ಶೇಡಬಾಳ 25: ಶೇಡಬಾಳ ಪಟ್ಟಣದ ಶಾಂತಿಸಾಗರ ದಿಗಂಬರ ಜೈನ ಆಶ್ರಮದಲ್ಲಿರುವ ಆದಿನಾಥ ತೀರ್ಥಂಕರ ಜೈನ ಮಂದಿರದ 71 ನೇ ವಾಷರ್ಿಕೋತ್ಸವ ಪೂಜಾ ಕಾರ್ಯಕ್ರಮ ಸೋಮವಾರ ದಿ. 25 ರಂದು ಶ್ರದ್ಧಾ ಭಕ್ತಿಯಿಂದ ಜರುಗಿತು.
ಜೈನ ಸಂಸ್ಕೃತಿಯ ಅತೀ ಪ್ರಾಚೀನ ನಾಂದಣಿ ಧರ್ಮ ಪೀಠದ ಭಟ್ಟಾರಕ ಪಟ್ಟಾಚಾರ್ಯ ಜಿನಸೇನ ಸ್ವಾಮಿಜಿಯವರ ಆದೇಶದಂತೆ ಈ ವಾಷರ್ಿಕ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ 6 ಗಂಟೆಗೆ ಅಂಬಾರಿ ಹೊತ್ತ ಆನೆಯ ಮೇಲೆ ಜಿನಶಾಸನದ ಧ್ವಜದ ಮೆರವಣಿಗೆ ಜರುಗಿತು. ವಾದ್ಯ ವೈಭವದೊಂದಿಗೆ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. 8 ಗಂಟೆಗೆ ಧ್ವಜವಂದನೆ ಕಾರ್ಯಕ್ರಮ ಜರುಗಿತು. 10 ಗಂಟೆಗೆ ಭಗವಾನ ಆದಿನಾಥ ತೀರ್ಥಂಕರರಿಗೆ ಅಭಿಷೇಕ, ಅಷ್ಟಕ ಪೂಜೆ ಮೊದಲಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ಸಾಯಂಕಾಲ 5 ಗಂಟೆಗೆ ಮಂಗಲ ಕುಂಭ ಮೆರವಣಿಗೆ 108 ಕಲಶಗಳಿಂದ ಭಗವಂತರಿಗೆ ಅಭಿಷೇಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಶ್ರಾವಕ ಶ್ರಾವಕಿಯರು, ಗ್ರಾಮಸ್ಥರು ಇದ್ದರು.