ಸೇವೆ ಎನ್ನುವುದು ಸಮುದಾಯದ ಹಿತಕ್ಕಾಗಿ ಮಾಡುವ ಫಲಾಪೇಕ್ಷೆ ಇಲ್ಲದ ಸತ್‌ಕ್ರಿಯ : ಶಾಂತಲಿಂಗ ಸ್ವಾಮೀಜಿ
ಹಾವೇರಿ 30: ಸೇವೆ ಎನ್ನುವುದು ಸಮುದಾಯದ ಹಿತಕ್ಕಾಗಿ ಮಾಡುವ ಫಲಾಪೇಕ್ಷೆ ಇಲ್ಲದ ಸತ್‌ಕ್ರಿಯ, ಮಾನವೀಯತೆಗೆ ಅರ್ಥ ಬರುವುದು ಸಂಪತ್ತಿನಿಂದಲ,್ಲ ಪದವಿ, ಪ್ರಶಸ್ತಿಗಳಿಂದಲ.್ಲ ಸಮರಾ್ಣ ಭಾವದ ಸೇವೆಯಿಂದ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಯಾದವ ಸೇವಾ ಫೌಂಡೇಶನ್ ಏರಿ್ಡಸಿದ್ದ ಯಾದವ ವಧು-ವರರ ಸಮಾವೇಶ ಹಾಗೂ ಫೌಂಡೇಶನ್ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಧುಗಳನ್ನು ಹುಡುಕುವುದು ಹೆತ್ತವರಿಗೆ ಅತ್ಯಂತ ಪ್ರಯಾಸದ ಕೆಲಸವಾಗಿದೆ, ಬಹುತೇಕ ಸಮುದಾಯಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ,ಈ ಸಂದರ್ಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಫೌಂಡೇಶನ್ ವಧು-ವರರನ್ನು ಕೂಡಿಸುವ ಒಂದು ಸೇತುವೆಯಾಗಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಫೌಂಡೇಶನ್ ಕಾಳಜಿ ಅನುಕರಣೆಯ ಎಂದು ಸ್ವಾಮೀಜಿ ತಿಳಿಸಿದರು.
ಯಾದವ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಹಾಲಗಿ ಅತಿಥಿಯಾಗಿ ಮಾತನಾಡಿ ಯಾದವ ಸಮಾಜದಲ್ಲಿ ಸಂಘಟನೆ ಬೇಕಾಗಿದೆ, ಸಂಘಟನ,ೆ ಶಿಕ್ಷಣ ಮತ್ತು ಹೋರಾಟ ನಮ್ಮ ಧ್ಯೇಯವಾಗಬೇಕು ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ಹೆತ್ತವರ, ವಿದ್ಯಾ ಗುರುಗಳ ಹಾಗೂ ಸಮಾಜದ ಋಣ ತೀರಿಸಬೇಕು. ನಮ್ಮ ಮಕ್ಕಳು ಕೂಡಿ ಈ ಸೇವಾ ಫೌಂಡೇಶನ್ ಹುಟ್ಟು ಹಾಕಿದ್ದಾರೆ. ಅದರ ಪ್ರಥಮ ಕಾರ್ಯಕ್ರಮವೇ ಈ ಸಮಾವೇಶವಾಗಿದೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಈ ಹುಟ್ಟು ಸಾವುಗಳ ಮಧ್ಯೆ ನಮ್ಮ ಬದುಕು ಬೇರೆಯವರಿಗೆ ಸಹ್ಯ ವಾಗಬೇಕು ಎಂದರು.
ಹುಬ್ಬಳ್ಳಿಯ ಉದ್ಯಮೆದಾರ ಬಸವರಾಜ್ ಮಾಚೇನಹಳ್ಳಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.ಫೌಂಡೇಶನ್ ಅಧ್ಯಕ್ಷ ಕೃಷ್ಣಮೂರ್ತಿ ಗೊಲ್ಲರ್ ಅಧ್ಯಕ್ಷತೆ ವಹಿಸಿದ್ದರು. ಕೋಲಾರ,ಕೊಪ್ಪಳ, ಶಿವಮೊಗ,್ಗ ವಿಜಯನಗರ, ದಾವಣಗೆರೆ, ಧಾರವಾಡ, ಯಾದಗಿರಿ, ಬೆಂಗಳೂರು,ಕಾಸರಗೋಡು ಹಾಗೂ ಹಾವೇರಿ ಜಿಲ್ಲೆಗಳನ್ನು ಒಳಗೊಂಡಂತೆ ವಧು-ವರರು ಪಾಲ್ಗೊಂಡಿದ್ದರು.
ಫೌಂಡೇಶನ್‌ನ ಸುವಿಧ,ರಾಕೇಶ್,ಭಾರತಿ,ಡಾ. ಗೋಪಾಲ್, ಶಶಾಂಕ್, ಮಾಲತೇಶ್, ಹೇಮಗಿರಿಗೌಡ, ನಾರಾಯಣ ಹಾಗೂ ಎಸ್.ಹನುಮಂತ ಗೌಡ ವೇದಿಕೆಯಲ್ಲಿದ್ದರು. ಡಾ.ಲಕ್ಷ್ಮೀಪತಿ ಗೊಲ್ಲರ ಸ್ವಾಗತಿಸಿದರು, ವಿಶ್ರುತ್‌ೆ ಎಲ್.ಜಿ,ನಿರೂಪಿಸಿದರು. ನಿವೃತ ಶಿಕ್ಷಕ ಹೆಚ್.ಕೆ.ಕೊರಡೂರ ವಂದಿಸಿದರು.