ಲೋಕದರ್ಶನ ವರದಿ
ಶಿರಹಟ್ಟಿ 25: ಸಾರ್ವಜನಿಕರ ಸುಖ ಶಾಂತಿಗಾಗಿ, ಜನರನ್ನು ಕತ್ತಲೆಯಿಂದ ಬೆಳಕನ್ನು ನೀಡುವದಕ್ಕೋಸ್ಕರ ತಮ್ಮ ಜೀವದ ಹಂಗನ್ನು ತೊರೆದು ಪಣಕ್ಕಿಟ್ಟು ನಮ್ಮೆಲ5್ಲರ ಕಣ್ಮುಂದೆ ಕಾರ್ಯನಿರ್ವಹಿಸುವ ಎರಡು ಇಲಾಖೆಗಳೆಂದರೆ ಒಂದು ಪೋಲಿಸ ಇಲಾಖೆ ಇನ್ನೊಂದು ವಿದ್ಯುತ್ ಇಲಾಖೆ ಎಂದು ಶಿರಹಟ್ಟಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಹೆಸ್ಕಾಂ ಇಲಾಖೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯುತ್ ಉಳಿತಾಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಳೆ-ಗಾಳಿ ಯಾವುದನ್ನು ಲೆಕ್ಕಿಸದೆ ಈ ಇಲಾಖೆಯ ಸಿಬ್ಬಂದಿ ಹಗಲಿರುಳು ಜೀವ ಭಯ ಬಿಟ್ಟು ತಮ್ಮ ಕಾರ್ಯನಿರ್ವಹಿಸುತ್ತಾರೆ. ಸಾರ್ವಜನಿಕರು ವಿದ್ಯುತ್ ಉಳಿತಾಯ ಮಾಡಬೇಕು ಎಂದು ಯಾವ ಕಾನೂನು ಹೇಳುವದಿಲ್ಲ ಆದಾಗ್ಯೂ ಇದು ನಮ್ಮ ನಿಮ್ಮೇಲ್ಲರ ಆಧ್ಯ ಕರ್ತವ್ಯವಾಗಿದೆ. ಮೊದಲೆಲ್ಲ ನೀರು ಮತ್ತು ಕಲ್ಲಿದ್ದಿಲಿನಿಂದ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯವಿತ್ತು. ಆದರೆ ಈಗ ಸೌರ ಶಕ್ತಿ, ಗಾಳಿಯಿಂದ ಹೀಗೆ ಹಲವಾರು ಮಾರ್ಗದಿಂದ ನಾವು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಆದರು ನಮಗೆ ಬಳಸಲು ವಿದ್ಯುತ್ ಸಾಕಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ವಿದ್ಯುತ್ ಬಳಿಕೆಗಿಂತ ಹೆಚ್ಚು ವ್ಯರ್ಥವಾಗಿ ಹೋಗುತ್ತಿರುವದು ಕಾರಣ ಎಂದು ಹೇಳಿದರು.
ನಂತರ ಹೆಸ್ಕಾಂ ಗದಗ ವಿಭಾಗದ ಇ.ಇ ಕೃಷ್ಣಪ್ಪ ಹೆಂಡೆಗಾರ ಮಾತನಾಡಿ ಸಾರ್ವಜನಿಕರ ದಿನನಿತ್ಯದ ಬಳಕೆಯಲ್ಲಿ ಯಾವ ಕ್ರಮಗಳನ್ನು ಕೈಗೊಂಡು ವಿದ್ಯುತ್ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು. ಜೊತೆಗೆ ಹೆಚ್ಚಿನ ಜಾಗೃತಿ ವಹಿಸಿ ಸಾರ್ವಜನಿಕರು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಮತ್ತು ಇಲಾಖೆಯ ಉತ್ತಮ ಸೇವೆಗಾಗಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಮುಖಂಡರಾದ ಯಲ್ಲಪ್ಪಗೌಡಾ ಪಾಟೀಲ, ಪಪಂ ಸದಸ್ಯರಾದ ಮಂಜುನಾಥ ಘಂಟಿ, ರಾಜು ಕಪ್ಪತ್ತನವರ, ಫಕ್ಕಿರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಅರ್ಶದಲಿ ಢಾಲಾಯತ, ಮುಸ್ತಾಕ ಚೋರಗಸ್ತಿ, ಮುರಗೇಶ ಆಲೂರ, ಈಸಾಕ ಆದರಳ್ಳಿ, ಮುತ್ತು ಕಲಾದಗಿ, ಪರಸು ಡೊಂಕಬಳ್ಳಿ, ಮತ್ತು ಇಲಾಖೆಯ ಎಇಇ ಅರುಲರಾಜ, ಹರೀಷ ಶಂಕರ, ವಿ.ಐ.ಬಡಿಗೇರ, ಸಂತೋಷ ಕುಬೇರ, ಎಮ್.ಆರ್.ವರವಿ, ಚಂದ್ರು ಹುಬ್ಬಳ್ಳಿ, ಇಬ್ರಾಹಿಮ ಸನದಿ, ಎಸ್.ಎಸ್.ಚಿಕ್ಕಮಠ ಮುಂತಾದವರು ಇದ್ದರು.