ವಿಶ್ವ ಕಂಡ ಶ್ರೇಷ್ಠ ಸಂತರಲ್ಲಿ ಸಿದ್ದೇಶ್ವರ ಶ್ರೀಗಳು ಒಬ್ಬರು ಶಂಕರಗೌಡ ಪಾಟೀಲ

Shankar Gowda Patil is one of the greatest saints the world has seen

ವಿಶ್ವ ಕಂಡ ಶ್ರೇಷ್ಠ ಸಂತರಲ್ಲಿ ಸಿದ್ದೇಶ್ವರ ಶ್ರೀಗಳು ಒಬ್ಬರು ಶಂಕರಗೌಡ ಪಾಟೀಲ 

ಇಂಡಿ  03: ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಾಹಾಸ್ವಾಮಿಗಳವರ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ನಿಕಟಪೂರ್ವ ದೆಹಲಿ ವಿಶೇಷ ಪ್ರತಿನಿದಿ ಶಂಕರಗೌಡ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಿದ್ದೇಶ್ವರ ಶ್ರೀಗಳು ವಿಶ್ವ ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದರು ಅವರು ನಮ್ಮ ವಿಜಯಪೂರ ಜಿಲ್ಲೆಯ ಹೆಸರನ್ನು ವಿಶ್ವಕ್ಕೆ ಪರಿಚೈಸಿದ್ದು ಸಿದ್ದೇಶ್ವರ ಶ್ರೀಗಳು ಅಂದರೆ ತಪ್ಪಾಗಲಾರದು.ತಮ್ಮ ಜ್ಞಾನದ ಮಾತುಗಳ ಮೂಲಕ ವಿಶ್ವದ ಜನರಿಗೆ ಪ್ರೇರಕಶಕ್ತಿಯಾಗಿ, ನಡೆದಾಡುವ ದೇವರಾಗಿದ್ದರು. ಅವರ ಮನಮುಟ್ಟುವ ಪ್ರವಚನವೇ ನಮ್ಮ ಮನಸನ್ನು ಪರಿವರ್ತಿಸುವ ಶಕ್ತಿಯಾಗಿದೆ ಎಂದು ಹೇಳಿದರು.ನಂತರ ಮಾತನಾಡಿದ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಅವರು ಸಿದ್ದೇಶ್ವರ ಶ್ರೀಗಳ ಪ್ರವಚನವೇ ಸರ್ವಸ್ವ. ಅವರ ಪ್ರವಚನ ಅಮೃತ ಸಮಾನ. ಪ್ರವಚನದ ಮೂಲಕ ದೇಶ-ವಿದೇಶಗಳಲ್ಲಿ ಜ್ಞಾನದೀವಿಗೆ ಹಿಡಿದ, ಸರಳತೆಯ ಸಾಕಾರಮೂರ್ತಿ,ಜಾತಿ, ಕುಲ, ಧರ್ಮ, ವರ್ಗ, ಲಿಂಗ ಭೇದ ಎನ್ನದೆ ಸರ್ವರ ಏಳಿಗೆಗೆ ಸಂದೇಶ ಸಾರಿದ ಸಿದ್ದೆಶ್ವರ ಶ್ರೀಗಳು ಶತಮಾನ ಕಂಡ ಶ್ರೇಷ್ಠ ಸಂತ ಎಂದು ಹೇಳಿದರು.ಬಿಜೆಪಿ ಮುಖಂಡರಾದ ಮಂಜುನಾಥ ವಂದಾಲ ಅವರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ತಮ್ಮ ಪ್ರವಚನಗಳ ಮೂಲಕ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಪರಿಚಯ ಮಾಡಿಕೊಟ್ಟಿರುವ ಶ್ರೀಗಳು ಸಮಾಜಕ್ಕೆ ಜ್ಞಾನವನ್ನು ಹಂಚಿದ್ದಾರೆ.ಶ್ರಿಗಳ ಜೀವನವೇ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಳೂರು ಸಿದ್ದಾರೂಢ ಮಠದ ಪರಮ ಪೂಜ್ಯ ಶಂಕರಾನಂದ ಮಾಹಾಸ್ವಾಮಿಗಳು.ನಿಂಬಾಳ ಗುರುದೇವ ಆಶ್ರಮದ ತೇಜೋಮಯಾನಂದ ಮಾಹಾಸ್ವಾಮಿಗಳು, ಅಥರ್ಗಾ ಗುರುದೇವ ಆಶ್ರಮದ ಈಶಪ್ರಸಾದ ಮಾಹಾಸ್ವಾಮಿಗಳು ಹಿರೇರೂಗಿ ಜೇಟ್ಟಿಗರಾಯ ಪೂಜಾರಿ,ನಿಂಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀಬಾಯಿ ನಾಯ್ಕೊಡಿ, ಇಂಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ, ದಾನಪ್ಪ ರೂಗಿ,ಸಂಜು ರೂಗಿ,ಮಾಹಾದೇವ ಇಂಗಳೆ ಶ್ರೀಶೈಲ ವಂದಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಗಜಾಸೂರ ಪುಟಾಣಿ ನಿರೂಪಿಸಿದರು.ಎಸ್ ಎಸ್ ವಂದಾಲ ವಂದಿಸಿದರು.