ಜಮಾದಾರಗೆ ಸೇವಾ ನಿವೃತ್ತಿ

ಲೋಕದರ್ಶನ ವರದಿ ಗೋಕಾಕ 09: ತಾಲೂಕಿನ ಅರಭಾಂವಿ ರೈತಸಂಪರ್ಕ ಕೇಂದ್ರದ ಸಹಾಯ ಕೃಷಿ ಅಧಿಕಾರಿ ಎಚ.ಕೆ. ಜಮಾದಾರ ಇವರು ದಿ. 31ರಂದು ಸೇವಾ ನಿವೃತ್ತಿ ಹೊಂದಿದರು. ಜಲಾನಿ ಮೋಕಾಶಿ, ಜಂಟಿ ಕೃಷಿ ನಿದರ್ೇಶಕರು ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಎಚ್.ಡಿ.ಕೊಳೆಕರ, ಉಪಕೃಷಿ ನಿದರ್ೇಶಕರು ಬೆಳಗಾವಿ ಹಾಗೂ ಎಲ್.ಬಿ. ರೂಡಗಿ ಉಪಕೃಷಿ ನಿದರ್ೆಶಕರು ಚಿಕ್ಕೋಡಿ ವಿಭಾಗ ಇವರ ಸಮ್ಮುಖದಲ್ಲಿ ನಡೆಯಿತು. ಈ ಸಭಾರಂಭದಲ್ಲಿ ಹುಕ್ಕೇರಿ, ಚಿಕ್ಕೋಡಿ, ಖಾನಾಪೂರ, ಗೋಕಾಕ ತಾಲೂಕಿನ ಸಹಾಯಕ ಕೃಷಿ ನಿದರ್ೇಶಕರು ಮತ್ತು ಜಾಗೃತದಳ ವಿಭಾಗದ ಸಹಾಯಕ ನಿದರ್ೇಶಕರು ಮತ್ತು ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಜಂಟಿ ಕೃಷಿ ನಿದರ್ೇಶಕರ ಕಛೇರಿಯ ಇಎಸ್ಟಿ ವಿಭಾಗದ ಸಿಬ್ಬಂದಿ ವರ್ಗ ಹಾಗೂ ಉಪ ಕೃಷಿ ನಿದರ್ೇಶಕರ ಕಚೇರಿಯ ಇಎಸ್ಟಿ ವಿಭಾಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಚ್, ಕೆ. ಜಮಾದಾರ ಅವರ ನಿವೃತ್ತಿ ಜೀವನ ಸುಖ, ಸಮಾಧಾನದಿಂದ ಕೂಡಿರಲಿ, ಭಗವಂತ ಅವರಿಗೆ ಆಯುರಾರೋಗ್ಯ ಭಾಗ್ಯ ಕಲ್ಪಿಸಲಿ. ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕತನದಿಂದ ಕಾರ್ಯ ನಿರ್ವಹಿಸಿದ್ದ ಅವರು ಮತ್ತೊಬ್ಬ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.