ಶಿರಹಟ್ಟಿ: ಮಗುವಿನ ಜೀವರಕ್ಷಕ ಪೋಲಿಯೋ: ಗೋಣೆಣ್ಣವರ ಹೇಳಿಕೆ

ಲೋಕದರ್ಶನ ವರದಿ

ಶಿರಹಟ್ಟಿ 10: ಮಗುವಿಗೆ  ಒಂದು ಪೋಲಿಯೋ ಹಾಕುವ ಮೂಲಕ ಆ ಮಗುವಿನ ದೈಹಿಕ ಸುರಕ್ಷತೆ  ಮಾನಸಿಕ ಸುರಕ್ಷತೆಯನ್ನು ಕಾಪಾಡಬಹುದಾಗಿದೆ. ಆದ್ದರಿಂದ ಪೋಲೀಯೋ ಹನಿ ಮಗುವಿನ ಜೀವರಕ್ಷಕವಾಗಿದೆ ಎಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಹೇಳಿದರು.

ಅವರು ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಮಗುವಿಗೆ ಒಂದು ಪಲ್ಸ ಪೋಲಿಯೋ ಹನಿ  ಯನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಂದೆ ತಾಯಿಯರ ನಿರ್ಲಕ್ಷದಿಂದಾಗಿ ಮಗು ತನ್ನ ಜೀವನ ಪೂತರ್ಿಯಾಗಿಪೋಲಿಯೋ ತೊಂದರೆಯಿಂದಾಗಿ ಕಷ್ಟವನ್ನು ಅನುಭವಿಸುಂತಾಗಬಾರದು. ಆದ್ದರಿಂದ ತಂದೆ ತಾಯಿಗಳು ಸಾಕಷ್ಟು ಜಾಗೃತರಾಗಬೇಕು. ಹುಟ್ಟಿನಿಂದಲೇ ಅಂಕವಿಕಲತೆಗೆ ಒಳಗಾದರೆ ಏನೂ ಮಾಡಲಾಗುವುದಿಲ್ಲ. ಹುಟ್ಟಿದ ನಂತರ ಪೋಲೀಯೋದ ತೊಂದರೆಯಿಂದಾಗಿ ಮಗಿವೆ ತೊಂದರೆಯಾದರೆ ಅದಕ್ಕೆ ತಂದೆ ತಾಯಿಗಳೇ ಹೊಣೆಯಾಗುತ್ತಾರೆ. ಇದಕ್ಕೆ ಸಮಾಜವೂ ಕೂಡಾ ಜಾವಾಬ್ದಾರಿಯಾಗಿರುತ್ತದೆ. ಆದ್ದರಿಂದಪ್ರತಿಯೊಬ್ಬರೂ ಸಹಿತ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.  ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.