ಕೊಡಗಾನೂರ ಗ್ರಾಪಂ ಅಧ್ಯಕ್ಷರಾಗಿ ಶಾಂತಮ್ಮ ಅವಿರೋಧ ಆಯ್ಕೆ

Shantamma elected unopposed as Kodaganur village president

ಕೊಡಗಾನೂರ ಗ್ರಾಪಂ ಅಧ್ಯಕ್ಷರಾಗಿ ಶಾಂತಮ್ಮ ಅವಿರೋಧ ಆಯ್ಕೆ  

ತಾಳಿಕೋಟಿ 18: ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಕೊಡಗಾನೂರ ಗ್ರಾಮ ಪಂಚಾಯತ್ ನ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾವದಗಿ ಗ್ರಾಮದ ಶಾಂತಮ್ಮ ಮಲಕನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಶಾಂತಮ್ಮ ಮಲಕನ ಗೌಡ ಪಾಟೀಲ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು, ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಚುನಾವಣಾ ಅಧಿಕಾರಿ ನಿಂಗಪ್ಪ ಮಸಳಿ ಅವರು ಶಾಂತಮ್ಮ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.  

ಒಟ್ಟು 21 ಜನ ಸದಸ್ಯರ ಬಲ ಹೊಂದಿರುವ ಕೊಡಗಾನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರ ಈ ಚುನಾವಣೆಯಲ್ಲಿ 14 ಜನ ಸದಸ್ಯರು ಹಾಜರಿದ್ದು ಏಳು ಜನ ಸದಸ್ಯರು ಗೈರಾಗಿದ್ದರು.ತಾಪಂ ನ ಬಸನಗೌಡ ಚೌದ್ರಿ,ಪಿಡಿಒ ಅನೀಲಕುಮಾರ ಕಿರಣಗಿ,ದೊರೆಗೋಳ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.  

ವಿಜಯೋತ್ಸವ: ಜೆಡಿಎಸ್ ಮುಖಂಡರಾದ ಬಸನಗೌಡ ವಣಿಕ್ಯಾಳ,ಮಡು ಸಾಹುಕಾರ ಬಿರಾದಾರ,ಮಲ್ಲನಗೌಡ ಪೊಲೀಸ್ ಪಾಟೀಲ, ರಾಜುಗೌಡ ಕೋಳೂರು ನೇತೃತ್ವದಲ್ಲಿ ಆಯ್ಕೆಗೊಂಡ ನೂತನ ಅಧ್ಯಕ್ಷೆ ಶಾಂತಮ್ಮ ಪಾಟೀಲ ವಿಜಯೋತ್ಸವ ಆಚರಿಸಿದರು.ಮುಖಂಡರಾದ ಬಸನಗೌಡ ಪಾಟೀಲ (ಲಕ್ಕುಂಡಿ), ವೀರೇಶ ಪಾಟೀಲ (ಕಾರಗನೂರ), ಮುತ್ತಣ್ಣಗೌಡ ಬಿರಾದಾರ,ಬಸನಗೌಡ ಹಳ್ಳಿ ಪಾಟೀಲ, ಮುತ್ತುಗೌಡ ಪಾಟೀಲ,ಸಿದ್ದನಗೌಡ ಬಿರಾದಾರ, ಮುತ್ತುರಾಜ ಜಾಗೀರದಾರ,ಅಶೋಕ ಅಸ್ಕಿ,ಸಾಹೇಬಗೌಡ ಬಿರಾದಾರ,ಬಸನಗೌಡ ಬಿರಾದಾರ,ಭೀಮನಗೌಡ ತಂಗಡಗಿ,ಪ್ರಭುಗೌಡ ಪಾಟೀಲ,ಗೌಡಪ್ಪಗೌಡ ಮಾಳಿ (ಬಿಳೆಭಾವಿ).ಶಾಂತು ನಾಯಕ ಇದ್ದರು.