ಶೇಡಬಾಳ 15: ದೇಶದ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಅಭ್ಯಥರ್ಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿ ಮತದಾರರ ಮೇಲಿದೆ. ಆದ್ದರಿಂದ ಮತದಾರರು ಮತದಾನದಿಂದ ದೂರ ಉಳಿಯದೇ ಕಡ್ಡಾಯವಾಗಿ ಮತ ಚಲಾಯಿಸಿ ಯೋಗ್ಯ ಅಭ್ಯಥರ್ಿಯನ್ನು ಆಯ್ಕೆಗೊಳಿಸುವಂತೆ ಪಪಂ ಸದಸ್ಯರಾದ ಪ್ರಕಾಶ ಮಾಳಿ ಕರೆ ನೀಡಿದರು.
ಶೇಡಬಾಳ ಪಟ್ಟಣ ಪಂಚಾಯತಿ ಶೇಡಬಾಳ ಸನ್ಮತಿ ವಿದ್ಯಾಲಯ ಸ್ಕೌಟ್ ಮತ್ತು ಗೈಡ್ಸ್, ಭಂಡಾರೆ ಶಾಲೆ, ವಿದ್ಯಾನಂದ ಶಾಲೆ, ಸಕರ್ಾರಿ ಶಾಲೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಹಾಗೂ ಅಂಗನವಾಡಿ, ಆಶಾ ಕಾರ್ಯಕತರ್ೆಯರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮತದಾನ ಮಹತ್ವದ ಕುರಿತು ಅವರು ಮಾತನಾಡಿದರು.
ಪ್ರಜೆಗಳಿಗೆ ಮತದಾನ ನಮ್ಮ ಸಂವಿಧಾನ ನೀಡಿದ ಬಹುದೊಡ್ಡ ಹಕ್ಕು. ನಮ್ಮ ಹಾಗೂ ದೇಶದ ಅಭಿವೃದ್ಧಿ ಸುರಕ್ಷತೆಗಾಗಿ ಉತ್ತಮ ಅಭ್ಯಥರ್ಿಗಳನ್ನು ಆಯ್ಕೆ ಮಡುವ ಅಸ್ತ್ರ ಮತದಾನ. ಅದನ್ನು ಪ್ರತಿಯೊಬ್ಬರು ಉಪಯೋಗಿಸಬೇಕು. ಶಾಲಾ ವಿದ್ಯಾಥರ್ಿಗಳು ಅರಿವು, ಜಾಗೃತಿ ಮೂಡಿಸಿ ಮತದಾನಕ್ಕೆ ಪ್ರೇರೆಪಿಸಬೇಕು ಎಂದರು.
ಸನ್ಮತಿ ವಿದ್ಯಾಲಯದ ಮುಖ್ಯಾಧ್ಯಾಪಕಿ ಎಂ.ಎನ್.ಕಾಳೆನಟ್ಟಿ, ಸ್ಕೌಟ್ ಮತ್ತು ಗೈಡ್ಸ್ನ ಶಿಕ್ಷಕ ಎಂ.ಕೆ.ಕಾಂಬಳೆ, ಬಾಹುಬಲಿ ನಾಂದ್ರೆ, ದರೂರೆ, ಪಪಂ ಸದಸ್ಯರಾದ ಪ್ರಕಾಶ ಮಾಳಿ, ಶಾಂತಿನಾಥ ಉಪಾಧ್ಯೆ, ಶಾಂತಿನಾಥ ಮಾಲಗಾಂವೆ, ಸಂತೋಷ ಮುಜಾವರ ಸೇರಿದಂತೆ ಸಕರ್ಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.