ಲೋಕದರ್ಶನ ವರದಿ
ಧಾರವಾಡ12 : ವಿಶ್ವದಲ್ಲಿರುವ ಅನೇಕ ವಿಷಯಗಳನ್ನು ಅರಿಯುವಲ್ಲಿ ನಮ್ಮ ಅಧ್ಯಯನ ಎಂದಿಗೂ ಮುಗಿಯುವದಿಲ್ಲ. ಅದು ನಿರಂತರವಾಗಿರಬೇಕು. ಎಲ್ಲರೂ ಬದುಕಿನಲ್ಲಿ ಸದಾ ವಿದ್ಯಾಥರ್ಿಗಳಾಗಿರಲು ಸಂಕಲ್ಪಿಸಿದಾಗ ಜ್ಞಾನಾರ್ಜನೆ ವ್ಯಾಪಕಗೊಳ್ಳುತ್ತದೆ ಎಂದು ನಗರದ ಚರಂತಿಮಠ ಗಾರ್ಡನ್ನಲ್ಲಿರುವ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ವೀಣಾ ಮಣಿ ಸಲಹೆ ನೀಡಿದರು.
ಅವರು ತಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ 10ನೆಯ ತರಗತಿ ವಿದ್ಯಾಥರ್ಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ವಿದ್ಯಾಥರ್ಿಗಳು ಪಠ್ಯದ ಜೊತೆಗೆ ಪಠ್ಯದ ಆಚೆಗಿನ ಎಲ್ಲ ಸಂಗತಿಗಳನ್ನೂ ಓದಿ, ಕೇಳಿ, ತಿಳಿದು ಮನವರಿಕೆ ಮಾಡಿಕೊಳ್ಳಬೇಕು. ವಿದ್ಯಾಥರ್ಿ ಜೀವನವೆಂದರೆ ಒಂದು ಬದ್ಧತೆಯ ತಪಸ್ಸು ಇದ್ದಂತೆ. ಪ್ರಥಮ ಮೈಲುಗಲ್ಲಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ತಮ್ಮ ಅಧ್ಯಯನದ ಬಲದ ಮೇಲೆ ಸಮರ್ಥವಾಗಿ ಎದುರಿಸಿ ನಿರೀಕ್ಷಿತ ಯಶಸ್ಸನ್ನು ಸಂಪಾದಿಸಬೇಕು ಎಂದರು.
ಒಬ್ಬ ವಿದ್ಯಾಥರ್ಿಯ ಭವಿಷ್ಯವನ್ನು ರೂಪಿಸುವಲ್ಲಿ ಪಾಲಕರ ತ್ಯಾಗ, ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾಥರ್ಿಗಳ ಪ್ರಯತ್ನಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.
ಈ ಮೂರು ಸಂಗತಿಗಳಲ್ಲಿ ಯಾವುದಾದರೂ ಒಂದು ಅಂಶವು ಕಡಿಮೆಯಾಗದಂತೆ ನೋಡಿಕೊಂಡು ಮುನ್ನಡೆಯಬೇಕು. ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯತ್ತಿಗಾಗಿ ಶಾಲೆಗಳೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕೆಂದು ಮಣಿ ಹೇಳಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ಗೌಡಪ್ಪಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾಥರ್ಿಗಳಿಗೆ ಶುಭ ಕೋರಿದರು. ವಿದ್ಯಾಥರ್ಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪಾಲಕರು ಶಾಲೆಯ ಹಾಗೂ ಶಿಕ್ಷಕರ ಪರಿಶ್ರಮವನ್ನು ಮೆಚ್ಚಿದರು. ವಿದ್ಯಾಥರ್ಿಗಳು, ಶಾಲಾ ಸಿಬ್ಬಂದಿ, ಪಾಲಕರು ಸೇರಿಕೊಂಡು ವಿದ್ಯಾಥರ್ಿಗಳೆಲ್ಲರ ಪರೀಕ್ಷಾ ಸಾಧನೆಯ ಕುರಿತು ಚಚರ್ೆ ನಡೆಸಲಾಯಿತು.