದು ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ  ಅವಧಿಯಲ್ಲಿಯೇ ಪಕ್ಷ ಚುನಾವಣೆ ಎದುರಿಸಬೇಕಲಾಗಿ ಬಂತು. ಆದಾಗ್ಯೂ ರಾಜ್ಯದಲ್ಲಿ 27 ಸಾವಿರ ಮತಗಳು ಪಕ್ಷಕ್ಕೆ ಬಿದ್ದಿವೆ. ಇದು ನಮಗೆ ಒಂದು ರೀತಿ ಸ್ಪೂತರ್ಿ ದೊರಕಿದಂತಾಗಿದ. ಲೋಕಸಭಾ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸಲಾಗಿದೆ. ಕಾರ್ಯಕರ್ತರನ್ನು ಸಕ್ರಿಯಗೊಳಿಸಲಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ಶಿವಸೇನಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಅದು ಅಲ್ಲಿನ ರಾಜಕಾರಣ. ಅದು ಮಹಾರಾಷ್ಟ್ರಕ್ಕೆ ಸೀಮಿತ, ಈ ಭಾಗದಲ್ಲಿ ಆ ಮೈತ್ರಿಗೆ ಸಂಬಂಧವಿಲ್ಲ, ಇಲ್ಲಿನ ನಿಧರ್ಾರಗಳನ್ನು ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದರು.

ಕನ್ನಡ ನೆಲ, ಜಲ ಹಾಗೂ ಭಾಷೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡ ನೆಲ ಹಾಗೂ ಜಲ ರಕ್ಷಣೆಗೆ ಕನರ್ಾಟಕ ಶಿವಸೇನಾ ಬದ್ಧವಾಗಿರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಸೇನಾ ಪಕ್ಷದ ಪದಾಧೀಕಾರಿಗಳಾದ ನಾನಾಗೌಡ ಪಾಟೀಲ, ಧರೆಪ್ಪ ಅಧರ್ಾವೂರ, ಮಹೇಶ ಜಾಧವ, ಸಂಗಮ ಹಿರೇಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.