ಬೆಳಗಾವಿ 08: ವಿವಿಧ ರಾಜ್ಯಗಳಲ್ಲಿ ಹಿರಿಯ ನಾಗರಿಕರಿಗೆ ಸಿಗುತ್ತಿರುವ ಸೌಲಭ್ಯಗಳು ಕನರ್ಾಟಕದಲ್ಲಿ ಸಿಗುತ್ತಿಲ್ಲ. ಹಾಗಾಗಿ ಬೇರೆ ರಾಜ್ಯಗಳ ಮಾದರಿಯಲ್ಲಿ ಕನರ್ಾಟಕದಲ್ಲಿಯೂ ಹಿರಿಯ ನಾಗರಿಕರಿಗೆ ಎಲ್ಲ ಸವಲತ್ತು ದೊರಕಬೇಕೆಂದು ಹಿರಿಯ ನಾಗರಿಕರ ಸಂಘದ ರಾಜ್ಯ ಅಧ್ಯಕ್ಷ ವಿ.ವಾಯ ಬೇಂಡಿಗೇರಿ ಅವರು ಆಗ್ರಹಿಸಿದರು.
ಇತ್ತೀಚಿಗೆ ಬೆಳಗಾವಿ ನಗರದ ಬಸವನ ಕುಡಚಿಯ ದೇವರಾಜ ಅರಸ ಬಡಾವನೆಯ ಶಿವಬಸವ ಶಿವಾಲಯ ಆವರಣದಲ್ಲಿ ಬಡಾವನೆಯ ಹಿರಿಯ ನಾಗರಿಕ ಡಿ.ಎಸ್ ಹವಾಲ್ದಾರ ನಿವೃತ್ ಇಂಜಿನೀಯರ್ ಇವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಭೆಯಲ್ಲಿ ಹಿರಿಯ ನಾಗರಿಕ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಎಸ್ ಮುದಕವಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ದೇಯೊದ್ದೇಶಗಳ ಕುರಿತು ಮಾತನಾಡಿದರು ಮತ್ತು ಹಿರಿಯ ನಾಗರಿಕರ ನೊವೀಗೆ ಸ್ಪಂದನೆ ನೀಡಲು ವಿನಂತಿಸಿದರು. ಸಂಘದ ಕಾರ್ಯದಶರ್ಿ ಅಶೋಕ ಮಳಗಲಿ ಮಾತನಾಡಿ ಸಂಘಟಣೆ ಇಲ್ಲದಿದ್ದರೆ ನಮ್ಮ ಬೇಡಿಕೆಗಳು ಸಿಗುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಸಂಘಟನೆಯಿಂದ ಇದ್ದರೆ ಮಾತ್ರ ಸಾಧ್ಯ ಎಂದು ತಿಳಿಸಿದರು.
ರಾಮು ತಟಪತಿಯವರು ಮಾತನಾಡಿ ಹಿರಿಯ ನಾಗರೀಕರಿಗೆ ಸೇವಾ ಸೌಲಭ್ಯಗಳ ಕುರಿತು,ಎಸ್.ಜಿ. ಸಿದ್ನಾಳ ಉಪಾಧ್ಯಕ್ಷರು ಅವರು ಕೇಂದ್ರ ಸಕರ್ಾರ ರಾಜ್ಯ ಸಕರ್ಾರದಿಂದ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯಗಳ ಕುರಿತು, ಜಿಲ್ಲಾದ್ಯಕ್ಷ ಡಾ. ಗೊಮಾಡಿ ಅವರು ಬೆಳಗಾವಿ ಜಿಲ್ಲೆಯ ಎಲ್ಲಾ ತಾಲುಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ವಿಸ್ತರಿಸುವ ಕುರಿತು, ರಾಜ್ಯ ಖಜಾಂಚಿ ಬಾಪಟ ಮತ್ತು ಪ್ರಸಾದ ಹೀರೇಮಠರವರು ಸಮಾಜ ಸೇವೆಗಳ ಮನೋಭಾವನೆ ಕುರಿತು, ಬಸವರಾಜ.ಚಟ್ಟರ ಆನಂದ ಕಕರ್ಿ ಸಂಘದ ಸಂಘಟನೆ ಬಗ್ಗೆ ತಿಳಿಸಿದರು.
ಬಡಾವಣೆಯ ಹಿರಿಯ ನಾಗರೀಕರಾದ ಎಸ್.ಸಿ. ಪಟ್ಟಣ,ಆರ್.ಎಂ.ಗುಮ್ಮಗೊಳ,ಬಿ.ಎಮ್.ಹವಾಣಿ, ಸಿ.ಖಿ.ಗುರುನಗೌಡರ, ಬಿ.ಪಿ.ರಣಗಟ್ಟಿಮಠ, ಬಿ.ಜಿ.ಮಠದ, ಮೋಹನ ಸಕ್ರಿ, ಆರ್.ಎಮ್ ಚೌಲಿಗೇರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಆರ್.ಎಮ್. ಚಲವಾದಿ, ಎಸ್.ಎಸ್.ಸವದತ್ತಿ, ಎಮ್.ಬಿ.ಮಡಿವಾಳರ, ವಿ.ಎಸ್.ಕಕರ್ಿ, ಐ.ಎಮ್.ಬೊರಣ್ಣವರ ಉಪಸ್ಥಿತರಿದ್ದರು.ಶಂಕರ ಮೈಲಾರಿಯವರು ಪ್ರಾರ್ಥನೆ ನಡೆಸಿದರು. ವ್ಹಿ.ಬಿ.ಮಡಿವಾಳ ಸ್ವಾಗತಿಸಿದರು.