ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಅಭಿಯಾನ

ಧಾರವಾಡ 26: ಡಿಸೆಂಬರ 20 ರಿಂದ ಫೆಬ್ರುವರಿ 22 ರ ವರಿಗೆ ಮುಂಬೈಯಿಂದ ದೆಹಲಿಯವರಿಗೆ ಸುಮಾರು 10.000 ಸಾವಿರ ಕಿಲೋಮೀಟರ ಪ್ರಯಾಣಿಸಲಿರುವ ಗರಿಮಾ ಯಾತ್ರೆ ಸೋಮವಾರ ಮಧ್ಯಾಹ್ನ ಧಾರವಾಡಕ್ಕೆ ಆಗಮಿಸಿತ್ತು.

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಆಗ್ರಹಿಸಿ ದೇಶದ್ಯಾಂತ ಹಮ್ಮಿಕೊಂಡಿರುವ ಈ ಜನ ಜಾಗೃತಿ ಗರಿಮಾ ಯಾತ್ರೆ ಅಭಿಯಾನ ಕ್ಕೆ  ಧಾರವಾಡದ ಹಲವು ಎನ್ ಜಿ ಓ ಸಾಥ್ ನೀಡಿ ಯಾತ್ರೆಯಲ್ಲಿ ಪಾಲ್ಗೊಂಡವು.

ಡಿ. 20ರಿಂದ ಫೆ. 22ರವರೆಗೆ ಮುಂಬಯಿನಿಂದ ದೆಹಲಿಯವರಗೆ  ನಡೆಯಲಿರುವ ಈ ಯಾತ್ರೆಯಲ್ಲಿ ಸುಪ್ರೀಂಕೋಟರ್್ ವರೆಗೆ ಹೋರಾಡಿರುವ ವಿಶಾಖ ಪ್ರಕರಣದ ರೂವಾರಿ ಬಾವ್ರಿ ದೇವಿ ಭಾಗಿಯಾಗಿರುವುದು ವಿಶೇಷವಾಗಿದೆ. 

24 ರಾಜ್ಯಗಳ ಕ್ರಮಿಸಿ 200 ಜಿಲ್ಲೆಗಳ ಮುಖಾಂತರ 65 ದಿವಸಗಳ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಅಭಿಯಾನ ವತಿಯಿಂದ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಆಗಮಿಸಿದ ಯಾತ್ರೆಗೆ ಧಾರವಾಡದ ಕಲಾ ಭವನದಲ್ಲಿ ಸ್ವಾಗತ ಕೋರಲಾಯಿತು.

ಬಳಿಕ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಗರಿಮಾ ಯಾತ್ರೆ  ಅಲ್ಲಿ ಮಾನವ ಸರಪಳಿ ನಿಮರ್ಿಸಿ ಅರ್ಧಗಂಟೆಗೂ ಅಧಿಕ ಕಾಲ ವಿಶಾಖ ಪ್ರಕರಣಕ್ಕಾಗಿ ಬಾವ್ರಿ ದೇವಿ ನಡೆಸಿದ ಹೋರಾಟದ ಎಳು ಬೀಳು, ಅವರ ಮೇಲೆ ಆದ ದೌರ್ಜನ್ಯ, ಹಿಂಸೆ, ಅನ್ಯಾಯ ಅತ್ಯಾಚಾರ ಕುರಿತು ಎಳೆ ಎಳೆಯಾಗಿ ಬಿಡಿಸಲಾಯಿತು. 

ಗರಿಮಾ ಯಾತ್ರೆಯ ರಾಷ್ಟ್ರೀಯ ಸಂಚಾಲಕಿ ಕ್ರಾಂತಿ ಖೋಡೆ ಮಾತನಾಡಿ, ಮಕ್ಕಳು, ಯುವ ಪಿಳಿಗೆ ಹಾಗೂ ವಿಶೇಷವಾಗಿ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ ತಡೆಗಟ್ಟಲು ಪ್ರಬಲ ಕಾನೂನು, ಕಠಿಣ ಶಿಕ್ಷೆ ವಿಧಿಸುವುದು ಇಂದಿನ ತುತರ್ು ಅಗತ್ಯವಾಗಿದೆ. ದೇವದಾಸಿ ಹೆಸರಿನಲ್ಲಿ ಹೆಣ್ಣು ಮಕ್ಕಳ ಶೋಷಣೆ ತಡೆಗಟ್ಟಬೇಕು. ಜೊತೆಗೆ ಮಕ್ಕಳ ಮೇಲೆ ಆಗುತ್ತಿರುವ ಅನ್ಯಾಯ, ಅತ್ಯಾಚಾರ ಕುರಿತು ಯಾವುದೇ ಮುಚ್ಚು ಮರೆಯಿಲ್ಲದೆ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು. 

ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಮುಂದಾದ ಬಾವ್ರಿ ದೇವಿಯವರ ಮೇಲೆಯೇ ಅವರ ಮನೆಯವರು ಸಾಮೂಹಿಕ ಅತ್ಯಾಚಾರ ನಡೆಸಿರುವುದು ಹೇಯಕೃತ್ಯವಾಗಿದೆ. ಆದರು ಅವರು ದೃತಿಗೇಡದೆ ಅದರ ವಿರುದ್ದ ಹೋರಾಟ ನಡೆಸಿದ ಪರಿಣಾಮ ಸುಪ್ರೀಂಕೋಟರ್್ ವಿಶಾಖ ಪ್ರಕರಣದ ಕಟ್ಟು ನಿಟ್ಟಿನ ಜಾರಿಗೆ ಸೂಚನೆ ನೀಡಿದೆ. ಬಾವ್ರಿದೇವಿಯ ಹೋರಾಟದ ಸ್ಪೂತರ್ಿಯನ್ನು ಪಡೆದು ನಾವೇಲ್ಲರೂ ಹೋರಾಟವನ್ನು ತೀವ್ರಗೊಳಿಸೋಣ. ಈ ನಿಟ್ಟಿನಲ್ಲಿ ಪಣತೋಡೋಣ ಎಂದು ಕರೆ ನೀಡಿದರು.

ಬಳಿಕ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅವರು ತಾವು ಈ ಹಿಂದೆ ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿದರ್ೇಶಕಿಯಾಗಿದ್ದಾಗ ವಿಶಾಖ ಪ್ರಕರಣದ ಜಾರಿಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಮಹಿಳೆಯರು ಕೆಲಸ ನಿರ್ವಹಿಸುವ ಕಚೇರಿಗಳಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಅಭಿಯಾನದ ಸದಸ್ಯರಿಗೆ ಮಾಹಿತಿ ನೀಡಿದರು. ಅಲ್ಲದೆ, ಈ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದರು.

 ಈ ಅಭಿಯಾನದ ತಂಡದಲ್ಲಿ ಸುಮಾರು 65 ಜನರು ರಾಜಸ್ಥಾನ, ಮಧ್ಯಪ್ರದೇಶ, ಮುಂಬಯಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದರು.

ವಿಶಾಖ ಪ್ರಕರಣದ ರೂವಾರಿ ಬಾವ್ರಿದೇವಿ, ಗರಿಮಾ ಯಾತ್ರೆಯ ರಾಷ್ಟ್ರೀಯ ಸಂಚಾಲಕಿ ಕ್ರಾಂತಿ ಖೋಡೆ,  ರಾಜೇಂದ್ರ ಪಿಪಿಲೋದಿಯ, ಸಂಗೀತಾ, ಧಾರವಾಡದ ಕಿಡ್ಸ ಸಂಸ್ಥೆ ಮುಖ್ಯಸ್ಥೆ ಪಂಕಜಾ ಕಲ್ಮಠ, ಕಾರ್ಯಕ್ರಮ ನಿರ್ವಹಕಾಧಿಕಾರಿ ಅಶೋಕ ಯರಗಟ್ಟಿ, ರಾಜೇಶ್ವರಿ ಸಾಲಗಟ್ಟಿ, ಸ್ನೇಹ ಸಂಸ್ಥೆ ಶ್ರೀನಿವಾಸ ಕುಲಕಣರ್ಿ, ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ, ದರ್ಶನ ತೆರೆದ ತಂಗುದಾಣದ ಸಂಯೋಜಕ ನಾಗರಾಜ ಹೂಗಾರ ಕಾಲವಾಡ, ಆರೂಢ ಸಂಸ್ಥೆ ಅಧ್ಯಕ್ಷ ಈಶ್ವರ ಮಾಲಗಾರ,  ಫೆವಾಡರ್್ ಕೆ ಅಧ್ಯಕ್ಷೆ ಪೂಣರ್ಿಮಾ ನಾಯಿಕ, ಪ್ರಕಾಶ ಹೂಗಾರ, ಶಿಲ್ಪಾ ಪಾಟೀಲ, ನಾಗರತ್ನ ಜಡೇಜ, ಮಹಾಂತೇಶ ಎಂ.ಡಿ., ಪ್ರವೀಣ ಪಾಟೀಲ ಪಾಲ್ಗೊಂಡಿದ್ದರು.