ನಗರದಲ್ಲಿ ಶಿವಸಂಚಾರ-ಸಾಣೇಹಳ್ಳಿ ಅವರಿಂದ ಶಿಶಿರ ನಾಟಕೋತ್ಸವ

ಲೋಕದರ್ಶನ ವರದಿ

ಬೆಳಗಾವಿ,15 : ಸ್ಥಳೀಯ ನಾಗನೂರು ಶ್ರೀ ರುದ್ರಾಕ್ಷಿಮಠದ ಆಶ್ರಯದಲ್ಲಿ ಬೆಳಗಾವಿ ಮಹಾನಗರದ ಸದಾಶಿವ ನಗರದಲ್ಲಿರುವ ಚಿಂದೋಡಿಲೀಲಾ ರಂಗಮಂದಿರದಲ್ಲಿ 2018ರ ಡಿಸೆಂಬರ್ 19 ರಿಂದ 21ನೇ ದಿನಾಂಕದವರೆಗೆ ಶಿಶಿರ ನಾಟಕೋತ್ಸವ ಜರುಗಲಿದೆ.

ಪ್ರತಿದಿನ ಸಾಯಂಕಾಲ 6.30 ಗಂಟೆಗೆ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಶಿವಸಂಚಾರ ತಂಡದವರು ವಿವಿಧ ನಾಟಕಗಳನ್ನು ಪ್ರದಶರ್ಿಸಲಿದ್ದಾರೆ.

ಉಚಿತ ಪ್ರವೇಶವಿರುವ ಈ ನಾಟಕೋತ್ಸವದಲ್ಲಿ ಎಲ್ಲ ಕಲಾಸಕ್ತರು ಪ್ರೀತಿಯಿಂದ ಪಾಲ್ಗೊಳ್ಳಬೇಕು ಮತ್ತು ನಾಟಕಗಳನ್ನು ನೋಡಿ ಆನಂದಿಸಬೇಕೆಂದು ನಾಗನೂರು ಶ್ರೀ ರುದ್ರಾಕ್ಷಿಮಠದ ಪ್ರಕಟಣೆಯಲ್ಲಿ ಕೋರಿದೆ.