ಶೇಡಬಾಳ ಪಪಂ: ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಶಾಸಕ ರಾಜು ಕಾಗೆ ವಿತರಣೆ

Shedabala Papam: Distribution of three wheeler vehicle to MLA Raju Ka for special needs

ಶೇಡಬಾಳ ಪಪಂ: ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಶಾಸಕ ರಾಜು ಕಾಗೆ ವಿತರಣೆ 

ಕಾಗವಾಡ 01: ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನವಾಗಿ ಬದಕುವ ಹಕ್ಕು ಇದ್ದು, ಅದರಂತೆ ವಿಶೇಷ ಚೇತನರೂ ಸಹ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ, ಅವರಿಗೂ ಸಹ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಸಹಕಾರ ನೀಡಲಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. 

ಅವರು, ಶನಿವಾರ ದಿ.01 ರಂದು ಶೇಡಬಾಳ ಪಟ್ಟಣ ಪಂಚಾಯತಿಯ ವತಿಯಿಂದ ಪಟ್ಟಣದ 5 ಜನ ವಿಶೇಷ ಚೇತನರಿಗೆ ಎಸ್‌ಎಫ್‌ಸಿ ಯೋಜನೆಯ ಅನುದಾನದಡಿ ಮಂಜೂರಾದ ತ್ರಿಚಕ್ರ ವಾಹನ ವಿತರಿಸಿ, ಮಾತನಾಡುತ್ತಿದ್ದರು. ಕೇತ್ರದ ಅಭಿವೃದ್ಧಿಗಾಗಿ ಅನುದಾನ ಕೊರೆತೆ ಇಲ್ಲ. ಈಗ ಮುಖ್ಯಮಂತ್ರಿಗಳು ರಾಜ್ಯದ ಪ್ರತಿ ಶಾಸಕರಿಗೆ 10 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದ್ದು, ಈಗಿನ 10 ಕೋಟಿ ಅನುದಾನವನ್ನು ಬಸವೇಶ್ವರ ಯಾತ ನೀರಾವರಿ ಯೋಜನೆಗೆ ವಿನಯೋಗಿಸಲು ಚಿಂತನೆ ನಡೆಸಲಾಗಿದೆ ಎಂದರು. 

ಈ ಸಮಯದಲ್ಲಿ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ, ಉಪಾಧ್ಯಕ್ಷೆ ದೀಪಾ ಹೊನಕಾಂಬಳೆ, ಮುಖಂಡರಾದ ವಿನೋದ ಬರಗಾಲೆ, ಸಚೀನ ಜಗತಾಪ, ಮಹಾವೀರ ಗಣೆ, ಅಣ್ಣಾ ಅರವಾಡೆ, ವೃಷಭ ಚೌಗುಲಾ, ಪ್ರಕಾಶ ಮಾಳಿ, ಸಂಜು ಮುಕುಂದ, ಮುದಕಪ್ಪ ಮಾಳಗಿ ಸೇರಿದಂತೆ ಪ.ಪಂಚಾಯತಿಯ ಎಲ್ಲ ಸದಸ್ಯರು, ಮುಖ್ಯಾಧಿಕಾರಿ ಸುರೇಶ ಪತ್ತಾರ ಮತ್ತು ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.