ಲೋಕದರ್ಶನ ವರದಿ
ಕೊಪ್ಪಳ 20: ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು, ಕರ್ಮಭೂಮಿ ಕನ್ನಡ ಸಂಘ ಬಿಚ್ಚೊಲಿ, ಗೋವಾ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಗೋವಾದ ಬಿಚ್ಚೋಲಿ ನಗರದ ಹೀರಾಬಾಯಿ ಹಾಲ್ನಲ್ಲಿ 11ನೇ ಬಾರಿಗೆ ಜರುಗಿದ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಹುಬ್ಬಳ್ಳಿ ನಿವಾಸಿ ಬೆಂಗಳೂರಿನ ಕರ್ನಾಟಕ ಉರ್ದು ಅಕ್ಯಾಡಮಿ ಸದಸ್ಯ ಹಾಗೂ ಉರ್ದು ಪತ್ರಕರ್ತ ಶಾಹಿದ್ ಖಾಜಿ ಇವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರದ ಆಯೂಶ್ ಇಲಾಖೆ ಮಂತ್ರಿ ಪ್ರಮೊಧ ನಾಯಕ ರವರು ಗೋವಾ ಕನ್ನಡಿಗರ ಪರವಾಗಿ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.
ಶಾಹಿದ್ ಖಾಜಿರವರು ಝೀ ಸಲಾಂ ವಾರ್ತೆಯ ಪ್ರತಿನಿಧಿಯಾಗಿ ಹಾಗೂ ಉರ್ದು ಭಾಷೆಯ ಅಭಿವೃಧ್ದಿಗಾಗಿ ಶ್ರಮಿಸಿದ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಕೇಂಧ್ರದ ಆಯುಶ ಇಲಾಖೆ ಮಂತ್ರಿ ಪ್ರಮೊಧ ನಾಯ್ಕೆ, ಬಿಚ್ಚೊಲಿ ಮಾಯಂ ಕ್ಷೇತ್ರದ ಶಾಸಕ ರಾಜೇಶ ಪಾಟ್ನೇಕರ್, ಸಮ್ಮೇಳನದ ಸರ್ವಾಧ್ಯಕ್ಷ ಡಾ. ವಿ.ಆರ್.ತಾಳಿಕೋಟಿ, ಕರ್ಮ ಭೂಮಿ ಕನ್ನಡ ಸಂಘ, ಗೋವಾದ ಅಧ್ಯಕ್ಷ ಹನುಮಂತ ರೆಡ್ಡಿ ಶಿರೂರ್, ಗೋವಾ ಕನ್ನಡಿಗರ ನಾಯಕ ಸಿದ್ದಣ್ಣ ಮೇಟಿ, ಬಿಚ್ಚೋಲಿ ನಗರಸಭೆ ಅಧ್ಯಕಕ್ಷ ಸತೀಷ್ ಗಾಂವ್ಕರ್, ಮಾಜಿ ಶಾಸಕ ನರೇಶ್ ಸಾವಾಳ್, ಸಂಘಟಕ ಮಹೇಶ ಸುರ್ವೆ ಹಾಗೂ ತಿರುಳುಗನ್ನಡ ಸಾಹಿತ್ಯ ಪರತಿಷ್ಠಾನದ ಜಿಲ್ಲಾಧ್ಯಕ್ಷ ಎಂ. ಸಾದಿಕ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.