ಹೊಲಿಗೆ ವೃತ್ತಿ ಕೌಶಲ್ಯ ತರಬೇತಿ: ಉರುಬಿನಹಟ್ಟಿ

ಲೋಕದರ್ಶನ ವರದಿ

ಬೆಳಗಾವಿ 13:  ಬಸವೇಶ್ವರ ಗ್ರಾಮ ಪರಿವರ್ತನಾ ಯುವಕ ಮಂಡಳ ಹಾಗೂ ಭಾರತ ಸರಕಾರದ ನೆಹರು ಯುವ ಕೇಂದ್ರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ನೆಹರು ಯುವ ಕೇಂದ್ರ ಲೇಖಪಾಲಕರು ಆರ್.ಆರ್. ಮುತಾಲಿಕ ದೇಸಯಿ ಆಗಮಿಸಿ ಸ್ವ ಉದ್ಯೋಗಕ್ಕಾಗಿ ತಕ್ಕ ತರಬೇತಿ ಪಡೆದು ಸ್ವಾಲಂಬನ ಜೀವನ ನಡೆಸಬೇಕೆಂದು ಸಲಹೆ ನೀಡಿದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ತೊಲಗಿಸಲು ಇಂದಿನ ಯುವ ಪೀಳಿಗೆ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕೌಶಲ್ಯ ಆಧರಿತ ಹೊಲಿಗೆ ತರಬೇತಿಯ ಮಹತ್ವ ಕುರಿತು ತಿಳಿಸಿದರು. ಬಾಳಯ್ಯಾ ಸ್ವಾಮಿಗಳು ಉರುಬಿನಹಟ್ಟಿ, ದಿವ್ಯ ಸಾನಿದ್ಯ ವಹಿಸಿದ್ದರು. ಇವರು ಕೂಡ ಯುವ ಸಂಘವು ಇದೇ ರೀತಿಯಾಗಿ ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಲು ಇಂತಹ ಕಾರ್ಯಕ್ರಮ ನಡೆಸಲಿ ಎಂದು ಹಾರೈಸಿದರು. ಅತಿಥಿಯಾಗಿ ಆಗಮಿಸಿದ ರಜನಿಕಾಂತ ಮಳವಾಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಯುವ ಸಮೂಹಕ್ಕೆ ಅನೇಕ ವಿಚಾರಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರು ಮಂಜುಳಾ ಪಾಟೀಲ, ಸವಿತಾ ಪಾಟೀಲ, ಗ್ರಾಮ ಪಂ ಸದಸ್ಯರು, ಎಮ್.ಎಸ್. ಮುಲ್ಲಾ, ಪ್ರಕಾಶ ಹೊಸಮನಿ, ಆನಂದ ಕೊಚ್ಚರಗಿ, ಪ್ರವೀಣ ಪಾಟೀಲ, ಈರಣ್ಣಾ ಎಮ್ ಪಾಟೀಲ, ಬಾಳೇಶ ಕೊಚ್ಚರಗಿ, ಅಂಬವ್ವಾ ಪಾಟೀಲ, ಸಂಘದ ಸದಸ್ಯರು ತರಬೇತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.