ಹಿರಿಯ ನಾಗರಿಕರು ಜೀವನೋತ್ಸವ ಕಳೆದುಕೊಳ್ಳಬಾರದು : ಸಲೀಲಾ ಭಟ್

ಲೋಕದರ್ಶನ ವರದಿ

ಕಾರವಾರ 16  : ಹಿರಿಯ ನಾಗರಿಕರು ತಮಗೆ ವಯಸ್ಸಾಯಿತೆಂದು ಜೀವನೋತ್ಸಾವನ್ನು ಕಳೆದುಕೊಳ್ಳದೇ ಸ್ಪೂತರ್ಿದಾಯಕ ಜೀವನ ನಡೆಸಬೇಕು ಎಂದು ಹಿರಿಯ ನಾಗರಿಕರು ಹಾಗೂ ನಿವೃತ್ತ ಶಾಲಾ ಶಿಕ್ಷಕರಾದ ಸಲೀಲಾ ಭಟ್  ಹೇಳಿದರು.

ಅವರು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ಸಕರ್ಾರದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯರು ವಾಕ್ಯ ಗುರುವಾಕ್ಯವಿದ್ದಂತೆ ಕಿರಿಯರು ಹಿರಿಯರಿಂದ ಜೀವನಾನುಭವದ ಪಾಠವನ್ನು ಕೇಳಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರನ್ನು ಕಡೆಗಣಿಸುವಂತಹ ದಿನಮಾನಗಳಲ್ಲಿ ಹಿರಿಯ ನಾಗರಿಕರ ದಿನಾಚರಣೆ ಮತ್ತು ಅವರನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನಿಯವಾಗಿದೆ ಎಂದರು. ನಮ್ಮ ಮಕ್ಕಳು ಮಾಡಬೇಕಾದ ಕೆಲಸವನ್ನು ರಾಜ್ಯ ಸಕರ್ಾರ ಮಾಡುತ್ತಿದೆ ಎಂದ ಅವರು ಸಕರ್ಾರ ನಡೆಸುವವರಿಗೆ ಮಾನವೀಯತೆ ಅಗತ್ಯ. ಅದು ಕನರ್ಾಟಕ ರಾಜ್ಯದಲ್ಲಿ ಕಾಣುತ್ತಿದೆ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಇತಿಹಾಸ ಪ್ರಾದ್ಯಾಪಕ ಸುರೇಶ ಕಡೆಮನೆ ಮಾತನಾಡಿ ಇಂದಿನ ದಿನಮಾನಗಳಲ್ಲಿ ನೈತಿಕತೆ ಎಂಬುದು ನಶಿಸಿ ಹೊಗಿದೆ.  ತಂದೆ ತಾಯಂದಿರು ಮಕ್ಕಳಿಗೆ ವಿದ್ಯೆಯನ್ನು ನೀಡುವುದರ ಜತೆಗೆ ಮಾನವೀಯ ಗುಣಗಳನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು. ಹಿರಿಯರು ತಮ್ಮಲ್ಲಿರುವಂತಹ ಸಂಸ್ಕೃತಿಯನ್ನು ತಮ್ಮ ಮುಂದಿನ ಪಿಳಿಗೆಗೆ ಮತ್ತು ಕಿರಿಯರಿಗೆ ಧಾರೆ ಎರೆಯುವಂತವರಾಗಿರುತ್ತಾರೆ. ಹಿರಿಯರನ್ನು  ಸದಾ ಗೌರವದಿಂದ ಕಾಣಬೇಕು ಎಂದು ತಿಳಿಸಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೇಶಕ ರಾಜೇಂದ್ರ ಬೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಸತೀಶ ನಾಯ್ಕ ಸ್ವಾಗತಿಸಿದರು. ಸಮಾಜಸೇವೆ, ಕಲೆ ಸಂಸ್ಕೃತಿ ಸಾಹಿತ್ಯದಂತಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 11ಮಂದಿ ಹಿರಿಯ ನಾಗರಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಸ್ಪಧರ್ೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ನಾಗರಿಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿರಿಯನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ  ಉಪಸ್ಥಿತರಿದ್ದರು.