ಲೋಕದರ್ಶನ ವರದಿ
ಶಿರಹಟ್ಟಿ 17: ಹಬ್ಬಗಳು ಪ್ರೀತಿ ಸೌಹಾರ್ದತೆಯ ಸಂಕೇತವಾಗಿರಬೇಕೆ ಹೊರತು ದ್ವೇಷ ವಿರೋಧದ ವಾತಾವರಣ ಸೃಷ್ಟಿಸಬಾರದು ಎಂದು ಸಿಪಿಐ ಬಾಲಚಂದ್ರ ಲಕ್ಕಂ ಹೇಳಿದರು.
ಅವರು ತಾಲೂಕ ಪಂಚಾಯತ ಸಭಾ ಭವನದಲ್ಲಿ ವಿವಿಧ ಸಮಾಜದ ಮುಖಂಡರ ಸಮ್ಮುಖದಲ್ಲಿ ನಡೆದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಯಾರೇ ಹೋಳಿ ಹಬ್ಬದಲ್ಲಿ ಕಾನೂನು ನಿಯಮ ಉಲ್ಲಂಘಿಸಿದರು ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವದು. ಕಾರಣ ಸಾರ್ವಜನಿಕರು ಹೋಳಿ ಹಬ್ಬವನ್ನು ಶಾಂತಯುತವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ಹಾಗೆ ಅಚರಿಸಬೇಕು. ದಿ.21 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು ಆ ಮಕ್ಕಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಬ್ಬದಲ್ಲಿ ರಾಸಾಯನಿಕ ಬಣ್ಣವನ್ನು ಅಥವಾ ಮೊಟ್ಟೆ ಇನ್ನಿತರ ನಿರ್ಭಂದಿತ ವಸ್ತುಗಳನ್ನು ಉಪಯೋಗಿಸಬಾರದು. ಹುಣ್ಣಿಮೆ ದಿನ ನಡೆಯುವ ಹುಲಗಾಮನ ಮೆರವಣಿಗೆ ಹಾಗೂ ಬಣ್ಣದ ಹಬ್ಬದಂದು ಪೂರ್ಣ ಪ್ರಮಾಣದಲ್ಲಿ ಪೋಲಿಸ್ ಬಂದೋಬಸ್ತ ಇರಲಿದ್ದು ಸಾರ್ವಜನಿಕರು ಶಾಂತಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ನಂತರ ಪಿಎಸ್ಐ ಬಸವರಾಜ ತಿಪ್ಪರಡ್ಡಿ, ಮಂಜುನಾಥ ಘಂಟಿ, ಪರಮೇಶ ಪರಬ ಮಾತನಾಡಿದರು, ಪಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಮುಸ್ತಾಕ ಚೋರಗಸ್ತಿ, ಪಪಂ ಮಾಜಿ ಅಧ್ಯಕ್ಷರಾದ ಆರ್.ಕೆ.ಡಂಬಳ, ನಾಗರಾಜ ಲಕ್ಕುಂಡಿ, ಜಾನೂ ಲಮಾಣಿ, ಎಸ್.ಪಿ.ಹಾವೇರಿಮಠ, ರವಿ ಗೊಡೆಣ್ಣವರ, ದೇವಣ್ಣ ಬಟ್ಟೂರ, ಗೂಳಪ್ಪ ಕರೀಗಾರ, ಮಾಬೂಸಾಬ ಲಕ್ಷ್ಮೇಶ್ವರ, ಡಿ.ಎಸ್.ನದಾಫ, ತೋರದ, ನಾಯಕ ಮುಂತಾದವರು ಇದ್ದರು.