ಶಿರಡಿ ಸಾಯಿಬಾಬಾ ಏಳನೇ ವರ್ಷದ ಕಾರ್ತಿಕೋತ್ಸವ

ಏಳನೇ ವರ್ಷದ ಕಾರ್ತಿಕೋತ್ಸವ

ಶಿರಡಿ ಸಾಯಿಬಾಬಾ ಏಳನೇ ವರ್ಷದ ಕಾರ್ತಿಕೋತ್ಸವ

ಬ್ಯಾಡಗಿ 26:  ಗುರುವಾರ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಏಳನೇ ವರ್ಷದ ಕಾರ್ತಿಕೋತ್ಸವವು ಸಡಗರ ಸಂಭ್ರಮದಿಂದ ನಡೆಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಮಂಜಯ್ಯ ಶಾಸ್ತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಂದು ಬೆಳಿಗ್ಗೆ 8 ಘಂಟೆಗೆ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಶ್ರೀಗಳ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ. ಸಂಜೆ 6:30 ಘಂಟೆಗೆ  ಬಾಳೆಹೊನ್ನೂರ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.  ಸಂಜೆ 7 ಘಂಟೆಗೆ ಕಾರ್ತಿಕೋತ್ಸವ ಜರುಗುವುದು ಆದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಭಕ್ತರಲ್ಲಿ ಕೋರಿದ್ದಾರೆ.