ಶರಣಮ್ಮ ಪಾಟೀಲ್ ಜಯ ಇನ್ನರ್ ವೀಲ್ ಕ್ಲಬ್ ಸದಸ್ಯರ ಸಂಭ್ರಮಾಚರಣೆ
ಕೊಪ್ಪಳ 05: ಇನ್ನರ್ ವೀಲ್ ಕ್ಲಬ್ ಕೊಪ್ಪಳ ಜಿಲ್ಲಾ ಘಟಕಕ್ಕೆ ಐಎಸ್‌ಓ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಜಯ ಸಾಧಿಸಿದ ಕೊಪ್ಪಳ ಇನ್ನರ್ ವೀಲ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶರಣಮ್ಮ ಪಾಟೀಲ್ ಜಯ ಸಾಧಿಸಿರುವುದಕ್ಕೆ ಕ್ಲಬ್ಬಿನ ಅಧ್ಯಕ್ಷ ರಾದ ಉಮಾ ಮಹೇಶ್ ತಂಬ್ರಳ್ಳಿ ರವರ ನೇತೃತ್ವದಲ್ಲಿ ಕೊಪ್ಪಳದ ಅವರ ನಿವಾಸದಲ್ಲಿ ಕ್ಲಬ್ಬಿನ ಪದಾಧಿಕಾರಿಗಳು ಹಾಗೂ ಸದಸ್ಯರು ಸಂಭ್ರಮಾಚರಣೆ ನಡೆಸಿದರು.
ಕೇಕ್ ಕತ್ತರಿಸಿ ಸಿಹಿ ಹಂಚಿಸಿ ಹರ್ಷ ವ್ಯಕ್ತಪಡಿಸಿ ನೂತನ ಜಿಲ್ಲಾ ಐಎಸ್‌ಒ ಶರಣಮ್ಮ ಪಾಟೀಲ್ ರವರಿಗೆ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿ ದರು,ಸಂಭ್ರಮಾಚರಣೆಯ ನೆತೃತ್ವ ವಹಿಸಿದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಯವರು ಮಾತನಾಡಿ ಶರಣಮ್ಮ ಪಾಟೀಲ್ ರವರ ಆಯ್ಕೆ ನಮ್ಮೆಲ್ಲರಿಗೆ ಹೆಮ್ಮೆ ನಮ್ಮ ಕ್ಲಬ್ಬಿಗೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ ಅವರು ಒಬ್ಬ ಪ್ರತಿಭಾವಂತ ಮಹಿಳಾ ನಾಯಕಿ ಯಾಗಿದ್ದು ಕ್ಲಬ್ಬಿನ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ ಸಾಮಾನ್ಯ ಬಡ ಜನರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ, ಅವರು ಈಗ ಕ್ಲಬ್ಬಿನ ಜಿಲ್ಲಾ ಐಎಸ್‌ಓ ಯಾಗಿದ್ದು ನಮ್ಮೆಲ್ಲರಿಗೆ ಹರ್ಷ ಉಲ್ಲಾಸ ಉಂಟು ಮಾಡಿದೆ ಎಂದು ಹೇಳಿ ಅವರನ್ನು ಕ್ಲಬ್ಬಿನ ಎಲ್ಲಾ ಸದಸ್ಯರ ಪರವಾಗಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್ ಐಎಸ್‌ಓ ಮಧು ನಿಲೋಗಲ್ ಎಡಿಟರ್ ನಾಗವೇಣಿ ಗರುರ ಖಜಾಂಚಿ ಆಶಾ ಕವಲೂರ್ ಕ್ಲಬ್ಬಿನ ಮಾರ್ಗದರ್ಶಕರು ಹಾಗೂ ಹಿರಿಯ ಸದಸ್ಯರಾದ ಡಾ,ರಾಧಾ ಕುಲಕರ್ಣಿ ಹಿರಿಯ ಸದಸ್ಯರಾದ ಸುಮಂಗಳ ಹಂಚಿನಾಳ, ನೀತಾ ತಂಬ್ರಳ್ಳಿ ಪದ್ಮ ಜೈನ್ ಮತ್ತು ವಿದ್ಯಾ ಬೆಟಿಗೇರಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಮಹಿಳೆಯರು ಪಾಲ್ಗೊಂಡಿದ್ದರು.