ಗ್ರಾಹಕರ ಸಲಹಾ ಸಮಿತಿಗೆ ಶರಣಮ್ಮ ಆಯ್ಕೆ

Sharanamma elected to Consumer Advisory Committee

ಗ್ರಾಹಕರ ಸಲಹಾ ಸಮಿತಿಗೆ ಶರಣಮ್ಮ ಆಯ್ಕೆ 

ಸಿಂದಗಿ 01: ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ 

ವಿದ್ಯುತ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಿಂದಗಿ ಉಪ ವಿಭಾಗ ಹಾಗೂ ಸಿಂದಗಿ ಶಾಖಾ ಕಚೇರಿ ಮಟ್ಟದ ಗ್ರಾಹಕರ ಸಲಹಾ ಸಮಿತಿಗೆ ಮಹಿಳಾ ಪ್ರತಿನಿಧಿಯಾಗಿ ಶರಣಮ್ಮ ನಾಯಕ್ ಅವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.  

         ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆಗೊಂಡಿರುವ ಶರಣಮ್ಮ ನಾಯಕ್ ಅವರಿಗೆ ಸಿಂದಗಿ ಮಹಿಳಾ ಬಳಗ ಮತ್ತು ಕಾಂಗ್ರೆಸ್ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.