ಗದಗ 24: ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು ಈಗಾಗಲೇ ಜಿಲ್ಲಾಡಳಿತ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಲು ಹಾಗೂ ತಾಲೂಕಾ ಸಹಾಯವಾಣಿಯನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೀವಹಾನಿ ಸಂದರ್ಭದಲ್ಲಿ ವಿಳಂಬಿಸದೇ ಪರಿಹರ ವಿತರಣೆಗೆ ತಹಶೀಲ್ದಾರರು ಕ್ರಮ ಜರುಗಿಸಬೇಕು. ಗದಗ ಹೊರತುಪಡಿಸಿ ಎಲ್ಲ ತಹಶೀಲ್ದಾರವರ ಹತ್ತಿರ ಬೋಟ್ಗಳಿದ್ದು ಅವುಗಳು ಉಪಯೋಗಕ್ಕೆ ಬರುವಂತೆ ಅಗತ್ಯ ದುರಸ್ತಿ ಮಾಡಿಸಿ ಸನ್ನದ್ಧತೆಯಲ್ಲಿ ಇಟ್ಟುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಈ ಹಿಂದಿನ ಸಂದರ್ಭಗಳಲ್ಲಿ ಮಳೆ ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳನ್ನು ಹಳ್ಳಗಳನ್ನು ಗುರುತಿಸಿ ಅವುಗಳ ಮೇಲೆ ನಿಗಾ ಇಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಜಾಗೃತಿ ಮಾಡಬೇಕು. ನಗರ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ , ಸೊಳ್ಳೆ ನಿಯಂತ್ರಕ ಫಾಗಿಂಗ್ ಕಾರ್ಯಗಳನ್ನು ನಿಯಮಿತವಾಗಿ ಜರುಗಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ನಗರ ಹಾಗೂ ಗ್ರಾಮ ಪಂಚಾಯತಿಗಳ ಸಮನ್ವಯತೆಯ ಮೂಲಕ ಅಗತ್ಯದ ಮುನ್ನೆಚ್ಚರಿಕೆ, ಜನಜಾಗೃತಿ ಕಾರ್ಯಗಳನ್ನು ಕೈಕೊಳ್ಳಬೇಕು. ಮಳೆ ಬಿರುಗಾಳಿ ಮುಂತಾದ ಪ್ರಕೃತಿ ವಿಕೋಪಗಳಿಂದ ಹಾನಿಯಾಗುವ ಗ್ರಾಮಗಳಲ್ಲಿ ಕಂದಾಯ ನಿರೀಕ್ಷಕರು ತಕ್ಷಣ ಭೇಟಿ ನೀಡಿ ತಹಶೀಲ್ದಾರರಿಗೆ ಅಗತ್ಯ ಮಾಹಿತಿ ನೀಡಬೇಕು. ವರರದಿಯನ್ನು ಸಲ್ಲಿಸಬೇಕು. ಎಲ್ಲ ತಹಶೀಲ್ದಾರರಲ್ಲಿ ವಿಪತ್ತು ನಿರ್ವಹಣೆಗೆ ಸರಾಸರಿ 25 ಲಕ್ಷ ರೂ..ಗಳು ಇರುವಂತೆ ಅನುದಾನ ನೀಡಲಾಗುತ್ತಿದೆ ಎಂದು ಜಿಲ್ಲಾದಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ರೈತ ಸಮ್ಮಾನ: ಅರ್ಜಿಯ ಜೊತೆಗೆ ಘೋಷಣಾ ಪತ್ರ ಅಗತ್ಯವಾಗಿದ್ದು ಗದಗ ಜಿಲ್ಲೆಯಲ್ಲಿ 1.79 ಲಕ್ಷ ರೈತರ ಪೈಕಿ ಈಗಾಗಲೇ 1 ಲಕ್ಷಕ್ಕೂ ಹೆಚ್ಚಿನ ರೈತರು ಪ್ರಧಾನ ಮಂತ್ರಿ ರೈತ ಸಮ್ಮಾನ ನಿಧಿ ಯೋಜನೆಯಡಿ ನೋಂದಣಿ ಆಗಿದ್ದು ಇನ್ನುಳಿದ 79 ಸಾವಿರ ರೈತರ ಶುಕ್ರವಾರ ದಿ. 28ರ ಒಳಗಾಗಿ ನೋಂದಣಿ ಆಗುವಂತೆ ತಹಶೀಲ್ದಾರರು, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಗಳು, ಚುರುಕಿನಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. ಈ ಯೋಜನೆಯಡಿ ಭೂಮಿ ಹೊಂದಿರುವ ಸಂಘ ಸಂಸ್ಥೆಗಳು, ಮಾಜಿ ಹಾಗೂ ಹಾಲಿ ಸಂವಿಧಾನಿಕ ಹುದ್ದೆ ಹೊಂದಿದ ಕುಟುಂಬಗಳು, ಕೇಂದ್ರ ಹಾಗೂ ರಾಜ್ಯ ಹಾಲಿ ಮಾಜಿ ಸಚಿವರು, ಸಂಸದರು, ಶಾಸಕರು, ನಗರ ಪುರಸಭೆ ಅಧ್ಯಕ್ಷರು, ಗ್ರುಪ್ ಡಿ ಹೊರಡುಪಡಿಸಿ ಸಕರ್ಾರಿ ಸ್ಥಳೀಯ ಸಂಸ್ಥೆಗಳು , ಸಕರ್ಾರಿ ಸ್ವಾಮ್ಯದ ಹಾಲಿ ಹಾಗೂ ಮಾಜಿ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿ, 10 ಸಾವಿರಕ್ಕೂ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು, ತೆರಿಗೆ ಪಾವತಿದಾರರು, ವೃತ್ತಿಪರ ಉದ್ಯೋಗ ನಡೆಸುತ್ತಿರುವವರು, ಈ ಯೋಜನೆಯಡಿ ಅಜರ್ಿ ಸಲ್ಲಿಸಲು ಅರ್ಹರಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ, ಗ್ರಾ. ಪಂ. ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ನಾಡಕಚೇರಿ ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕು.
2018 ರ ಮುಂಗಾರು ಬೆಳೆ ಹಾನಿಯ ಇನ್ಪುಟ್ ಸಬ್ಸಿಡಿ ಪಡೆಯಬೇಕಾಗಿರುವ ಜಿಲ್ಲೆಯ ಬಾಕಿ ರೈತರ ಮಾಹಿತಿಯನ್ನು ತಕ್ಷಣ ಅಪ್ಲೋಡ ಮಾಡಲು ತಹಶೀಲ್ದಾರರು ಕಾರ್ಯನಿರ್ವಹಿಸಭೇಕು. ವಿಳಂಬವಾದಲ್ಲಿ ಅವರೇ ಹೊಣೆಗಾರರರು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ , ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ, ಜಿ.ಪಂ. ಯೋಜನಾ ನಿದರ್ೇಶಕ ಟಿ. ದಿನೇಶ, ತಹಶೀಲ್ದಾರರು, ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕರಿಗಳು, ವಿವಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.