ರೋಮ್, ಮೇ 2 ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ಭುಜದ ನೋವಿನಿಂದಾಗಿ ಮುಂಬರುವ ಇಟಾಲಿಯನ್ ಓಪನ್ನಿಂದ ವಿಥ್ ಡ್ರಾ ಮಾಡಿಕೊಂಡಿದ್ದಾರೆ ಎಂದು ಟೂರ್ನಿಯ ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಪ್ರಸಕ್ತ ವರ್ಷದ ಜನವರಿಯಲ್ಲಿ ನಡೆದಿದ್ದ ಸೇಂಟ್ ಸೇಂಟ್ ಪಿಟರ್ಸ್ಬರ್ಗ್ಓಪನ್ ಮೊದಲ ಸುತ್ತಿನ ಗೆಲುವಿನ ನಂತರ ಶರಪೋವಾ ಅವರು ಭುಜದ ನೋವಿಗೆ ಒಳಗಾಗಿದ್ದರು. ಅಲ್ಲಿನಿಂದ ಇಲ್ಲಿಯ ತನಕ ಅವರು ಸೂಕ್ತ ಚಿಕಿತ್ಸೆ ಪಡದು ಚೇತರಿಸಿಕೊಳ್ಳುತ್ತಿದ್ದಾರೆ.
ಬಲ ಭುಜಕ್ಕ ಇನ್ನೂ ಸಣ್ಣದೊಂದು ವಿಧಾನವಿದೆ. ಹಾಗಾಗಿ, ಇನ್ನೂ ಕೆಲವು ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಶರಪೋವಾ ಹೇಳಿದ್ದಾರೆ.
2018ರ ಮಧ್ಯೆದಿಂದಲೂ ಭುಜದ ನೋವಿನಿಂದ ಬಳಲುತ್ತಿದ್ದೇನೆ. ಇದೇ ತಿಂಗಳ ಅಂತ್ಯದಲ್ಲಿ ಶುರುವಾಗುವ ಫ್ರೆಂಚ್ ಓಪನ್ನಲ್ಲಿ ಆಡುವುದು ಅನುಮಾನ ಎಂದು ಅವರು ತಿಳಿಸಿದ್ದಾರೆ. ಸೇಂಟ್ ಪಿಟರ್ಸ್ಬರ್ಗ್ ಓಪನ್ ವಿಥ್ ಡ್ರಾ ಮಾಡಿಕೊಂಡ ಬಳಿಕ, ಶರಪೋವಾ, ದಿ ಸ್ಟಟ್ಗಾಟರ್್ ಓಪನ್, ಮ್ಯಾಡ್ರಿಡ್ ಓಪನ್ ಟೂರ್ನಿ ಗಳನ್ನು ವಂಚಿತರಾಗಿದ್ದರು.