ಹಿರಿಯ ಜೀವಿ ಎಸ್. ಎ. ವಿಭೂತಿ ಅವರಿಗೆ ಸನ್ಮಾನ

ಲೋಕದರ್ಶನ ವರದಿ

ಬೆಳಗಾವಿ 13: ಶತಕದ ಅಂಚಿನಲ್ಲಿರುವ ಕ್ರೀಯಾಶೀಲ ವ್ಯಕ್ತಿತ್ವದ, ಸರಳ ಸ್ವಭಾವದ, ಹಿರಿಯ ಜೀವಿ ಎಸ್. . ವಿಭೂತಿ ಯವರನ್ನು ಉತ್ತರ ಕನರ್ಾಟಕ ವಿಕಾಸ ವೇದಿಕೆ ಮತ್ತು ನಿವೃತ್ತ ನೌಕರರ ಸಂಘದವತಿಯಿಂದ ಅವರ ನಿವಾಸದಲ್ಲಿಯೇ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

                ಸಂದರ್ಭದಲ್ಲಿ ವಿಭೂತಿಯವರನ್ನು ಸನ್ಮಾನಿಸಿ ಮಾತನಾಡಿದ ಉತ್ತರ ಕನರ್ಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಆಯುಷ್ಯ ಮತ್ತು ಆರೋಗ್ಯ ದೇವರ ದೇಣಿಗೆಯಾಗಿದ್ದರೂ ಸಹ ಶಿಸ್ತುಬದ್ಧ ಕ್ರೀಯಾಶೀಲ ಜೀವನಶೈಲಿಯಿಂದ ಅವುಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಮನುಷ್ಯನಿಗೆ ಇದ್ದು, ಎಸ್.. ವಿಭೂತಿಯವರು ಕಾಯಕದ ಮೇಲಿನ ಶ್ರದ್ಧೆ ಮತ್ತು ನಿಷ್ಠೆಯಿಂದ ತಮ್ಮ ಇಂದಿನ ಶತಮಾನದ ಅಂಚಿನ ಆಯುಷ್ಯದಲ್ಲಿಯೂ ಸಹ ಕೆ.ಎಲ್.. ಸಂಸ್ಥೆಯಂತಹ ಮಹಾನ್ ಸಂಸ್ಥೆಯಲ್ಲಿ ಇಂದೂ ಸಹ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ. ತಮ್ಮ ಬದುಕಿನುದ್ದಕ್ಕೂ  ಬಿ.ಡಿ.ಸಿ.ಸಿ. ಬ್ಯಾಂಕ ಹಾಗೂ ಕೆ.ಎಲ್.. ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜಮುಖಿಯಾಗಿ ಇನ್ನೂಬ್ಬರ ಒಳತಿಗಾಗಿ ಕಾರ್ಯನಿರ್ವಹಿಸಿದ ಅಂತಹ ಹಿರಿಯರ ಜೀವನ ಶೈಲಿಯೆ ಯುವ ಪಿಳಿಗೆಗೆ ಮಾರ್ಗದಶರ್ಿ ಎಂದು ಹೇಳಿದರು.

                ಪ್ರಸ್ತಾವಿಕವಾಗಿ ಬಸವರಾಜ ಸೊಪ್ಪಿಮಠ ಮಾತನಾಡಿ ಎಸ್.. ವಿಭೂತಿಯವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ಸಾಹಿತಿ ಜಿ.ಜಿ. ಉಪ್ಪಲದ್ದಿನ್ನಿ ವಿಭೂತಿಯವರ ಕುರಿತು ಮಾತನಾಡಿ ಅವರ ಜೀವನದ ಕುರಿತು ಸ್ಮರಣ ಸಂಚಿಕೆ ಈಗಾಗಲೇ ಬಿಡುಗಡೆಯಾಗಿರುವದು ಅಭಿನಂದನೀವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್. ಆರ್. ಧಗರ್ೆ, ರಾಜುಗೌಡ ನಿವರ್ಾಣಿ, ಬಸನಗೌಡ ನಿವರ್ಾಣಿ, ಎಮ್.ವಿ. ತಾಂವಶಿ, ಆರ್.ಕೆ. ಮಠಪತಿ, ಶಂಕರಯ್ಯ ಪೂಜಾರಿ, ಸುಭಾಸ ಘಿವಾರಿ, ಆರ್.ಎಸ್. ಚಾಪಗಾಂವಿ, ವೀರಯ್ಯ ಕಡಪಟ್ಟಿ, ಸಂಗಪ್ಪ ಅಂಗಡಿ, ಎಸ್.ಬಿ. ಸವದತ್ತಿ, ಅಪ್ಪಾಸಾಹೇಬ ವಿಭೂತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.