ಕಾನೂನು ಬದ್ಧವಾಗಿ ಚುನಾವಣೆ ಜರುಗಿಸಲು ಶೇಖರಗೌಡ ಕರೆ

ಲೋಕದರ್ಶನ ವರದಿ

ಕೊಪ್ಪಳ 02: ಸಹಕಾರ ಸಂಘಗಳ ಪದಾಧಿಕಾರಿಗಳ ಚುನಾವಣೆಯನ್ನು ಜರುಗಿಸಲು ಆದೇಶ ಬಂದಿದ್ದು, ಸಹಕಾರ ಸಂಘಗಳಲ್ಲಿ ಪಾರದರ್ಶಕತೆಯಿಂದ ಚುನಾವಣೆ ಜರುಗಿಸಲು ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಹಾಗೂ ಸಹಕಾರ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಸಭಾ ಭವನ, ಕುಷ್ಟಗಿ ರಸ್ತೆ, ಕೊಪ್ಪಳದಲ್ಲಿ ಚುನಾವಣೆ ಜರುಗಲಿರುವ ಸಹಕಾರ ಸಂಘಗಳ ಮುಖ್ಯಕಾರ್ಯನಿವರ್ಾಹಕರು ಹಾಗೂ ಸಹಕಾರ ಇಲಾಖಾ ಅಧಿಕಾರಿಗಳಿಗೆ "ಚುನಾವಣಾ ಪೂರ್ವ ಸಿದ್ಧತೆೆ" ಕುರಿತು ಒಂದು ದಿನದ ವಿಶೇಷ ಸಹಕಾರ ತರಬೇತಿ ಕಾರ್ಯಗಾರದಲ್ಲಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರೊಂದಿಗೆ ಕನರ್ಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ, ಬೆಂಗಳೂರು ನಿದರ್ೆಶಕರಾದ ಡಾ. ಶೇಖರಗೌಡ ಮಾಲಿ ಪಾಟೀಲ್  ರವರು ಮಾತನಾಡಿದರು.

ತರಬೇತಿ ಕಾಯರ್ಾಗಾರದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಕುಂತಲಾ ಹುಡೇಜಾಲಿಯವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿದರ್ೆಶಕರಾದ ನೀಲಕಂಠಯ್ಯ ಹಿರೇಮಠ, ಕ.ಸಾ.ಪ. ಅಧ್ಯಕ್ಷರಾದ ರಾಜಶೇಖರ ಅಂಗಡಿ, ಸಹಕಾರ ಸಂಘಗಳ ಉಪ ನಿಬಂಧಕರಾದ, ಎಂ.ಪಿ.ಶೆಲ್ಲಿಕೇರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ, ಬಿ.ಎ.ಕೇಸರಿಮಠ, ವಡ್ಡರಹಟ್ಟಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ, ರಮೇಶ,  ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿಗಳಾದ ಮರಿಯಪ್ಪ ಹಳ್ಳಿ, ಜಿಲ್ಲಾ ಸಹಕಾರ ಯೂನಿಯನ್ ವ್ಯಸ್ಥಾಪಕರಾದ ರಾಜಶೇಖರ ಎಂ. ಹೊಸಮನಿ, ಶ್ರೀಮತಿ ರಾಜ್ಮಾ, ಹುಲಿಗೆಮ್ಮ, ಗವಿಸಿದ್ದಯ್ಯ ಎಸ್. ಹಿರೇಮಠ, ಉಪಸ್ಥಿತರಿದ್ದರು.

ಕಾಯರ್ಾಗಾರದಲ್ಲಿ ಚುನಾವಣೆಯ ಪೂರ್ವ ಸಿದ್ಧತೆ, ಮತದಾರರ ಪಟ್ಟಿ ಪರಿಷ್ಕರಣೆ, ಕಾಯ್ದೆ ಮತ್ತು ಇತರೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಸಹಕಾರ ಸಂಘಗಳ ಉಪ ನಿಬಂಧಕರಾದ, ಎಂ.ಪಿ.ಶೆಲ್ಲಿಕೇರಿ ರವರು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಮಾ ರವರು ಪ್ರಾಥರ್ಿಸಿದರು. ಜಿಲ್ಲಾ ಸಹಕಾರ ಯೂನಿಯನ್ನಿನ ಜಿಲ್ಲಾ ಸಹಕಾರ ಯೂನಿಯನ್ ವ್ಯಸ್ಥಾಪಕರಾದ ರಾಜಶೇಖರ ಹೊಸಮನಿ, ಇವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ರಾಜ್ಮಾ ವಂದಿಸಿದರು. ತರಬೇತಿ ಕಾಯರ್ಾಗಾರದಲ್ಲಿ ಒಟ್ಟು 140 ಪ್ರತಿನಿಧಿಗಳು ಭಾಗವಹಿಸಿದ್ದರು.