ಪ್ರಜಾಪ್ರಭುತ್ವ ಕಲ್ಪನೆಯನ್ನು ನೂರು ವರ್ಷದ ಹಿಂದೆಯೇ ಶಿವಶರಣರು ನೀಡಿದ್ದಾರೆ: ಚನ್ನವೀರಶ್ರೀ

"ದಾರಿದೀಪ ಆಧ್ಯಾತ್ಮಿಕ ಪ್ರವಚನ" ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯ ಕಡಣಿ ಗ್ರಾಮದ ಶಾಸ್ತ್ರೀಗಳಾದ ಚನ್ನವೀರಸ್ವಾಮಿ ಹಿರೇಮಠ

ಲೋಕದರ್ಶನ ವರದಿ

ಬ್ಯಾಡಗಿ24: ಸಾಮಾಜಿಕ ನ್ಯಾಯದ ಪರಿಕಲ್ಪನೆ ಜೊತೆಗೆ ಸಂವಿಧಾನ ಆಶಯಗಳು ಸೇರಿದಂತೆ ಪ್ರಜಾಪ್ರಭುತ್ವ ಕಲ್ಪನೆಯನ್ನು ನೂರಾರು ವರ್ಷಗಳ ಹಿಂದೆಯೇ ಶಿವಶರಣರು ನೀಡಿದ್ದಾರೆ ಎಂದು ಗದಗ ಜಿಲ್ಲೆಯ ಕಡಣಿ ಹಿರೇಮಠದ ಚನ್ನವೀರಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

 ತಾಲೂಕಿನ ಬಿಸಲಹಳ್ಳಿ ಗ್ರಾಮದ ಹೊಳಬಸವೇಶ್ವರ ಸ್ವಾಮಿಮಠದಲ್ಲಿ ಕಥಾ ಕೀರ್ತನಾ ಪರಿಷತ್(ರಿ) ಬಾಲೇಹೊಸೂರು ಇವರಿಂದ ಜರುಗಿದ "ದಾರಿದೀಪ ಆಧ್ಯಾತ್ಮಿಕ" ಪ್ರವಚನ ಕಾರ್ಯಕ್ರಮವು ಜರುಗಿತು.

   ಸಮಾಜದಲ್ಲಿನ ಸ್ಥರಗಳು ಧರ್ಮವನ್ನು ಕುಬ್ಜ ಮಾಡಿದ್ದ ಸಂದರ್ಭದಲ್ಲಿ ಮೌಢ್ಯಗಳನ್ನು ತಗೆದು ಹಾಕುವ ಪ್ರಯತ್ನ ಅಂದಿನಿಂದಲೇ ನಡೆದಿದೆ, ಇದರ ದ್ಯೋತಕವಾಗಿ ಮಠಗಳ ಸ್ಥಾಪನೆ ಮಾಡಿ ತನ್ಮೂಲಕ ಜನರಲ್ಲಿ ಉತ್ತಮ ಗುಣಗಳನ್ನು ಬಿತ್ತರಿಸುವ ಕಾರ್ಯ ನಡೆದಿದೆ ಎಂದರು.

   ಭಗವಂತ ಮೆಚ್ಚುವಂತಹ ಗುಣಗಳ ಧಾರಣೆಯೇ ಅಂತರಂಗ ಶುದ್ಧಿಯಾಗಲಿದೆ ಮತ್ತು ಅಂತವರಲ್ಲಿ ಭಗವಂತ ವಾಸವಾಗುತ್ತದೆ, ಆತನನ್ನು ಒಲಿಸಿಕೊಳ್ಳುವ ಸುಲಭ ಮಾರ್ಗವೆಂದರೆ ಭಕ್ತಿಯಾಗಿದ್ದು, ಈ ಮಾರ್ಗದಲ್ಲಿ ನಡೆದು ಹೋದ ಅನೇಕ ಶಿವಶರಣರ ಜೀವನ ನಮಗೆ ದಾರಿ ದೀಪವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮನುಷ್ಯ ಎಲ್ಲ ಸಂದರ್ಭದಲ್ಲಿ ಭಕ್ತಿ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಮನೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದರು.

 ಧರ್ಮದಿಂದ ವಿಮುಖರಾಗುತ್ತಿರುವ ಇಂದಿನ ಯುವ ಜನಾಂಗವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವುದು, ಟಿವಿ ಹಾಗೂ ಮೊಬೈಲ್ ಹಾವಳಿಗಳಿಂದ ಅಳಿದು ಹೋಗಿರುವ ಕೀರ್ತನೆ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಥಾ ಕೀರ್ತನ ಹಾಗೂ ಕಲಾವಿದರ ಹಿತರಕ್ಷಣೆಗಾಗಿ ಅಸ್ತಿತ್ವಕ್ಕೆ ತರಲಾಗಿರುವ ಕಥಾ ಕೀರ್ತನಾ ಪರಿಷತ್ ದಾರಿದೀಪ ಆಧ್ಯಾತ್ಮಿಕ ಪ್ರವಚನವನ್ನು ನಾಡಿನಾಧ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

 ಕಥಾ ಕೀರ್ತನಾ ಪರಿಷತ್ನ ರಾಜ್ಯಾಧ್ಯಕ್ಷ ಪಂಚಾಕ್ಷರಿ ಸ್ವಾಮೀಜಿ ಹಿರೇಮಠ ಮಾತನಾಡಿ, ಡಾ.ಪಂಡಿತ ಪುಟ್ಟರಾಜರು ಕಥಾ ಕೀರ್ತನೆ ಕಲೆಯ ಮೂಲಕ ಭಿಕ್ಷಾಟನೆ ಮಾಡಿ ಅಂಧ ಅನಾಥ ಮಕ್ಕಳನ್ನು ಸಲುಹಿ ಮಾನವ ಜನಾಂಗದ ಉದ್ಧಾರ ಮಾಡಿದ ಕೀತರ್ಿ ಅವರಿಗೆ ಸಲ್ಲುತ್ತದೆ. ಈ ಪರಂಪರೆಯನ್ನು ಮುಂದುವರಿಸುವ ಉದ್ದೇಶವನ್ನು ಕಥಾ ಕೀರ್ತನಾ ಪರಿಷತ್ ಮಾಡುತ್ತಿದೆ ಎಂದರು. 

     ಕಾತರ್ಿ ವೀರಾಜರ್ುನ ಕಥಾ ಕೀರ್ತನೆ ನಡೆಸಿಕೊಡುವ ಮೂಲಕ ಕಾತರ್ಿಕ ಮಾಸದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗಯ್ಯ ಶಾಸ್ತ್ರೀಜಿ ಹಿರೇಮಠ, ಮುದಕಯ್ಯಸ್ವಾಮಿ ಹಿರೇಮಠ, ಬಸವರಾಜ ಕಾಯಕದ. ಶಂಬಣ್ಣ ಯಲಿಗಾರ, ಪುಟ್ಟಪ್ಪ ಮುಚ್ಚಟ್ಟಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಈರನಗೌಡ ಗೌಡ್ರ ಸ್ವಾಗತಿಸಿದರು, ಶಿಕ್ಷಕರಾದ ಶಂಕ್ರಪ್ಪ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.