ಶಿರಹಟ್ಟಿ: ಕಣ್ತೆರೆದು ನೋಡದ ಬ್ಯಾಂಕಿನ ವ್ಯವಸ್ಥಾಪಕ ಸಿಬ್ಬಂದಿಗಳು: ಇದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ

ಶಶಿಧರ ಶಿರಸಂಗಿ

ಶಿರಹಟ್ಟಿ 29: ಈಗಿನ ಕಾಲದಲ್ಲಿ ತಮ್ಮ ಸುರಕ್ಷತಾ ದೃಷ್ಠಿಯಿಂದ ತಮಗೆ ಬೇಕಾದಷ್ಟು ಹಣವನ್ನು ಮಾತ್ರ ತಮ್ಮಲ್ಲಿಯೇ ಇಟ್ಟುಕೊಂಡು ಉಳಿದ ಹಣವನ್ನೆಲ್ಲಾ ಭದ್ರತೆಗಾಗಿ ಹಣವನ್ನು ಬ್ಯಾಂಕುಗಳಲ್ಲಿ ಇಡುವುದು ಸಾಮಾನ್ಯ. ಹಾಗೆಯೇ ತುರ್ತಾಗಿ  ಹಣ ಬೇಕೆಂದರೆ ಪಟ್ಟಣದಲ್ಲಿರುವ ಏಟಿಎಂ ಇಲ್ಲವೇ ಬ್ಯಾಂಕುಗಳಿಗೆ ಬರುವುದು ಅನಿವಾರ್ಯ. ಹಾಗಂತೆಯೇ ಪಟ್ಟಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಬೇಕಾಗಿದ್ದ ಬ್ಯಾಂಕುಗಳ ಬಹುತೇಕ ಎಟಿಎಂಗಳು ಬಂದ್ ಆಗಿವೆ ಇಲ್ಲವೇ ಮಷೀನಗಳಲ್ಲಿ ಹಣವಿರುವದಿಲ್ಲವೆಂಬ ನಾಮಫಲಕಗಳು ಕಂಡು ಬರುವುದು ಸರ್ವೇ  ಸಾಮಾನ್ಯವಾಗಿವೆ. ಪಟ್ಟಣದಲ್ಲಿ ಇರುವುದೇ 04 ಎಟಿಎಂಗಳು ಮಾತ್ರ. ಅವುಗಳು ಬಂದ್ ಆಗಿರುವದರಿಂದ ಜನರಿಗೆ ಅವಶ್ಯಕತೆ ಇದ್ದಾಗ ಹಣ ದೊರಕುವ ವ್ಯವಸ್ಥೆಯಿಂದ ವಂಚಿತ ರಾಗುತ್ತಿದ್ದಾರೆ. ಇದು ಜನರಿಗೆ ಸಮಸ್ಯೆಯ ಜೊತೆಗೆ ಕಿರಿಕಿರಿಯನ್ನು ಉಂಟು ಮಾಡುತ್ತಿದೆ. 

ತಾಲೂಕು ಕೇಂದ್ರವಾಗಿರುವದರಿಂದ ಪಟ್ಟಣಕ್ಕೆ ನಿತ್ಯ ಸಾವಿರಾರು ಜನರು ಹಳ್ಳಿಗಳಿಂದ ಇಲ್ಲಿಗೆ ಬರುತ್ತಿದ್ದು, ಅಲ್ಲದೆ ಇಲ್ಲಿಯೇ ನೂರಾರು ಜನ ವ್ಯಾಪಾರಸ್ಥರು ಇದ್ದು, ಹಣಕಾಸಿನ ವ್ಯವಸ್ಥೆಯಲ್ಲಿ ಆಗುತ್ತಿರುವ ಕಿರಿಕಿರಿಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ಸ್ಟೇಟ್ಬ್ಯಾಂಕ್, ಕೆನರಾ ಹಾಗೂ ಆಯ್ಸಿಆಯ್ಸಿಐ, ಹಾಗೂ ಗ್ರಾಮೀಣ ವಿಕಾಸ ಬ್ಯಾಂಕ ಸೇರಿದಂತೆ ಅನೇಕ ಬ್ಯಾಂಕುಗಳು ಎಟಿಎಂ ಹೊಂದಿದ್ದರೂ ಸಹ ಉಪಯೋಗ ಮಾತ್ರ ಜನರಿಗೆ ದೊರೆಯದಂತಾಗಿವೆ. 

ಮೂಲ ಮಾರ್ಕೆಟ್ನಲ್ಲಿ  ಇರುವ ಕೆನರಾ ಬ್ಯಾಂಕಿನ ಎಟಿಎಂ ನಿಂತು ಹೋಗಿ ಸುಮಾರು 6-8 ತಿಂಗಳುಗಳೆ ಕಳೆಯುತ್ತಾ ಬಂದಿದ್ದರೂ ಸಹ ಬ್ಯಾಂಕು ಇದನ್ನು ದುರಸ್ಥಿ ಮಾಡಿಸಬೇಕೆನ್ನುವ ಚಿಂತನೆ ಮಾಡಿಲ್ಲ, ಇದರಿಂದ ಸುತ್ತಲೂ ವ್ಯಾಪಾರಸ್ಥರೆ ಇರುವ ಇಲ್ಲಿ ಜನರು ಬ್ಯಾಂಕಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನೂ ಗ್ರಾಮೀಣ ಬ್ಯಾಂಕಿನ ಎ.ಟಿ.ಎಂ ತೆರೆದಿರುವದನ್ನು ಸಾಕಷ್ಠು ಜನ ನೋಡಿಯೆ ಇಲ್ಲ ಎಂದು ಜನರು ಹೇಳುತ್ತಾರೆ. ಇದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ಇನ್ನುಳಿದಂತೆ ಸ್ಟೇಟ್ಬ್ಯಾಂಕ್ನ 2 ಎಟಿಎಂ ಗಳಿದ್ದರೂ ಸಹ ಒಂದು ಏಟಿಎಂ ಕೇವಲ ಹಣ ತೆಗೆಯಲಿಕ್ಕೆ ಇದ್ದರೆ ಇನ್ನೊಂದು ಹಣ ಹಾಕುವ (ಕ್ಯಾಶ್ ಡಿಪಾಸಿಟ್ ಮಷೀನ್ ಸಿಡಿಎಂ) ಹಾಗೂ ತೆಗೆಯುವ ಸೌಲಭ್ಯವಿರುತ್ತದೆ ಸಾಕಷ್ಟು ಹಣವಿಲ್ಲದ ಕಾರಣ ಸಿಕ್ಕವರು ಪುಣ್ಯವಂತರು ಅಂದ ಹಾಗೆ ಏಟಿಎಂಗಳಲ್ಲಿ ಹಣ ಖಾಲಿಯಾದ ಸಮಯದಲ್ಲಿ ಜಾತಕ ಪಕ್ಷಿಗಳಂತೆ ಖಾತೆದಾರರು ಬೇರೆ ಯಾರಾದರೂ ಸಿಡಿಎಂ ಮಷೀನನಲ್ಲಿ ಹಣ ಹಾಕರು ಬರುತ್ತಾರೋ ಅಂತಾ ಕಾಯುತ್ತಾ ಕುಳಿತಿರುವ ಸನ್ನಿವೇಶ ಸವರ್ೇ ಸಾಮಾನ್ಯ. ಕೆಲವು ಬ್ಯಾಂಕಿನ ಎಟಿಎಂ ಕೇಂದ್ರಗಳು ಪದೆ ಪದೆ ನಿಂತು ಹೋಗುತ್ತಿರುವದನ್ನು ನೋಡಬಹುದಾಗಿದ್ದು, ಕೇವಲ ಹೆಸರಿಗೆ ಮಾತ್ರ ಎಟಿಎಂ ಕೇಂದ್ರವಾಗಿ ಉಳಿದಿಕೊಂಡಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಬ್ಯಾಂಕ್ ಅವುಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನೂರಾರು ಗ್ರಾಹಕರು ಆರೋಪಿಸುತ್ತಿದ್ದಾರೆ. 2-3 ದಿನಗಳು ಬ್ಯಾಂಕುಗಳು ರಜೆ ಬಂದರೆ ಗ್ರಾಹಕರ ಗತಿ ದೇವರೇ ಬಲ್ಲ ಎನ್ನುವಂತಾಗಿದ್ದು ಈ ಕುರಿತಂತೆ ಬ್ಯಾಂಕುಗಳು ಕ್ರಮ ತೆಗೆದುಕೊಳ್ಳದಿರುವುದು ಮಾತ್ರ ವಿಪಯರ್ಾಸವೆನ್ನಬಹುದು. 

ಸಾರ್ವಜನಿಕರು ನಿತ್ಯ ನೂರಾರು ಜನರಿಗೆ ಅನೂಕೂಲವಾಗಬೇಕಾಗಿದ್ದ ಎಟಿಎಂಗಳು ಬಂದ್ ಆಗುತ್ತಿದ್ದರೂ ಬ್ಯಾಂಕುಗಳು  ಕ್ರಮ ತೆಗೆದುಕೊಳ್ಳದಿರುವದಕ್ಕೆ ಗ್ರಾಹಕರ ಬಗ್ಗೆ ಇವರಿಗಿರುವ ಅಸಡ್ಡೆಗೆ ಸಾಕ್ಷಿಯಾಗಿದೆ. ಕೆನರಾ ಎಟಿಎಂ ಬಂದ್ ಆಗಿ ವರ್ಷಗಳೆ ಆಗುತ್ತಾ ಬಂದಿದೆ,  ಬ್ಯಾಂಕುಗಳಿಗೆ ಗ್ರಾಹಕರ ಬಗ್ಗೆ ಕಾಳಜಿ ಇದ್ದರೆ ಶೀಘ್ರ ಮೂರು ಬ್ಯಾಂಕುಗಳ ಎ.ಟಿ.ಎಂ ಗಳು 24/7 ನಂತೆ ಕಾರ್ಯನಿರ್ವಹಿಸವಂತಾಗಲಿ ಎಂದು ಗ್ರಾಹಕರ ಒತ್ತಾಯ.