ಶಿರಹಟ್ಟಿ : ಬಿಜೆಪಿ ಗೆಲುವಿಗೆ ವಿಜಯೋತ್ಸವ

ಲೋಕದರ್ಶನ ವರದಿ

ಶಿರಹಟ್ಟಿ 24: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಶಿವಕುಮಾರ ಉದಾಸಿ ಅವರ ಗೆಲವು ಹಾಗೂ ರಾಷ್ಟ್ರದಲ್ಲಿ ಮತ್ತೆ ಮೋದಿಜಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಯುಕ್ತ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

ತಾಲೂಕ ಆಡಳಿತ ಹಾಗೂ ಪೋಲಿಸ್ ಇಲಾಖೆ ಅವರು ಎಲ್ಲ ಪಕ್ಷಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆ ಕರೆದು ಪಟ್ಟಣದಲ್ಲಿ 144 ಕಲಂ ಜಾರಿಯಲ್ಲಿದ್ದು ಗುಂಪು-ಗುಂಪಾಗಿ ನಿಲ್ಲುವದು, ಬಣ್ಣ ಹಾಗೂ ಪಟಾಕ್ಷಿ ಸಿಡಿಸಿ ವಿಜಯೊತ್ಸವ ಆಚರಿಸದಂತೆ ಸೂಚಿಸಿದ ಕಾರಣ ಇಂದು ಪಲಿತಾಂಶ ತಿಳಿದ ಬಹು ಗಂಟೆಗಳ ನಂತರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. 

ಈ ವೇಳೆ ಬಿಜೆಪಿ ತಾಲೂಕಾ ಎಸ್ಸಿ ಮೊಚರ್ಾ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ ನಮ್ಮ ಲೋಕಸಭಾ ಕ್ಷೇತ್ರ ಹಾಗೂ ರಾಷ್ಟ್ರದಲ್ಲಿ ಬಿಜೆಪಿಗೆ ನಿರಿಕ್ಷೀತ ಗೆಲುವು ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಘಟಾನುಘಟಿ ನಾಯಕರ ಎದುರು ಬಿಜೆಪಿ ಅಭ್ಯಥರ್ಿಯನ್ನು ಗೆಲ್ಲಿಸಿರುವ ಜನರು ರಾಷ್ಟ್ರದಲ್ಲಿ ಮತ್ತೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದಾರೆ. ಎರಡಂಕಿ ತಲುಪುವದಿಲ್ಲ ಎಂದು ಯಡಿಯುರಪ್ಪನವರಿಗೆ ಸವಾಲೆಸೆದಿದ್ದ ವಿರೋಧ ಪಕ್ಷದ ನಾಯಕರು ಎಲ್ಲಿರುವರು ಎಂದು ಪತ್ತೆಹಚ್ಚ ಬೇಕಾಗಿದೆ. ಇನ್ನೂ ರಾಜ್ಯದಲ್ಲಿಯೂ ಮೈತ್ರಿ ಸರಕಾರದ ದಿನಗಳು ಹೆಚ್ಚಿಲ್ಲ ಶಿಘ್ರದಲ್ಲಿಯೇ ಬಿಎಸ್ ಯೆಡೆಯುರಪ್ಪನವರು ಮುಖ್ಯಮಂತ್ರಿಗಳಾಗಿ ನಮ್ಮ ಶಾಸಕರಾದ ರಾಮಣ್ಣ ಲಮಾಣಿ ಮಂತ್ರಿಯಾಗುವದರಲ್ಲಿ ಯಾವುದೆ ಸಂಶಯವಿಲ್ಲ ಎಂದು ವಿಶ್ವಾಸದಿಂದ ನುಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಬಿಜೆಪಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಗೂಳಪ್ಪ ಕರಿಗಾರ, ಅನೀಲ ಮಾನೆ, ಎಲ್ಲಪ್ಪ ಇಂಗಳಗಿ, ನಾಗರಾಜ ಇಂಗಳಗಿ, ಇರಣ್ಣ ಕೋಟಿ, ಸುಧಿರ ಜಮಖಂಡಿ, ಸಂತೋಷ ಕುಬೇರ ಮುಂತಾದವರು ಇದ್ದರು.