ಮಹಿಳೆ ಮತ್ತು ಮಕ್ಕಳಲ್ಲಿ ಕಂಡು ಬರುವ ರಕ್ತಹೀನತೆ ಹೋಗಲಾಡಿಸಲು ಪೌಷ್ಠಿಕ ಆಹಾರ ಸೇವೆಸಿ

Serve nutritious food to prevent anemia in women and children

ಮಹಿಳೆ ಮತ್ತು ಮಕ್ಕಳಲ್ಲಿ ಕಂಡು ಬರುವ ರಕ್ತಹೀನತೆ ಹೋಗಲಾಡಿಸಲು ಪೌಷ್ಠಿಕ ಆಹಾರ ಸೇವೆಸಿ 

ಹಂಪಿ 16: ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ 16ರಂದು ಬೆಳಿಗ್ಗೆ 11.30ಕ್ಕೆ ನಡೆದ ಪಾಕ್ಷಿಕ ಮಾತು ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಆರೈಕೆಯಲ್ಲಿ ಪೋಷಕರ ಪಾತ್ರ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ರಾಜರಾಜೇಶ್ವರಿ ಅವರು ನೀಡಿದರು. 

ಮಹಿಳೆ ಮತ್ತು ಮಕ್ಕಳ ಆರೋಗ್ಯವೇ ಸಂಪತ್ತು ಎಂದರು. ಕೌಟುಂಬಿಕ ಕಲಹಗಳು ಇತ್ತೀಚೆಗೆ ತೀವ್ರವಾಗುತ್ತಿವೆ. ಇಂದು ಕೆಲ ಮಹಿಳೆಯರು ಮತ್ತು ಮಕ್ಕಳು ಅಪೌಷ್ಠಿಕತೆ, ರಕ್ತಹೀನತೆ, ಹಸಿವು, ಚರ್ಮರೋಗ, ಶೀತಜ್ವರ, ನೆಗಡಿ, ಕೆಮ್ಮು, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದಾಗ ಇವೆಲ್ಲ ಉಪಶಮನವಾಗುತ್ತವೆ. ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದರು. ಹಾಗಾಗಿ ತರಕಾರಿ, ವಿವಿಧ ಸೊಪ್ಪುಗಳು, ಮೊಳಕೆ ಹೊಡೆದ ಕಾಳುಗಳ ಸೇವೆ, ಮಜ್ಜಿಗೆ, ಮೊಸರು, ಹಣ್ಣು ಹಂಪಲುಗಳು, ರಾಗಿ, ಜೋಳದಿಂದ ಸಿದ್ಧಪಡಿಸಿದ ರೊಟ್ಟಿ, ಮುದ್ದೆತಿನ್ನುವುದರ ಮೂಲಕ ನಮ್ಮ ಆರೋಗ್ಯವನ್ನು ನಾವು ಹಿಡಿತದಲ್ಲಿಟ್ಟುಕೊಳ್ಳಬಹುದೆಂದು ತಿಳಿಸಿದರು. ಯಾವ ವೈದ್ಯರು ಕೆಟ್ಟವರಲ್ಲ. ರೋಗಿಯ ಆರೋಗ್ಯ, ಮಿತಿ ಮೀರಿದಾಗ ನಾವು ಏನು ಮಾಡಲು ಸಾಧ್ಯವಿಲ್ಲ. ಯಾವುದೇ ರೋಗ ಬಂದಾಗ ತಕ್ಷಣ ನಾವು ವೈದ್ಯರನ್ನು ಸಂಪರ್ಕಿಸಬೇಕೆಂದು ತಿಳಿ ಹೇಳಿದರು. ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಮತ್ತು ಮಹಿಳೆಯರು, ಪೌಷ್ಠಿಕ ಆಹಾರ ಸೇವೆಸುವುದರಿಂದ ಅವರ ದೇಹ ಸದೃಢವಾಗುತ್ತದೆಂದು ತಿಳಿಸಿದರು. 

ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ತಾರಿಹಳ್ಳಿ ಹನುಮಂತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ.ಎಲ್‌.ಶ್ರೀನಿವಾಸ ಅವರು ಎಲ್ಲರನ್ನು ಸ್ವಾಗತಿಸಿದರು. ಯೋಗ ಅಧ್ಯಯನದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಚಾಲಕರಾದ ಡಾ.ಶಿವರಾಜ ಎಸ್‌.ವಂದಿಸಿದರು.