ಲೋಕದರ್ಶನ ವರದಿ
ಕಾಗವಾಡ 05: 10 ಸಾವಿರ ಜನಸಂಖ್ಯೆ ಹೊಂದಿರುವ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮ ರವಿವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗಿನವರೆಗೆ ಸಂಪೂರ್ಣವಾಗಿ ಲಾಕ್ಡೌನ್ ಮಾಡಿಕೊಂಡಿದೆ.
ಕೊರೊನಾ ಹೆಮ್ಮಾರಿ ಸೋಂಕು ತಡೆಗಟ್ಟಲು ಇಡೀ ದೇಶ 21 ದಿನ ಲಾಕ್ಡೌನ್ ಘೋಷಿಸಿದೆ. ಇದರಲ್ಲಿ ಕೆಲ ದಿನಗಳು ಮಾತ್ರ ಬಾಕಿಯಿವೆ. ಶಿರಗುಪ್ಪಿ ಗ್ರಾಮದ ಹಿರಿಯರು ಒಂದುಗೂಡಿ ಎಲ್ಲ ಸಮಾಜದ ಪ್ರಮುಖರ ಸಭೆ ಕರೆದು ರವಿವಾರರಂದು ಲಾಕ್ಡೌನ್ ನಿರ್ಣಯ ಕೈಗೊಂಡಿದ್ದಾರೆ.
ದೇಶ ಸ್ವಾತಂತ್ರ್ಯ ಬಳಿಕ ಬಂದಿರುವ ಪ್ಲೇಗ್ ಮಹಾಮಾರಿ ಮತ್ತು ಇನ್ನೀತರ ಸಾಂಕ್ರಾಮಿಕ ಕಾಯಿಲೆಗಳು ಬಂದಾಗ ಇಡೀ ಊರು ಲಾಕ್ಡೌನ್ ಮಾಡಿ ಗ್ರಾಮಕ್ಕೆ ಸಂಪಕರ್ಿಸುವ ರಸ್ತೆಗಳಿಗೆ ಕಂಟಿಗಳು ಹಾಕಿ ಬಂದ್ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಶಿರಗುಪ್ಪಿ ಗ್ರಾಮದ ಪ್ರಮುಖರು ರವಿವಾರ ಬೆಳಿಗ್ಗೆಯಿಂದ ಎಲ್ಲ ವ್ಯವಹಾರಗಳು ಸ್ಥಗೀತಗೊಳಿಸಿ ಲಾಕ್ಡೌನ್ ಮಾಡಿದ್ದಾರೆ.
ಸಂಪೂರ್ಣ ದಿನ ರಸ್ತೆಗಳು ಖಾಲಿ-ಖಾಲಿಯಾಗಿ ಉಳಿದಿದ್ದವು. ಯಾರೊಬ್ಬರೂ ರಸ್ತೆಗೆ ಇಳಿಲಿಲ್ಲಾ. ಈ ಗ್ರಾಮ ಲಾಕ್ಡೌನ್ ಮಾಡಲು ಯಶಸ್ವಿವಾಗಿದೆ. ಗ್ರಾಮದ ಹಿರಿಯರು, ಗ್ರಾಪಂ ಅಧ್ಯಕ್ಷ ಈಕ್ಬಾಲ್ ಕನವಾಡೆ, ಪಿಕೆಪಿಎಸ್ ಅಧ್ಯಕ್ಷ ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ರಾಮಗೌಡಾ ಪಾಟೀಲ, ದೀಪಕ ಪಾಟೀಲ, ವಿಜಯ ಅಕಿವಾಟೆ, ಎಲ್ಲ ಗ್ರಾಪಂ ಸದಸ್ಯರು, ಬೇರೆ ಬೇರೆ ಸಂಸ್ಥೆಯ ಪ್ರಮುಖರು ಲಾಕ್ಡೌನ್ಗೆ ಸಾಥ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಇವರು ಸಂದೇಶದಂತೆ ರಾತ್ರಿ 9 ಗಂಟೆಗೆ ಪ್ರತಿಯೊಬ್ಬರು ತಮ್ಮ ಮನೆಯ ಅಂಗಳಿನಲ್ಲಿ ದೀಪವನ್ನು ಹಚ್ಚಿ ಕೊರೊನಾ ಮಹಾಮಾರಿ ಹೋಗಲಾಡಿಸಲು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.