ಲೋಕದರ್ಶನ ವರದಿ
ವಿಜಯಪುರ 31:ವಿವೇಕಾನಂದರಂತಹ ಹಲವು ಮಹನೀಯರ ಪಾರದರ್ಶಕ ನುಡಿಗಳು ನಮ್ಮ ಜೀವನದ ಅಧ್ಯಯನವಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿಎಲ್ಡಿಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಮಾವೇಶ ಹಾಗೂ ಯುವ ಸಂಘ ಪ್ರಶಸ್ತಿ ಹಾಗೂ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರಲ್ಲಿರುವಂತಹ ಶಕ್ತಿ ಸಾಮಥ್ರ್ಯವನ್ನು ಬಳಸಿಕೊಂಡು ಅದನ್ನು ಒಂದು ಅದಮ್ಯರೂಪವಾಗಿ ಬೆಸುವಂತ ಕಾರ್ಯ ಈ ಸಂಘ ಸಂಸ್ಥೆಗಳದ್ದಾಗಬೇಕಾಗಿದೆ. ಈಗಿನ ಯುವ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ತಮ್ಮ ಅತ್ಯುತ್ತಮವಾದ ಸಮಯವನ್ನೇ ವ್ಯರ್ಥ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶಗಳಿಗೆ ಬಲಿಯಾಗದೇ ಉತ್ತಮ ರಾಷ್ಟ್ರ ನಿಮರ್ಾಣಕ್ಕೆ ಯುವ ಸಮೂಹ ಮುಂದಾಗಬೇಕು ಎಂದು ಹೇಳಿದರು.
ಶಿಕ್ಷಣವಂತಹರಾದ ಯುಕವರು ಮಹನೀಯರ ಜೀವನದ ಸಾಧನೆಗಳನ್ನು ಅಭ್ಯಸಿಸುವುದರ ಮೂಲಕ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೆ ಇರುವುದರಿಂದ ಅವರ ಚಿಂತೆನಗಳು, ಸಕಾರಾತ್ಮಕವಾಗಿರಬೇಕು ಎಂದು ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತಿ ಜಾವೀದ ಜಮಾದಾರ ಅವರು ಮಾತನಾಡಿ, ನಿಸ್ವಾರ್ಥಸೇವೆ ಹಾಗೂ ಶ್ರಮದಾನ ರಾಷ್ಟ್ರ ಸೇವೆಯ ಪ್ರತೀಕವಾಗಿದೆ. ಯುವಜನರು ರಾಷ್ಟ್ರೀಯತೆ ಮತ್ತು ಸಾಮಾಜಿಕ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಯುವಕರು ಈ ಮೂಲಕ ಸಮಾಜದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಕಾರ್ಯಪ್ರವೃತ್ತರಾಗಿ, ಉತ್ತಮ ಸಮಾಜದ ನಿಮರ್ಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಜಿ.ಗೌಡರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಂಘ ಪ್ರಶಸ್ತಿಯನ್ನು ಜಂಬಗಿಯ ಸ್ವಾಮಿ ವಿವೇಕಾನಂದ ಯುವಕ ಸಂಘಕ್ಕೆ ನೀಡಲಾಯಿತು. ದೇಶಭಕ್ತಿ ಮತ್ತು ರಾಷ್ಟ್ರ ನಿಮರ್ಾಣದಲ್ಲಿ ಯುವಜನರ ಪಾತ್ರ ಕುರಿತು ಭಾಷಣ ಸ್ಪಧರ್ೆ ವಿಜೇತ ಪ್ರಥಮ ಸ್ಥಾನ ಪಡೆದ ಕುಮಾರಿ ಶ್ವೇತಾ ಜೈನ್, ದ್ವಿತಿಯ ಸ್ಥಾನ ಪಡೆದ ಕುಮಾರಿ ಲಾಲಬಿ ಹಾಗೂ ತೃತೀಯ ಸ್ಥಾನ ಪಡೆದ ಕುಮಾರ ಮಶಾಕ ಗೌಂಡಿ ಇವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಎಚ್.ಎಂ.ಮುಜಾವರ, ಸಂಗಮೇಶ ಪೂಜಾರಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ.ಲೋಣಿ, ನೆಹರು ಯುವ ಕೇಂದ್ರದ ಡಿ.ದಯಾನಂದ, ಶ್ರೀಮತಿ ಎನ್.ಡಿ.ಸೋಲಾಪುರ, ಎಸ್.ವಿ.ಕುಲಕಣರ್ಿ, ಬಿ.ಬಿ.ಬಿರಾದಾರ ಇತರರು ಉಪಸ್ಥಿತರಿದ್ದರು.