ಕ್ರೀಡೆಯಲ್ಲಿ ಜಾತಿ ತರುವ ಹುನ್ನಾರಕ್ರೀಡಾಪಟು ಬಲ್ಲೆ ತೀವ್ರ ಕಳವಳ
ಕೊಪ್ಪಳ 16 : ಈಗಿನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಜಾತಿ ವ್ಯವಸ್ಥೆ ಮಿತಿಮೀರಿ ತನ್ನ ಕುತಂತ್ರದ ಕೆಲಸ ಮುಂದುವರಿಸಿದೆ, ಆದರೆ ಕ್ರೀಡಾ ಕ್ಷೇತ್ರ ಇದರಿಂದ ಹೊರತಾಗಿದೆ ಕ್ರೀಡೆಯಲ್ಲಿ ಯಾವುದೇ ರೀತಿಯ ಜಾತಿ ತಾರತಮ್ಯ ಇನ್ನುವರಿಗೆ ನೋಡಲು ಸಿಕ್ಕಿಲ್ಲ ,ಇಂತಹ ಉತ್ತಮ ಕ್ಷೇತ್ರದಲ್ಲಿ ಜಾತಿ ತರುವ ಮತ್ತು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿರುವ ಕೆಲ ಮಾಧ್ಯಮದ ಕುತಂತ್ರದ ಪ್ರಕಟಣೆಗೆ ಇಲ್ಲಿನ ಕ್ರೀಡಾಪಟು ಸಯ್ಯದ್ ಮೆಹಮೂದ ಹುಸೇನಿ ಬಲ್ಲೆ ತೀವ್ರ ಕಳವಳ ವ್ಯಕ್ತಪಡಿಸಿ ಪ್ರಕಟಣೆ ಹೇಳಿಕೆಗೆ ಖಂಡಿಸಿದ್ದಾರೆ, ಈ ಕುರಿತು ಹೇಳಿಕೆ ನೀಡಿದ ಅವರು ಕೊಪ್ಪಳ ಶಾಂತಿಯ ತವರೂರು ಇಲ್ಲಿ ಯಾವುದೇ ರೀತಿಯ ಭೇದ ಭಾವ ಇಲ್ಲದೆ ಎಲ್ಲರೂ ಕ್ರೀಡಾಸಕ್ತಿ ಬೆಳೆಸಿಕೊಂಡು ಉತ್ತಮ ಕ್ರೀಡಪಟುಗಳಾಗಿ ಯುವಸಮೋಹ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡುತ್ತಾ ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಶ್ರಮಿಸುತ್ತಿರುವ ಇಂಥ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಕ್ರೀಡಾ ಆಸಕ್ತಿ ಮತ್ತು ಕ್ರೀಡಾಪಟುಗಳಲ್ಲಿ ಗೊಂದಲ ಸೃಷ್ಟಿಸುವ ಇಂತಹ ಹೇಳಿಕೆಗಳಿಗೆ ಯಾರು ಕಿವಿ ಕೊಡಬೇಡಿ ಎಂದು ಮನವಿ ಮಾಡಿದ ಅವರು ಕ್ಷುಲ್ಲಕ ಮತ್ತು ಕುತಂತ್ರದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಪತ್ರಿಕೆ ಹೇಳಿಕೆ ಬಗ್ಗೆ ಸೈಯದ್ ಮೆಹಮೂದ ಹುಸೇನಿ ಬಲ್ಲೆ ಖಂಡಿಸಿದ್ದಾರೆ,