ಲೋಕದರ್ಶನವರದಿ
ಧಾರವಾಡ03: ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಕನರ್ಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ಮಾಜಿ ಸಚಿವರು, ಮಾಜಿಸಭಾಪತಿಗಳು ಹಾಗೂ ವಿಧಾನ ಪರಿಷತ್ತು ಸದಸ್ಯರಾದ ಸನ್ಮಾನ್ಯ ಬಸವರಾಜ ಹೊರಟ್ಟಿ ಉದ್ಘಾಟಿಸಿದ್ದರು.
ನಂತರ ಹೊರಟ್ಟಿ ಮಾತಾನಾಡಿದ ಅವರು ಸಂಘವನ್ನು ಉದ್ಘಾಟನೆ ಮಾಡಿದ್ದು, ನನಗೆ ತುಂಬಾ ಖುಷಿ ತಂದಿದೆ. ಅದೇ ರೀತಿಯಾಗಿ ಸಮಾಜದ ಸಾಧಕರಾದ ವಿಜ್ಞಾನಿ ಡಾ.ಸುಧೀಶ ಅವರನ್ನು ಸನ್ಮಾನ ಮಾಡಿದ್ದು ಬಹಳ ಅರ್ಥಪೂರ್ಣ ಕಾರ್ಯಕ್ರಮಾವಾಗಿದೆ ಈ ದಿಸೆಯಲ್ಲಿ ಈ ಸಂಘವು ಉತ್ತರೋತ್ತರವಾಗಿ ಬೆಳೆಯಲಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ, ಸಂಘದ ವತಿಯಿಂದ ಶಿಕ್ಷಣ ಸಂಸ್ಥೆ, ವಸತಿ ನಿಲಯಗಳನ್ನು ಸ್ಥಾಪಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಲಿ, ಸಂಘದ ಅಧ್ಯಕ್ಷರಾದ ನಿಂಗಪ್ಪ ಸವಣೂರ, ಕುಮಾರ ಪಡೆಪ್ಪವನವರ, ನೇತೃತ್ವದಲ್ಲಿ ಸಂಘವು ಮುನ್ನಡೆದು, ರಾಜ್ಯದಲ್ಲಿ ಬಲಿಷ್ಠ ಸಂಘವಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಮಾತೋಶ್ರೀ ಯಲ್ಲಮ್ಮ ನಾಯ್ಕರ್, ಬಸವರಾಜ ಬಸಲಿಗುಂದಿ, ಸಾಧಕರಾದ ಡಾ. ಸುಧೀಶ, ಕುಮಾರ ಪಡೆಪ್ಪನವರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರಕಾಶ ಉಡಕೇರಿ ವಹಿಸಿದ್ದರು. ಆಂಭದಲ್ಲಿ ಶಾಂಭವಿ ಹಾಗೂ ವಿಜುಶ್ರೀಅವರಿಂದ ಪ್ರಾರ್ಥನೆ ನಡೆಯಿತು. ಅಧ್ಯಕ್ಷರಾದ ನಿಂಗಪ್ಪ ಸವಣೂರ ಸ್ವಾಗತಿಸಿದರು. ಮಾಲತೇಶ ಚೂರಿ ವಂದಿಸಿದರು.