ಶರಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Sharan Madiwala Machideva Jayanti celebration

ಶರಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆ  

ತಾಳಿಕೋಟೆ, 01:  ಪಟ್ಟಣದ ಪ್ರತಿಷ್ಠಿತ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಶನಿವಾರ ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು ಶರಣ ಶ್ರೀ ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ಹಾಗೂ ದುರ್ಬಲರ ಶೋಷಣೆ ವಿರುದ್ಧ ಬಸವಣ್ಣನವರು ಆರಂಭಿಸಿದ ಆಂದೋಲನದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದರು. ಇವರು ಬಸವಣ್ಣನವರು ಕಟ್ಟಿದ ಶರಣರ ಅಗ್ರಗಣ್ಯ ಬಳಗದಲ್ಲಿ ಗುರುತಿಸಿಕೊಳ್ಳುತ್ತಾರೆ. ಇವರ ಆದರ್ಶ ಜೀವನ ನಮಗೆ ಮಾದರಿಯಾಗಬೇಕಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಮಸ್ತ ಗುರುಬಳಗದವರು ಮತ್ತು ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೇರಿಕೊಂಡು ಪೂಜೆಯನ್ನು ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯ ಸಂತೋಷ ಪವಾರ, ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ,ಭೀಮನಗೌಡ ಸಾಸನೂರ,ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ, ಬಸವರಾಜ ಸವದತ್ತಿ, ಮೌಲಾಲಿ ವಾಲಿಕಾರ, ಸಿದ್ದನಗೌಡ ಮೂದನೂರು, ಶರಣಗೌಡ ಕಾಚಾಪುರ. ಸಿದ್ದನಗೌಡ ಚೌದರಿ, ಸಂಜುಕುಮಾರ ಭಜಂತ್ರಿ,ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ,ದೇವಿಂದ್ರ ಗುಳೆದ, ಅನಿತಾ ಚೌದ್ರಿ, ಅಂಬುಜಾ ಹಜೇರಿ, ರಾಜಬಿ ಬಿದರಿ, ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಮೇಘಾ ಪಾಟೀಲ, ಮುಬಿನ ಮುರಾಳ, ತನುಶ್ರೀ ಮಹೇಂದ್ರಕರ, ಶಂಕ್ರಮ್ಮ, ಮುಬಾರಕ ಬನಹಟ್ಟಿ ಹಾಗೂ ಸರ್ವ ಗುರು ಬಳಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.