ಹೈದ್ರಾಬಾದ್ 12:
ಆಡಿದ ಚೊಚ್ಚಲ ಟೆಸ್ಟ್
ಪಂದ್ಯದಲ್ಲೆ
ಯುವ ವೇಗಿ ಶಾರ್ದೂಲ್ ಠಾಕೂರ್ ಗಾಯದ ಸಮಸ್ಯೆಗೆ ಗುರಿಯಾಗಿ
ಮೈದಾನದಿಂದ ಹೊರ ನಡೆದಿದ್ದಾರೆ.
ಹೈದ್ರಾಬಾದ್ನಲ್ಲಿ ಆರಂಭವಾದ ಟೀಂ ಇಂಡಿಯಾ ಮತ್ತು
ವೆಸ್ಟ್ ಇಂಡೀಸ್ ನಡುವಿನ
ಎರಡನೇ ಟೆಸ್ಟ್ ಆರಂಭಕ್ಕೂ
ಮುನ್ನ
ಯುವ ವೇಗಿ ಶಾರ್ದೂಲ್ ಠಾಕೂರ್ ತಂಡದ ಕೋಚ್ ರವಿ ಶಾಸ್ತ್ರಿ ಅವರಿಂದ ಟೆಸ್ಟ್ ಕ್ಯಾಪ್
ಪಡೆದು
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ
ಮಾಡಿದ್ರು.
ಖುಷಿಯಿಂದಲೆ ಕಣಕ್ಕಿಳಿದ
ಶಾರ್ದೂಲ್
ಠಾಕೂರ್
ಸಂತಸ
ಹೆಚ್ಚು
ಹೊತ್ತು ಇರಲಿಲ್ಲ. ನಾಲ್ಕನೆ ಓವರ್ನಲ್ಲಿ
ಕಿರಾನ್
ಪೊವೆಲ್ಗೆ
ಬೌಲಿಂಗ್ ಮಾಡುವಾಗ ಶಾರ್ದೂಲ್
ಗಾಯದಿಂದ ಬಳಲಿದವರಂತೆ ಕಂಡು ಬಂದರು.
ತಂಡದ ಫಿಸಿಯೊ ಪಾಟ್ರಿಕ್ ಫಾರ್ಹರ್ಥ್ ತಕ್ಷಣ ಮೈದಾನಕ್ಕೆ ಬಂದು ಚಿಕಿತ್ಸೆ
ನೀಡಿ ಮೈದಾನದಿಂದ ಹೊರಗೆ ಕರೆದಕೊಂಡು ಹೋದರು.
ಸ್ಕ್ಯಾನಿಂಗ್ಗೆ
ಒಳಪಟ್ಟಿರುವ
ಶಾದೂರ್ಲ್ ಠಾಕೂರ್ ಮೊದಲ ದಿನ ಕಣಕ್ಕಿಳಿಯುವುದಿಲ್ಲ. ಗಾಯದ ತೀವ್ರತೆ ಕಂಡು ತಂಡದ ಮಂಡಳಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿದು ಬಂದಿದೆ.